ಕೆಪಿಎಸ್‌ಸಿಗೆ ಕೆಎಟಿ ನೋಟಿಸ್

Share

ಕೆಪಿಎಸ್‌ಸಿಗೆ ಕೆಎಟಿ ನೋಟಿಸ್

by ಕೆಂಧೂಳಿ

ಬೆಂಗಳೂರು,ಜ,೨೯-ಪರಿಕ್ಷೆಯಲ್ಲಿ ದೋಷಪೂರಿತ ಕಂಡುಬಂದಿರುವ ಕಾರಣ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ಗೆ ಕರ್ನಾಟಕ ನ್ಯಾಯಮಂಡಳಿ ನೊಟೀಸ್ ಜಾರಿಮಾಡಿದೆ.
೨೦೨೪ರ ಡಿಸೆಂಬರ್ ೨೯ ರಂದು ೩೮೪ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಪೂರ್ವಭಾವಿ ಪರೀಕ್ಷೆ ನಡೆಸಿತ್ತು ಇದರಲ್ಲಿ ದೋಷಪೂರಿತ ಕಂಡುಬಂದಿರುವ ಕಾರಣ ಪರಿಕ್ಷೆಯನ್ನು ರದ್ದುಪಡಿಸಬೇಕು ಎಂದು ಕೋರಿ ವಿದ್ಯಾರ್ಥಿಗಳು ಕರ್ನಾಟಕ ನ್ಯಯಮಂಡಳಿ (ಕೆಎಟಿ)ಗೆ ಮೊರ ಹೋಗಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಯಾಂಗ ಸದಸ್ಯ ಎಸ್.ವೈ ವಟವಟಿ ಮತ್ತು ಆಡಳಿತ ಸದಸ್ಯೆ ಅಮಿತಾ ಪ್ರಸಾದ್ ಅವರಿದ್ದ ಪೀಠ ವಿಚಾರಣೆ ನಡೆಸಿತ್ತು. ವಾದ-ಪ್ರತಿವಾದ ಆಲಿಸಿದ ಬಳಿಕ ಪೀಠ ಕೆಪಿಎಸ್‌ಸಿ ಅಭಿಪ್ರಾಯ ಆಲಿಸದೆ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಆಜ್ಯ ಸರ್ಕಾರ ಮತ್ತು ಕೆಪಿಎಸ್‌ಸಿ ಪರ ವಕೀಲರಿಗೆ ನೋಟಿಸ್ ಜಾರಿಗಳಿಸಿ ಆದೇಸಿತು.
ಪರೀಕ್ಷೆಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕೆಪಿಎಸ್‌ಸಿಗೆ ನಿರ್ದೇಶಿಸಿರುವ ಪೀಠವು ವಿಚಾರಣೆಯನ್ನು ಇದೇ ೩೦ಕ್ಕೆ ಮುಂದೂಡಿದೆ.
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಲೋಪವಾಗಿ ಎಂದು ಕೃಷ್ಣ ಮತ್ತಿತರರು ಅರ್ಜಿ ಸಲ್ಲಿಸಿದ್ದರು ಈ ಅರ್ಜಿಯ ವಿಚಾರಣೆ ಮತ್ತೆ ನಡೆಯಲಿದೆ.

Girl in a jacket
error: Content is protected !!