ದೇವಗೌಡರ ೮೮ ನೇ ಜನ್ಮದಿನಕ್ಕೆ ಶುಭಕೋರಿದ ಗಣ್ಯರು

Share

ಬೆಂಗಳೂರು,ಮೇ೧೮:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದು ೮೮ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.ಜನ್ಮದಿನದ ಅಂಗವಾಗಿ ಪದ್ಮನಾಭನಗರದಲ್ಲಿರುವ ಅವರ ನಿವಾಸದಲ್ಲಿ ಅವರ ಕುಟುಂಬ ವರ್ಗ ಸರಳವಾಗಿ ಜನ್ಮದಿನವನ್ನು ಆಚರಿಸಿದರು.
ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆಯೇ ದೂರವಾಣಿ ಕರೆ ಮಾಡಿ ಜನ್ಮದಿನದ ಶುಭ ಹಾರೈಸಿದ್ದಾರೆ.
ಇನ್ನೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ,ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹಾಗೂ ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಸಂಸದ ಬಿ.ವೈ.ರಾಘವೇಂದ್ರ, ಪ್ರತಾಪ ಸಿಂಹ, ಸಂಸದೆ ಸುಮಲತಾ ಅಂಬರೀಶ್, ಸಚಿವರಾದ ಡಾ.ಕೆ.ಸುಧಾಕರ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಬಿ.ಸಿ.ಪಾಟೀಲ ಸೇರಿದಂತೆ ಹಲವು ಟ್ವಿಟರ್‌ನಲ್ಲಿ ಶುಭ ಕೋರಿದ್ದಾರೆ
‘ಹಿರಿಯರು ಮತ್ತು ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಪಕ್ಷದ ಹಿರಿಯ ನಾಯಕ ಎಚ್.ಡಿ.ದೇವೇಗೌಡರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಆಯುಷ್ಯ, ಆರೋಗ್ಯ ನಿಮ್ಮದಾಗಲಿ. ರಾಜ್ಯ ಮತ್ತು ದೇಶಕ್ಕೆ ನಿಮ್ಮ ಅನುಭವದ ಮಾರ್ಗದರ್ಶನ ಸದಾ ಸಿಗಲಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ
ಶೂನ್ಯದಿಂದ ಮೇಲೆದ್ದು ಬರುವ, ಕನ್ನಡದ ನೆಲದಿಂದ ವಿಶಾಲ ರಾಷ್ಟ್ರ ಆಳುವ, ಕನ್ನಡ, ಕರ್ನಾಟಕಕ್ಕಾಗಿ ಬೆಟ್ಟದಂತೆ ನಿಲ್ಲುವ ಕರ್ನಾಟಕದ ವೀರ ಪರಂಪರೆಗೆ ಹೆಗ್ಗುರುತಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಅಪಾರ ಅನುಭವ ನಮಗೆ ಸದಾ ದಾರಿ ದೀಪ. ನಿಮ್ಮ ಅಚಲ ಆತ್ಮವಿಶ್ವಾಸ ನಮಗೆ ಪ್ರೇರಣದಾಯಕ’ ಎಂದು ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಹಲವಾರು ರಾಜಕೀಯ ನಾಯಕರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಕೂಡ ಅವರಿಗೆ ಶುಭ ಕೋರಿದ್ದಾರೆ.

Girl in a jacket
error: Content is protected !!