-ತುರುವನೂರು ಮಂಜುನಾಥ
“೭೫ ವರ್ಷದಿಂದ ಕಾಂಗ್ರೆಸ್, ಬಿಜೆಪಿ ಸರ್ಕಾರ ನೋಡಿದ್ದೀರಿ. ನಗೆ ೨೦ ವರ್ಷ ಅಧಿಕಾರ ಬೇಡ, ೫ ವರ್ಷ ಕೊಡಿ ಸಾಕು. ಒಂದು ಚುನಾವಣೆ ಪರೀಕ್ಷೆ ಮಾಡಿ. ನಿಮ್ಮ ಬದುಕನ್ನು ಒಳ್ಳೆಯ ರೀತಿಯಲ್ಲಿ ಮಾಡುವೆ. ಇನ್ನೊಬ್ಬರ ಜೊತೆ ಸರ್ಕಾರ ಮಾಡೋದಕ್ಕೆ ಆಗಲ್ಲ. ಸ್ವತಂತ್ರ ಸರ್ಕಾರ ಕೊಡಿ. ಯಾವ ಸರ್ಕಾರಕ್ಕೂ ಅರ್ಜಿ ಕೊಡದ ರೀತಿಯಲ್ಲಿ ಯೋಜನೆಗಳನ್ನು ಸಿದ್ಧ ಮಾಡಿದ್ದೇನೆ”
ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೊರಣಗಿ ಗ್ರಾಮದಲ್ಲಿ ರಾಜ್ಯದ ಜನರಿಗೆ ಮನವಿ ಮಾಡಿಕೊಂಡ ಪರಿ ಇದು.
ನಿಜ! ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಗಳಾದವರು ಎರಡು ಬಾರಿಯೂ ಎರಡು ವರ್ಷಗಳ ಕಾಲ ಅಂದರೆ ಒಟ್ಟು ನಾಲ್ಕು ವರ್ಷ ಸಿಎಂ ಆಗಿ ಅಧಿಕಾರ ಅನುಭವಿಸಿದವರು ಮೊದಲು ಬಿಜೆಪಿ ಜೊತೆಗೆ ಅಧಿಕಾರಿ ಹಂಚಿಕೊಂಡಾಗ ನಿಜಕ್ಕೂ ಜನಪರ ಕಾರ್ಯಗಳನ್ನು ಕೈಗೊಂಡವರು ಅದರಲ್ಲಿ ಎರಡು ಮಾತಿಲ್ಲ ಆದರೆ ಬಿಜೆಪಿಗೆ ಅಧಿಕಾರ ಕೊಡುವಾಗ ಮಾತು ತಪ್ಪಿದವರು ಹಾಗಾಗಿಯೇ ಪಕ್ಷ ಮತ್ತಷ್ಟು ಪಾತಾಳಕ್ಕೆ ಇಳಿಯಿತು. ಆದಾದ ನಂತರ ಮತ್ತೇ ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಸೇರಿ ಅಧಿಕಾರ ಹಿಡಿದ ಕುಮಾರಸ್ವಾಮಿ ನಡೆದುಕೊಂಡ ರೀತಿ ಇದೆಯಲ್ಲ ಅದು ನಿಜಕ್ಕೂ ಒಂದು ರೀತಿ ಉಡಾಫೆಯಂತಿತ್ತು.
ಎಲ್ಲದಕ್ಕೂ ಕಾಂಗ್ರೆಸ್ಪಕ್ಷದ ಮತ್ತು ಆ ನಾಯಕರ ಮೇಲೆ ಬೊಟ್ಟು ಮಾಡಿ ತೋರಿಸುವ ಮೂಲಕ ಒಂದೂವರೆ ವರ್ಷ ಜನಪರ ಕಾರ್ಯಕ್ರಮಗಳ ಬದಲು ಕಾರಣಗಳನ್ನು ಹೇಳುತ್ತಲೇ ಕಾಲಕಳೆದರು ಇದು ಜನರಿಗೆ ಇಷ್ಟವಾಗಲಿಲ್ಲ ,ಬದಲಿಗೆ ಆಡಳಿತ ನೀಡುವುದಕ್ಕಿಂತಲೂ ಸ್ವಂತ ಹಿತಾಸಕ್ತಿಗಳತ್ತ ಗಮನಹರಿಸುತ್ತಾ ಹೋದರು ಇದು ಉಳಿದ ನಾಯಕರಿಗೆ ಸಚಿವ ಸಂಪುಟದ ಸಹದ್ಯೋಗಿಗಳಿಗೂ ಸೂಕ್ತವೆನಿಸಲಿಲ್ಲ ಹೀಗಾಗಿ ಒಳಗೊಳಗೆ ಅವರನ್ನು ಕಿತ್ತೊಗಿಯುವ ತಂತ್ರಗಳನ್ನು ಮಾಡಿ ಕೊನೆಗೆ ೧೯ ಮಂದಿ ರಾಜೀನಾಮೆ ನೀಡುವ ಮೂಲಕ ಸರ್ಕಾರವನ್ನು ಪತನಗೊಳಿಸಿದರು.
ಅದೇ ಹಳೆ ಕತೆಯ ತಂತ್ರ
ನಾಯಕರನ್ನೆಲ್ಲ ಹೊರಗಟ್ಟಿ ಕುಟುಂಬ ರಾಜಕಾರಣದ ಪಗಡೆಯಾಟಕ್ಕೆ ಕುಳಿತಂತಿದೆ ದಳಪತಿಗಳ ವರ್ತನೆ. ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಜೆಡಿಎಸ್‌ನಲ್ಲಿ ಆವರಿಸಿಕೊಂಡಿದೆ. ಇದೇ ನಡಾವಳಿ ಆ ಪಕ್ಷದಲ್ಲಿ ಮುಂದುವರಿದರೆ ಮುಂದಿನ ಚುನಾವಣೆ ಹೊತ್ತಿಗೆ ಈಗಿರುವ ಶಾಸಕರಲ್ಲಿ ಅರ್ಧದಷ್ಟು ಮಂದಿ ಕಾಂಗ್ರೆಸ್, ಮತ್ತೆ ಅರ್ಧದಷ್ಟು ಮಂದಿ ಬಿಜೆಪಿಗೆ ಗುಳೆ ಹೋಗಲು ಅಣಿಯಾಗಿದ್ದಾರೆ. ಈ ಸಂಗತಿ ದೇವೇಗೌಡರಿಗೆ, ಕುಮಾರಸ್ವಾಮಿ ಅವರಿಗೆ ಗೊತ್ತಿಲ್ಲದ ರಹಸ್ಯವೇನಲ್ಲ. ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಬಿಜೆಪಿಗೆ ಎಡತಾಕಿ ಅಧಿಕಾರ ಉಳಿಸಿಕೊಳ್ಳುವ ಹಂಗಿಗೆ ಸಿಲುಕಿದ್ದ ಕುಮಾರಸ್ವಾಮಿ, ಈಗ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ಹೆಣಗಾಟದಲ್ಲಿದ್ದಾರೆ.ಯಾವುದೇ ಸ್ಪಷ್ಟ ನಿಲುವಿಲ್ಲದೇ, ಯಾವ ಕಡೆಗೆ ವಾಲಿದರೆ ಅನುಕೂಲವೋ ಎಂಬ ಖಚಿತತೆಯೂ ಇಲ್ಲದೇ ಸದಾ ಎರಡು ದೋಣಿಯ ಮೇಲೆ ಕಾಲಿಟ್ಟು ಸಾಗುವ ನಾಯಕನಂತೆ ತೋರುತ್ತಿದ್ದಾರೆ ಕುಮಾರಸ್ವಾಮಿ. ಮಸೂದೆಗಳ ವಿಚಾರದಲ್ಲಿ, ಕಾಂಗ್ರೆಸ್-ಬಿಜೆಪಿ ಜತೆಗಿನ ಅವರ ನಂಟು, ಮಾತುಗಳಲ್ಲಿ ಈ ದ್ವಂದ್ವ ಎದ್ದು ಕಾಣಿಸುತ್ತದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಪಕ್ಷವೆಂಬುದು ತಲೆ ಇದ್ದಂತೆ. ಪ್ರತಿಪಕ್ಷ ಹೃದಯ ಮತ್ತು ಆತ್ಮ ಇದ್ದಂತೆ. ಯಾವ ಪಕ್ಷವೇ ಇರಲಿ; ಆಡಳಿತದಲ್ಲಿದ್ದಾಗ ಜನಪರವಾಗಿ ವರ್ತಿಸಿದ್ದು ಅಪರೂಪ. ಜನವಿರೋಧಿ ನೀತಿಗಳನ್ನು ಅನುಷ್ಠಾನ ಮಾಡುವ, ಅದರ ವಿರುದ್ಧ ಸೊಲ್ಲೆತ್ತಿದವರನ್ನು ಬಡಿಯುವ, ಅವಕಾಶಗಳನ್ನು ನಾಜೂಕಾಗಿ ಬಳಸಿಕೊಳ್ಳುವ ‘ತಲೆ’ಯನ್ನಷ್ಟೇ ಅದು ಬಳಸುತ್ತದೆ. ವಿರೋಧ ಪಕ್ಷದ ಕೈಯಲ್ಲಿ ಆಡಳಿತ ಇಲ್ಲದೇ ಇರುವುದರಿಂದ ಅದು ಜನರ ಕಷ್ಟಕ್ಕೆ ಮಿಡಿಯುವ, ನೋವಿಗೆ ಸ್ಪಂದಿಸುವ ಹೃದಯದಂತೆ, ಪ್ರಜಾತಂತ್ರದ ಆತ್ಮದಂತೆ ಕಾರ್ಯನಿರ್ವಹಿಸಬೇಕು. ನೆಲಕ್ಕೆ ಕಿವಿ ಇಟ್ಟು ಜನರ ಆಕ್ರಂದನ, ಅವರ ಅಸಹಾಯಕ ನಡಿಗೆಯಲ್ಲಿನ ಆರ್ದ್ರ ಕಂಪನ ಆಲಿಸಿ ಸಾಂತ್ವನ ಹೇಳಬೇಕು. ಆಗ ಮಾತ್ರ ಅದು ಸಮರ್ಥ ವಿರೋಧ ಪಕ್ಷ ಎನಿಸಿಕೊಳ್ಳುತ್ತದೆ. ಜನರ ವಿಶ್ವಾಸ ಗೆಲ್ಲಲೂ ಶಕ್ಯವಾಗುತ್ತದೆ. ಇಲ್ಲದಿದ್ದರೆ, ಅದು ಆಡಳಿತ ಪಕ್ಷದ ಬಾಲಂಗೋಚಿಯಾಗಿ ಜನರ ವಿಶ್ವಾಸದಿಂದ ದೂರವಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೇ ಇದ್ದರೆ ಜನರಿಗೂ ಕಷ್ಟ; ಪ್ರಜಾತಂತ್ರಕ್ಕೂ ಸಂಕಷ್ಟ.
ಹೀಗಿದ್ದರೂ ಕೂಡ ಮುಂದಿನ ಬಾರಿ ತಮಗೆ ಅಧಿಕಾರ ಕೊಡಿ ಎಂದು ಜನರ ಮುಂದೆ ಕಣ್ಣೀರಿಡುವ ತಂತ್ರ ಇದೆಯಲ್ಲಾ ಅದು ಕೂಡ ಒಂದು ರೀತಿ ಜನರಿಗೆ ಮಾಡುವ ಮೋಸವೆ ಯಾಕೆಂದರೆ ಯಾವ ಮೂಲೆಯಿಂದಲೂ ಯೋಚಿಸಿದರೂ ಜೆಡಿಎಸ್ ಒಂಟಿಯಾಗಿ ಅಧಿಕಾರಕ್ಕೆ ಬರಲು ಸಾಧ್ಯವೇ? ಅಧಿಕಾರಕ್ಕೆ ಬರುವವಷ್ಟು ಅಭ್ಯರ್ಥಿಗಳನ್ನು ಇಟ್ಟುಕೊಂಡಿದ್ದಾರೆಯೇ ಎನ್ನುವುದನ್ನು ಯೋಚಿಸಬೇಕಿದೆ. ಇರುವ ನಾಯಕರನ್ನು ಹೊರಗಟ್ಟಿ ಕುಟುಂಬದವರನ್ನಷ್ಟೇ ಮೆಚ್ಚಿಕೊಂಡು ಅಧಿಕಾರ ಕೇಳಿದರೆ ಜನ ಮರಳುಗಾಗಲು ಸಾಧ್ಯವೇ?
ಕುಮಾರಸ್ವಾಮಿಯವರ ಮಾತುಗಳು ಆಲಿಸಿದರೆ ಅವರಿಗೆ ಮುಂದಿನ ಬಾರಿ ಮತ್ತೇ ನಾವೇ ಅಗತ್ಯವಾಗುತ್ತೇವೆ ಎನ್ನುವ ಅನುಮಾನವಿದೆ ಹಾಗಾಗಿಯೇ ಈ ಮಾತುಗಳನ್ನು ಆಡುತ್ತಿದ್ದಾರೆ ೩೦-೩೫ ಸೀಟಿನ ಆಸುಪಾಸಿನ ಸಂಖ್ಯೆ ಮತ್ತೇ ನಮ್ಮದಾದರೆ ಮತ್ತೇ ಅದೇ ಲೆಕ್ಕಾಚಾರದಲ್ಲೇ ಮುನ್ನಡೆಯುವ ಸೂಚನೆ ಅವರದ್ದಾಗಿದೆ ಹಾಗಾಗಿಯೇ ಜನರ ಬಳಿ ಹೋಗಿದ್ದಾರೆ ಇನ್ನೊಂದಿಷ್ಟು ಸಂಖ್ಯೆ ಹೆಚ್ಚಾಗಲಿ ಎನ್ನುವ ಬೇಡಿಕೆ ಅವರದ್ದಾದಂತೆ ಕಾಣುತ್ತಿದೆ.
ಇಂತ ಎಲ್ಲಾ ಆಸೆಗಳನ್ನು ಚಿಗುರಿಸಿಕೊಂಡಿರುವ ಕುಮಾರಸ್ವಾಮಿ ತಮ್ಮ ಮಕ್ಕಳನ್ನು ಪತ್ನಿಯರನ್ನು ಕುಟುಂಬದವರನ್ನು ಗೆಲ್ಲಿಸಿಕೊಂಡು ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಅಧಿಕಾರ ಹಿಡಿಯುವ ಆಸೆ ಅವರಲ್ಲಿದೆ ಈ ಕಾರಣಕ್ಕಾಗಿಯೇ ಅವರು ಕೇಳುತ್ತಿರುವುದು ನಮಗೆ ಸ್ವಂತ ಶಕ್ತಿಯ ಮೇಲೆ ನಿಲ್ಲಲು ಅಧಿಕಾರ ಕೊಡಿ ಎನ್ನುವ ಬೇಡಿಕೆ,ಆ ಬೇಡಿಕೆ ಈಡೇರಿಸಲು ಅವರಿಂದಲೂ ಸಾಧ್ಯವಿಲ್ಲ ಎನ್ನುವುದು ಅವರಿಗೆ ಗೊತ್ತಿದೆ ಯಾಕೆಂದರೆ ಎಲ್ಲಿ ಅಭ್ಯರ್ಥಿಗಳಿದ್ದಾರೆ ಎನ್ನುವುದು. ಇನ್ನೂ ತಮ್ಮ ಸ್ವಂತ ನೆಲದಲ್ಲೇ ನೆಲೆಕಳೆದುಕೊಳ್ಳುವ ಆತಂಕದಲ್ಲಿರುವ ಅವರು ಈಗಾಗಲೇ ಒಬ್ಬೊಬ್ಬರೆ ಪಕ್ಷದಿಂದ ಕಾಲು ಕೀಳುತ್ತಿದ್ದಾರೆ ಹೀಗಾಗಿಯೇ ಕಾವೇರಿ ಜಲಾಯನ ಪ್ರದೇಶದ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯ ಕೆಲಸಕ್ಕೆ ಮುಂದಾಗಿದೆ. ಈ ಸಂಬಂಧ, ದೇವೇಗೌಡ್ರು ಮತ್ತು ಕುಮಾರಸ್ವಾಮಿ ಸತತ ಸಭೆಗಳನ್ನು ನಡೆಸುತ್ತಿದ್ದಾರೆ. ಮೈಸೂರಿನ ಪ್ರಭಾವೀ ಮುಖಂಡ ಜಿ.ಟಿ.ದೇವೇಗೌಡ ಮತ್ತು ಅವರ ಪುತ್ರ ಪಕ್ಷ ತೊರೆಯುವುದಾಗಿ ಹೇಳಿದ್ದಾರೆ ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, “ಪಕ್ಷ ಯಾರನ್ನೂ ನಂಬಿಕೊಂಡಿಲ್ಲ, ನಂಬಿಕೊಳ್ಳುವುದೂ ಇಲ್ಲ, ನನಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ ಸ್ಪೂರ್ತಿ ಎಂದು ಹೇಳಿದ್ದಾರೆ.
ನಿರ್ಲಿಪ್ತರಾಗಿರುವ ಪಕ್ಷದ ಕಾರ್ಯಕರ್ತರ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಕುಮಾರಸ್ವಾಮಿ, ಮುಂದಿನ ದಿನಗಳಲ್ಲಿ ನಾನೇ ಆಖಾಡಕ್ಕೆ ಇಳಿಯಲಿದ್ದೇನೆ ತಮ್ಮ ಮಕ್ಕಳನ್ನು ಅಖಾಡಕ್ಕೆ ಇಳಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಪಾದಯಾತ್ರೆ ಮಾಡುವ ಚಿಂತನೆಯಲ್ಲಿರುವ, ಬಿಜೆಪಿಯ ಪ್ರಬಲ ಪೈಪೋಟಿಯ ನಡುವೆಯೂ ಮಮತಾ ಬ್ಯಾನರ್ಜಿ ನನಗೆ ಸ್ಪೂರ್ತಿ ಎಂದು ಹೇಳಿದ್ದಾರೆ.
ದೀದಿಯಾಗುವ ಆಸೆ
ಮಾಜಿ ಸಿಎಂ ಎಚ್‌ಡಿಕೆ ವ್ಯಂಗ್ಯ ಇದ್ಯಾವುದಕ್ಕೂ ಮಮತಾ ಬ್ಯಾನರ್ಜಿ ಜಗ್ಗಲಿಲ್ಲ, ಹೆದರಲಿಲ್ಲ ಎಂದ ಕುಮಾರಸ್ವಾಮಿ ಇದ್ಯಾವುದಕ್ಕೂ ಮಮತಾ ಬ್ಯಾನರ್ಜಿ ಜಗ್ಗಲಿಲ್ಲ, ಹೆದರಲಿಲ್ಲ ಎಂದ ಕುಮಾರಸ್ವಾಮಿ ಈ ಬಗ್ಗೆ ಮಾತನಾಡುತ್ತಿದ್ದ ಎಚ್.ಡಿ.ಕುಮಾರಸ್ವಾಮಿ, “ಕಳೆದ ಪಶ್ಚಿಮ ಬಂಗಾಳದ ಅಸೆಂಬ್ಲಿ ಚುನಾವಣೆಯನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ. ಬಿಜೆಪಿ ತನಗಿರುವ ಎಲ್ಲಾ ಶಕ್ತಿಯನ್ನು ಪ್ರದರ್ಶಿಸಿತು. ಎಲ್ಲಾ ತನಿಖೆ ಸಂಸ್ಥೆಗಳ ಲಾಭವನ್ನು ಪಡೆದುಕೊಂಡಿತು. ಏನಾದರೂ ಮಾಡಿ, ಮಮತಾ ಬ್ಯಾನರ್ಜಿಯವರನ್ನು ಸೋಲಿಸುವ ಪಣತೊಟ್ಟಿತ್ತು. ಆದರೆ, ಇದ್ಯಾವುದಕ್ಕೂ ಮಮತಾ ಜಗ್ಗಲಿಲ್ಲ, ಹೆದರಲಿಲ್ಲ”ಎಂದು ಎಚ್ಡಿಕೆ ಹೇಳಿದರು. ಪಕ್ಷ ಸಂಘಟನೆಯ ವಿಚಾರದಲ್ಲಿ ನನಗೆ ಅವರೇ ಸ್ಪೂರ್ತಿ, ಅದೇ ದಾರಿಯಲ್ಲಿ ನಾನೂ ಸಾಗುತ್ತೇನೆ ಪಕ್ಷ ಸಂಘಟನೆಯ ವಿಚಾರದಲ್ಲಿ ನನಗೆ ಅವರೇ ಸ್ಪೂರ್ತಿ, ಅದೇ ದಾರಿಯಲ್ಲಿ ನಾನೂ ಸಾಗುತ್ತೇನೆ “ತೃಣಮೂಲ ಕಾಂಗ್ರೆಸ್ಸಿನ ಸುಮಾರು ಎಪ್ಪತ್ತಕ್ಕೂ ಹೆಚ್ಚು ಶಾಸಕರು ಪಕ್ಷವನ್ನು ಚುನಾವಣೆಯ ಹೊಸ್ತಿಲಲ್ಲಿ ತೊರೆದರು. ಆದರೆ ಮಮತಾ ಬ್ಯಾನರ್ಜಿಯವರು ಇದರಿಂದ ಧೃತಿಗೆಡಲಿಲ್ಲ. ಇನ್ನಷ್ಟು ಶಕ್ತಿಶಾಲಿ ಮಹಿಳೆಯಾಗಿ ಹೊರಹೊಮ್ಮಿದರು. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದು, ಬಿಜೆಪಿಗೆ ಪಾಠ ಕಲಿಸಿದರು. ಹಾಗಾಗಿ, ಪಕ್ಷ ಸಂಘಟನೆಯ ವಿಚಾರದಲ್ಲಿ ನನಗೆ ಅವರೇ ಸ್ಪೂರ್ತಿ, ಅದೇ ದಾರಿಯಲ್ಲಿ ನಾನೂ ಸಾಗುತ್ತೇನೆ”ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಆದರೆ ಆ ತಾಕತ್ತು ಆ ಸನ್ನೀವೇಶ ಅಂತ ಪರಸ್ಥಿತಿ ಕರ್ನಾಟಕದಲ್ಲಿ ಇಲ್ಲ. ಕರ್ನಾಟಕದ ಮತದಾರರ ಮನೋಸ್ಥಿತಿಯೇ ಬೇರೆ ಅಲ್ಲಿಯ ಪರಿಸ್ಥಿತಿಯೇ ಬೇರೆ ಎನ್ನುವ ಸ್ಥಿತಿ ಕುಮಾರಸ್ವಾಮಿಗೆ ಇಲ್ಲದಿಲ್ಲ ಆದರೆ ಒಂದಿಷ್ಟು ಯುವ ಜನತೆಯನ್ನು ತುಂಬಿಕೊಂಡು ಡಕೋಟ ಎಕ್ಸಪ್ರೆಸ್ ಚಾಲನೆ ಮಾಡೋಣ ಎನ್ನುವ ಮನೋಸ್ಥಿತಿ ಅವರದ್ದಾಗಿದೆ ಹೀಗಾಗಿಯೇ ದೀದಿಯ ಹೆಸರೇಳುವ ಮೂಲಕ ರಾಜ್ಯದಲ್ಲಿಅಂತ ಪರಿಸ್ಥಿತಿ ನಿರ್ಮಾಣ ಮಾಡುತ್ತೇನೆ ಎನ್ನುತ್ತಿದ್ದಾರೆ ಆದರೆ ಅಂತ ಪರಿಸ್ಥಿತಿ ಇಲ್ಲಿಯಾವಕಾರಣಕ್ಕೂ ಬಾರದು ಎನ್ನುವುದನ್ನು ಕುಮಾರ ಸ್ವಾಮಿ ಅರಿಯಬೇಕಿದೆ.