ನವದೆಹಲಿ,ಮೇ,೨೯ :ಕೋವಿಡ್ ಅಟ್ಟಹಾಸದಿಂದ ರದ್ದಾಗಿದ್ದ ೧೪ನೇ ಆವೃತ್ತಿಯ ಐಪಿಎಲ್ ಪಂದ್ಯವಾಳಿಯನ್ನು ಪುನಾರಂಭಿಸಲು ಬಿಸಿಸಿಐ ನಿರ್ಧರಿಸಿದೆ.
ಈ ಪಂದ್ಯಗಳು ಭಾರತದ ಬದಲಾಗಿಎ ಅರಬ್ನಲ್ಲಿ (ಯುನೈಟೆಡ್ ಅರಬ್ ಎಮಿರೇಟ್ಸ್-ಯುಎಇ) ನಡೆಯಲಿದೆ.
ಬಾಕಿ ಉಳಿದ ೩೧ ಪಂದ್ಯಗಳು ನಡೆಯಲಿದ್ದು ಆ ಕುರಿತು ಎಲ್ಲೆಲ್ಲಿ ನಡೆಯಲಿವೆ ಎನ್ನುವುದನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ
ಇಂದು ವಿಶೇಷ ಸಾಮಾನ್ಯ ಸಭೆ ನಡೆಸಿದ ಬಳಿಕ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಭಾರತದಲ್ಲಿ ಮಳೆಗಾಲ ಇರುವುದರಿಂದ ಯುಎಇನಲ್ಲಿ ಬಾಕಿ ಉಳಿದಿರುವ ಮ್ಯಾಚ್ಗಳನ್ನು ನಡೆಸುವುದಾಗಿ ತಿಳಿಸಿದೆ.
ಐಪಿಎಲ್ ಪುನಾರಂಭಿಸಲು ಬಿಸಿಸಿಐ ನಿರ್ಧಾರ
Share