ನವದೆಹಲಿ,ಮೇ,೧೮:ಭಾರತೀಐ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮೆನ್ ಶಿವಸುಂದರ್ ದಾಸ್ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.ಹೀಗಾಗಿ ಇಂಗ್ಲೆಂಡ್ ಪ್ರವಾಸದ ವೇಳೆ ದಾಸ್ ಮಹಿಳಾ ಕ್ರಿಕೆಟ್ಗರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಶಿವ್ ಸುಂದರ್ ದಾಸ್ ಭಾರತ ತಂಡದ ಪರ ೨೦೦೦-೦೨ರ ವರೆಗೆ ೨೩ ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ೨೩ ಟೆಸ್ಟ್ ಪಂದ್ಯಗಳಲ್ಲಿ ೩೪.೮೯ರ ಸರಾಸರಿಯಂತೆ ೧೩೨೬ ರನ್ ಗಳಿಸಿದ್ದಾರೆ. ಇದರಲ್ಲಿ ೨ ಶತಕಗಳು ಮತ್ತು ೯ ಅರ್ಧ ಶತಕಗಳು ಸೇರಿವೆ. ’ಇದೊಂದು ಒಳ್ಳೆಯ ಅನುಭವವಾಗಲಿದೆ. ನಾನು ಇದಕ್ಕಾಗಿ ಎದುರು ನೋಡುತ್ತಿದ್ದೇನೆ,’ ಎಂದು ೪೩ರ ಹರೆಯದ, ಒಡಿಶಾ ತಂಡದ ಮಾಜಿ ನಾಯಕ ಶಿವ್ ಸುಂದರ್ ಪಿಟಿಐ ಜೊತೆಗೆ ಖುಷಿ ಹಂಚಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ದಾಸ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಯಲ್ಲಿ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
’ನಾನು ಕಳೆದ ೪-೫ ವರ್ಷಗಳಿಂದ ಎನ್ಸಿಎಯಲ್ಲಿ ಬ್ಯಾಟಿಂಗ್ ಕೋಚ್ ಆಗಿದ್ದೇನೆ. ಈ ಅವಕಾಶ ನೀಡಿದ್ದಕ್ಕಾಗಿ ನಾನು ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ,’ ಎಂದು ದಾಸ್ ಹೇಳಿದ್ದಾರೆ.
ಮಹಿಳಾ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಶಿವ್ ಸುಂದರ್ ದಾಸ್
Share