೧೯೭೮ರಲ್ಲಿ ಮುಚ್ಚಿದ್ದ ಶಾಲೆಯಲ್ಲಿ ೨೧೫ ವಿದ್ಯಾರ್ಥಿಗಳ ಕಳೇಬರ ಪತ್ತೆ!

Share

ಟೊರೊಂಟೊ,ಮೇ,೨೯: ಅಪೌಷ್ಕತೆಯಿಂದ ಶಾಲೆಯಲ್ಲಿನ ಹಿಂಸಾಕೃತ್ಯದ ಮತ್ತು ಅಲ್ಲಿನ ದೌರ್ಜನ್ಯಗಳ ಕಾರಣಗಳಿಂದ ೧೯೭೮ರಲ್ಲಿ ಸಾವನ್ನಪ್ಪಿದ್ದ ವಸತಿಶಾಲೆಯ ವಿದ್ಯಾರ್ಥಿಗಳ ಕಳೆಬರಹಗಳು ಈಗ ಪತ್ತೆಯಾಗಿವೆ.
ಇದು ಆಶ್ಚರ್ಯವಾದರೂ ಸತ್ಯ ಇದು ನಡೆದಿರುವುದು ಕೆನಾಡಾದ ’ಟಿಕೆಎಮ್ಲುಪ್ಸ್ ಟೆ ಸೆಕ್ವೆಪೆಮ್‌ಕೆ ನೇಷನ್’ಶಾಲೆಯಲ್ಲಿ ಇದರಲ್ಲಿ ಒಟ್ಟು ೨೧೫ ಮಕ್ಕಳ ಕಳೇಬರಹ ಪತ್ತೆಯಾಗಿವೆ ಈ ಘೋರ ಕೃತ್ಯವನ್ನು ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೋ ಇದೊಂದು ಹೃದಯ ವಿದ್ರಾವಕ ಎಂದು ಹೇಳಿದ್ದಾರೆ ಅಲ್ಲದೆ ಇದು ನಮ್ಮ ದೇಶದ ಇತಿಹಾಸದ ಆ ಕರಾಳ ಮತ್ತು ನಾಚಿಕೆಗೇಡಿನ ಅಧ್ಯಾಯವನ್ನು ನೆನಪಿಸುತ್ತದೆ’ ಎಂದಿದ್ದಾರೆ.
ಈಗ ಪತ್ತೆಯಾಗಿರುವ ಕಳೇಬರ ಬ್ರಿಟಿಷ್ ಕೊಲಂಬಿಯಾದ ಕಾಮ್‌ಲೂಪ್ಸ್ ಇಂಡಿಯನ್ ವಸತಿ ಶಾಲೆ ಯಲ್ಲಿ ವಿದ್ಯಾರ್ಥಿಗಳಾಗಿದ್ದವರದ್ದು ಎಂದು ’ಟಿಕೆಎಮ್ಲುಪ್ಸ್ ಟೆ ಸೆಕ್ವೆಪೆಮ್‌ಕೆ ನೇಷನ್ ಎಂಬ ಸಂಸ್ಥೆ ಹೇಳಿದೆ. ರಾಡಾರ್ ತಜ್ಞರ ಸಹಾಯದಿಂದ ಕಳೇಬರಗಳನ್ನು ಪತ್ತೆಮಾಡಲಾಗಿದೆ. ಈ ಸಮಯದಲ್ಲಿ ನಾವು ಉತ್ತರಗಳಿಗಿಂತಲೂ ಹೆಚ್ಚು ಪ್ರಶ್ನೆಗಳನ್ನೇ ಹೊಂದಿದ್ದೇವೆ, ಎಂದು ಸಂಸ್ಥೆ ಮುಖ್ಯಸ್ಥರು ತಿಳಿಸಿದ್ದಾರೆಸ್ಥಳೀಯ ಮಕ್ಕಳನ್ನು ತಮ್ಮ ಕುಟುಂಬಗಳಿಂದ ಬಲವಂತವಾಗಿ ಬೇರ್ಪಡಿಸಿದ್ದ ಕೆನಡಾದ ವಸತಿ ಶಾಲಾ ವ್ಯವಸ್ಥೆಯು ಸಾಂಸ್ಕೃತಿಕ ನರಮೇಧ’ವನ್ನೇ ನಡೆಸಿದೆ. ಈ ವಸತಿ ಶಾಲೆಗಳ ವ್ಯವಸ್ಥೆಯ ಕುರಿತು ನಡೆಸಿದ ತನಿಖೆಗಳು ೨೦೧೫ರಲ್ಲಿ ಈ ಸಂಗತಿಯನ್ನು ಬಯಲು ಮಾಡಿವೆ.
ಈ ವಸತಿ ಶಾಲೆಗಳಲ್ಲಿ ಸ್ಥಳೀಯ ಮಕ್ಕಳಿಗೆ ತಮ್ಮ ಭಾಷೆಯನ್ನು ಆಡಲು ಅಥವಾ ಅವರ ಸಂಸ್ಕೃತಿಯನ್ನು ಪಾಲಿಸಲು ಅನುಮತಿ ನೀಡಲಾಗುತ್ತಿರಲಿಲ್ಲ. ಅಲ್ಲದೆ, ಬಹುತೇಕ ಮಕ್ಕಳು ದುರುಪಯೋಗಕ್ಕೆ ಬಲಿಯಾಗಿದ್ದರು ಎಂಬುದು ತನಿಖೆಗಳಿಂದ ಗೊತ್ತಾಗಿದೆ.
೧೮೪೦ ರಿಂದ ೧೯೯೦ ರವರೆಗೆ ಒಟ್ಟಾವಾ ಪರವಾಗಿ ಕ್ರಿಶ್ಚಿಯನ್ ಚರ್ಚುಗಳು ನಡೆಸುತ್ತಿದ್ದ ವಸತಿ ಶಾಲೆಗಳಿಗೆ ದಾಖಲಾದ ೧,೫೦,೦೦೦ ಮಕ್ಕಳಲ್ಲಿ ಅನೇಕರು ಅನುಭವಿಸಿದ ಭಯಾನಕ ದೈಹಿಕ ಕಿರುಕುಳ, ಅತ್ಯಾಚಾರ, ಅಪೌಷ್ಟಿಕತೆ ಮತ್ತು ಇತರ ದೌರ್ಜನ್ಯಗಳನ್ನು ತನಿಖಾ ವರದಿ ಬಹಿರಂಗಪಡಿಸಿದೆ.
ಈ ವಸತಿ ಶಾಲೆಗಳಲ್ಲಿ ೪೧೦೦ ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ತನಿಖಾ ವರದಿ ಹೇಳಿದೆ. ಈಗ ’ಕಾಮ್‌ಲೂಪ್ಸ್ ಇಂಡಿಯನ್ ವಸತಿ ಶಾಲೆ’ಯ ಮೈದಾನದದಲ್ಲಿ ೨೧೫ ಮಕ್ಕಳ ಕಳೇಬರಗಳು ಪತ್ತೆಯಾಗಿವೆ.

Girl in a jacket
error: Content is protected !!