Writing;ಪರಶಿವ ಧನಗೂರು
ಭೂ ಮಾಫಿಯಾಕ್ಕೆ ನಲುಗಿದೆ ಪಶ್ಚಿಮ ಘಟ್ಟ
ಭೂಮಿಮೇಲಿನ ಮನುಷ್ಯರ ನೆಮ್ಮದಿಯ ಬದುಕಿಗೇ ನೇರವಾಗಿ ಕಾರಣವಾಗಿರುವ ಕೆಲವು ಭೂ ಭಾಗಗಳಲ್ಲಿ ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ಗಳು ಕೂಡ ಪ್ರಮುಖವಾಗಿವೆ. ಜೀವವೈವಿಧ್ಯತೆ ಯಿಂದ ತುಂಬಿ ಕಂಗೊಳಿಸುತ್ತಾ, ಲಕ್ಷಾಂತರ ಸೂಕ್ಷ್ಮಾಣು ಜೀವಿಗಳಿಗೆ, ಸಾವಿರಾರು ಪ್ರಾಣಿ ಪಕ್ಷಿ ಪ್ರಭೇದಗಳಿಗೆ, ಆಸರೆಯಾಗಿ ಪರಿಸರ ಸಮತೋಲನವನ್ನು ವಾತಾವರಣದಲ್ಲಿ ಸರಿದೂಗಿಸುತ್ತಾ, ಮಳೆಮಾರುತಗಳನ್ನು ಸೆಳೆಯುತ್ತಾ ಆಹಾರ ಸರಪಳಿಯ ಕೊಂಡಿಯನ್ನು ಸುಸ್ಥಿತಿಯಲ್ಲಿಟ್ಟು, ರೈತರ ಜೀವನಾಡಿಯಾಗಿ ಇಂದು ಕರ್ನಾಟಕದ ವಿಶಾಲ ಮಲೆನಾಡು, ಪಶ್ಚಿಮ ಘಟ್ಟ ಪ್ರದೇಶಗಳು ನಮ್ಮನು ಪೊರೆಯುತ್ತಿವೆ. ಅದಕ್ಕಾಗಿಯೇ ಪ್ರತಿಬಾರಿಯು ವಿಶ್ವಸಂಸ್ಥೆಯ ಉನ್ನತ ಮಟ್ಟದ ವಿಜ್ಞಾನಿಗಳ ತಜ್ಞರ ಸಮಿತಿ ಅತಿಸೂಕ್ಷ್ಮವಾಗಿ, ಗಂಭೀರವಾಗಿ ಎಚ್ಚರಿಸುತ್ತಾ ‘ನಿಮ್ಮ ಉಸಿರಿನ ಭಾಗವಾಗಿರುವ ಪಶ್ಚಿಮ ಘಟ್ಟವನ್ನು ಕಾಪಾಡಿಕೊಳ್ಳಿ!’ ಎಂದು ಅಪಾಯದ ಮುನ್ಸೂಚನೆಯನ್ನು ನೀಡುತ್ತಿದ್ದರೂ ನಾವು ಕನ್ನಡಿಗರು ಎಚ್ಚೆತ್ತು ಕೊಳ್ಳುತ್ತಿಲ್ಲ. ಬುದ್ಧಿ ಕಲಿಯುತ್ತಲೂ ಇಲ್ಲ. ಸುಖದ ಸವಲತ್ತಿನ ಲೋಲುಪತೆಗೆ ಬಿದ್ದಿರುವ ದುರಾಸೆಯ ಮಾನವನಿಗೆ ತಾನು ವಾಸಿಸುವ ಭೂಮಿಯನ್ನು ವಾಸಿಸಲು ಯೋಗ್ಯವಾಗಿರುವಂತೆ ಇಡಲು ಕಾಡುಗಳು, ಬೆಟ್ಟಗುಡ್ಡ ಪಶ್ಚಿಮ ಘಟ್ಟದಂತ ದಟ್ಟ ಅರಣ್ಯಗಳನ್ನು ಉಳಿಸಿಕೊಳ್ಳಬೇಕಾಗುತ್ತದೆಂಬ ಸಾಮಾನ್ಯ ತಿಳುವಳಿಕೆಯೂ ಸತ್ತು ಹೋಗುತ್ತಿದೆ. ಅದಕ್ಕಾಗಿಯೇ ಈಗ ಪಶ್ಚಿಮ ಘಟ್ಟ ದಂತ ಜಗತ್ತಿನ ಪಾರಂಪರಿಕ ಬ್ರಹತ್ ಸೂಕ್ಷ್ಮ ಪರಿಸರ ವಲಯದಲ್ಲೂ ರಿಯಲ್ ಎಸ್ಟೇಟ್ ಮಾಫಿಯಾ ಜಾಲ ವಿಸ್ತರಿಸಿ ಕೊಳ್ಳಲು ಹವಣಿಸುತ್ತಿದೆ. ಅರಣ್ಯದಂಚಿನಲ್ಲಿ, ಕಾಡಿನ ಹಾಡಿಗಳ ಪಕ್ಕದಲ್ಲೇ ಇಕೋ ಟೂರಿಸಂ ಹೆಸರಿನ ರೆಸಾರ್ಟ್ಗಳು, ಹೈಫೈ ಮಸಾಜ್ ಹೆಸರಿನ ಪ್ರಕ್ರತಿ ಚಿಕಿತ್ಸಾ ಕೇಂದ್ರಗಳು ತಲೆ ಎತ್ತುವ ಕಾಲ ಹತ್ತಿರಾಗುತ್ತಿದೆ.
ಏಕೆಂದರೆ ದೇಶದ ಸಮರ್ಥ ಪರಿಸರ ವಿಜ್ಞಾನಿಗಳು ಹತ್ತಿರತ್ತಿರ ಎರಡು ದಶಕಗಳ ಕಾಲ ಅಧ್ಯಯನ ಮಾಡಿ, ಜಗತ್ತಿನ ಜೀವವೈವಿಧ್ಯತೆಯ ಉಳಿವಿಗಾಗಿ ಪರಿಸರ ಕಾಳಜಿಯಿಂದ ನೀಡಿರುವ ವೈಜ್ಞಾನಿಕ ವರದಿಗಳನ್ನು ನಮ್ಮ ರಾಜಕಾರಣಿಗಳು ತಿರಸ್ಕರಿಸಲು ಸಚಿವ ಸಂಪುಟದಲ್ಲೇ ನಿರ್ಧರಿಸುತ್ತಾರೆಂದರೇ, ಅದಕ್ಕೆ ವಿರೋಧ ಪಕ್ಷಗಳೂ ಮೌನ ಸಮ್ಮತಿ ಸೂಚಿಸುತ್ತಾರೆಂದರೇ, ನಮ್ಮನ್ನಾಳುವ ಸರ್ಕಾರಗಳಿಗೇ ಭವಿಷ್ಯದ ಭಾರತದ ಪರಿಸರ ಸೂಕ್ಷ್ಮ ಹವಾಮಾನ ವೈಪರೀತ್ಯದ ಸಂಗತಿಗಳ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲದಿರುವುದು, ಪಶ್ಚಿಮ ಘಟ್ಟಗಳ ಬಗ್ಗೆ ಸರ್ಕಾರಕ್ಕೆ ಸ್ವಲ್ಪವೂ ಕಾಳಜಿ ಇಲ್ಲದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಎಲ್ಲವನ್ನೂ ಮಾರುಕಟ್ಟೆಯ ಸರಕಾಗಿ ನೋಡುತ್ತಿರುವ ಇಂದಿನ ಆಳುವ ಸರ್ಕಾರಗಳು ಈಗ ಈ ದೇಶದ ಎಲ್ಲಾ ಅರಣ್ಯ ಸಂಪನ್ಮೂಲಗಳನ್ನು ಅಭಿವೃದ್ದಿಯ ಹೆಸರಲ್ಲಿ ದೋಚಿ ಮಾರಿಕೊಳ್ಳಲು ಸಜ್ಜಾಗಿರುವಂತೆ ಭಾಸವಾಗುತ್ತಿದೆ. ಗಂಧದನಾಡು ಎಂದು ಕರೆಸಿಕೊಂಡಿರುವ ನಮ್ಮ ಕನ್ನಡ ನಾಡು ಗಂಧದಗುಡಿ ಯೆನಿಸಿಕೊಳ್ಳಲು ಪಶ್ಚಿಮ ಘಟ್ಟದಂತಹ ಜೀವವೈವಿಧ್ಯತೆಯ ಕಾಡು ನದಿ,ಝರಿಗಳ ತಾಣಗಳೇ ಕಾರಣ. ಇಂತಹ ಗಂಧದಗುಡಿಯನ್ನು ಕ್ರಷಿ ಜಮೀನು ವಿಸ್ತರಣೆಯ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಕಳ್ಳರ ಮಾಫಿಯಾ ರಾಜಕಾರಣಿಗಳೊಡನೆ ಶಾಮೀಲಾಗಿ ಪರಿಸರದ ಪರವಾಗಿದ್ದ ಮಾಧವ ಗಾಡ್ಗೀಳ್ ಸಮಿತಿಯ ವರದಿಯನ್ನು ಈ ಹಿಂದೆ ತಿರಸ್ಕರಿಸಿತ್ತು. ಈಗ ಮತ್ತೆ ಪರಿಷ್ಕರಣೆಗೊಳಪಟ್ಟು, ಜನವಸತಿ ಪ್ರದೇಶಗಳಿಗೂ ದಕ್ಕೆ ಯಾಗದಂತೆ ಪಶ್ಚಿಮ ಘಟ್ಟ ಪ್ರದೇಶಗಳ ಪರವಾದ ಡಾ.ಕೆ.ಕಸ್ತೂರಿ ರಂಗನ್ ವರದಿ ಬಂದಿದೆ. ಈ ವರದಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ! ಈ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಪರಿಸರ ಸೂಕ್ಷ್ಮ ವಲಯ (ಬಾಂಬರ್ ಝೋನ್ )ವೆಂದು ಘೋಷಿಸಿದ ಅರಣ್ಯ ಪ್ರದೇಶದಿಂದ ಐದರಿಂದ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾರೂ ಕೂಡ ಕಾರ್ಖಾನೆಗಳನ್ನು ಸ್ಥಾಪಿಸುವಂತಿಲ್ಲ. ಅರಣ್ಯ ಒತ್ತುವರಿ ಮಾಡಿಕೊಂಡು ರಿಯಲ್ ಎಸ್ಟೇಟ್ ಮಾಫಿಯಾ ಗಳು ವಾಣಿಜ್ಯ ಚಟುವಟಿಕೆ, ಸೈಟು, ಬಡಾವಣೆ ನಿರ್ಮಾಣ ಮಾಡುವಂತಿಲ್ಲ.
ಮುಖ್ಯವಾಗಿ ಕಾಡಂಚಿನಲ್ಲಿ ಪ್ರಕ್ರತಿ ಚಿಕಿತ್ಸಾ ಕೇಂದ್ರಗಳ ಹೆಸರಿನಲ್ಲಿ ಹೋಂಸ್ಟೇ, ಬಾಡೀ ಮಸಾಜ್ ಪಾರ್ಲರ್, ರೆಸಾರ್ಟ್, ನೈಟ್ ಔಟ್ ರೇವ್ ಪಾರ್ಟಿ ಪಬ್ ಕಲ್ಚರ್ ಫುಲ್ ಬಂದ್! ಇಷ್ಟೆಲ್ಲಾ ನೀತಿ ನಿಯಮ ನಿಬಂಧನೆಗಳಿರುವ ಪರಿಸರ ಸ್ನೇಹಿ ಕಸ್ತೂರಿ ರಂಗನ್ ವರದಿಯಿಂದ ಕರ್ನಾಟಕದ ಜೀವವೈವಿಧ್ಯತೆಯ ತಾಣ ಪಶ್ಚಿಮ ಘಟ್ಟವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬಹುದೆಂಬುದು ಪರಿಸರ ವಿಜ್ಞಾನಿಗಳ ನಿಲುವು. ಆದರೆ ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಈ ಎಲ್ಲಾ ರಾಜಕೀಯ ಪಕ್ಷಗಳೂ ಈ ಕಸ್ತೂರಿ ರಂಗನ್ ವರದಿಯನ್ನು ನಾನಾ ಕಾರಣಗಳಿಗೆ ವಿರೋಧಿಸುತ್ತಿದ್ದಾರೆ. ಸೂಕ್ಷ್ಮ ಸಂರಕ್ಷಿತ ಅರಣ್ಯ ಪ್ರದೇಶದ ಕಾಡಿನ ಮಧ್ಯೆ ಇರುವ ಕೆಲವು ಆದಿವಾಸಿ ಬುಡಕಟ್ಟು ಜನಾಂಗದವರನ್ನು, ಒಕ್ಕಲೆಬ್ಬಿಸಿ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಪಶ್ಚಿಮ ಘಟ್ಟ ಪ್ರದೇಶವನ್ನು ‘ಸೂಕ್ಮ’ ಪಟ್ಟಿಯಿಂದ ಬಿಡುಗಡೆ ಗೊಳಿಸಿ, ರಿಯಲ್ ಎಸ್ಟೇಟ್ ಮಾಫಿಯಾ, ಟಿಂಬರ್ ಮಾಫಿಯಾ, ಬಾಡಿ ಮಸಾಜ್ ಇಕೋ ಟೂರಿಸಂ ಬೆಳೆಸಲು ಸಹಾಯವಾಗುವಂತೆ, ಕಸ್ತೂರಿ ರಂಗನ್ ವರದಿಯನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ದುಂಬಾಲು ಬಿದ್ದಿರುವ ರಾಜಕೀಯ ಪಕ್ಷಗಳಿಗೆ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿರುವ ಪ್ರಾಣಿ ಪಕ್ಷಿ ಪ್ರಭೇದಗಳ ಸುರಕ್ಷತೆ ಕಟ್ಟಿಕೊಂಡು ಏನಾಗಬೇಕಿದೇ?
ಅಲ್ಲಿರುವ ಬಾಗೇ ಮರಗಳ ಗುಂಪು ಬಂದು ಬಿಜೆಪಿಗೇನೂ ಮತಹಾಕುವುದಿಲ್ಲ! ಕಾಡಲ್ಲಿರುವ ಕಾಡುಬೇವಿನ ಮರಗಳು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರಕ್ಕೆ ಬರುವುದಿಲ್ಲ! ಜಾಲಿಮರಗಳು ಜೆಡಿಎಸ್ ಗೆ ಜೈ ಎನ್ನುವುದೂ ಇಲ್ಲ! ಒಟ್ಟಾರೆ ಅರಣ್ಯದಲ್ಲಿರುವ ಅಷ್ಟೂ ಮರಗಿಡ ಪ್ರಾಣಿಪಕ್ಷಿಗಳಿಗೇ ಮತದಾರರ ಪಟ್ಟಿಯಲ್ಲಿ ಹೆಸರೇ ಇಲ್ಲ! ಓಟಿನ ರಾಜಕಾರಣಕ್ಕೆ ಒಳಪಡದ ಬಡಪಾಯಿ ಪಶ್ಚಿಮ ಘಟ್ಟದ ಜೀವವೈವಿಧ್ಯ, ಪ್ರಾಣಿ ಪಕ್ಷಿ, ಮರಗಿಡಗಳು ಈಗ ತಮ್ಮನ್ನು ಉಳಿಸಿಕೊಳ್ಳಲು ವಿಧಾನಸೌಧ ಚಲೋ-ಮುತ್ತಿಗೆ ಮಾಡುವ ಯಾವ ಅಳುಕೂ ಈಗ ನಮ್ಮ ರಾಜಕಾರಣಿಗಳಿಗೆ ಇಲ್ಲದಿರುವುದರಿಂದ, ಮೂಕ ಪ್ರಾಣಿಗಳ ನೆಲೆವೀಡಾದ ಪಶ್ಚಿಮ ಘಟ್ಟದ ಮೇಲೆ ಮುಖ್ಯಮಂತ್ರಿಗಳಿಗೂ ಕರುಣೆ ಇಲ್ಲ! ಮೌನವನ್ನೇ ಉಸಿರಾಡಿ ನಮ್ಮೆದೆಯ ಉಸಿರಾಗಿರುವ ಪಶ್ಚಿಮ ಘಟ್ಟದ ಅರಣ್ಯಗಳ ಬಗ್ಗೆ ಸಚಿವ ಸಂಪುಟಕ್ಕೆ ಸಣ್ಣ ಪ್ರೀತಿಯೂ ಇಲ್ಲ! ಈಗ ಈ ರಾಜಕಾರಣಿಗಳಿಗೇ ಕಾಡು, ಗಾಳಿ, ನದಿ,ಜಲಪಾತ, ಪ್ರಾಣಿಪಕ್ಷಿ ಯಾವುದೂ ಬೇಕಾಗಿಲ್ಲ. ಓಟಿನ ರಾಜಕಾರಣ..40%ಕಮಿಷನ್ ಹಣ..! ಇವು ಮಾತ್ರ ಈಗ ಸರ್ವ ಪಕ್ಷಗಳ ಧ್ಯೇಯ ಮಂತ್ರ!
ಇಷ್ಟೆಲ್ಲಾ ನಡೆಯುತ್ತಿದ್ದರೂ ಪಶ್ಚಿಮ ಘಟ್ಟಗಳು ಈ ಓಟಿನ ರಾಜಕಾರಣದಿಂದ ಮುಂದೊಂದು ದಿನ ಸರ್ವ ನಾಶವಾಗುವ ಮುನ್ಸೂಚನೆ ಇದ್ದರೂ, ಈ ನಾಡಿನ ಯಾವೊಬ್ಬ ಪ್ರಜ್ಞಾವಂತ ನಾಗರಿಕನೂ ಬಾಯ್ ಬಿಚ್ಚಿಲ್ಲ! ನಾಡಿನ ನೆಲ,ಜಲ, ಕಾಡಿನ ರಕ್ಷಣೆಗೆ ಸಿದ್ಧವೆಂದು ಬೋರ್ಡು ಹಾಕಿಕೊಂಡು ಓಡಾಡುತ್ತಿರುವ ಕರ್ನಾಟಕ ರಕ್ಷಣಾ ಪಡೆಗಳ ಸದ್ದೇ ಇಲ್ಲ! ಪರಿಸರ ಹೋರಾಟಗಾರರು ಪತ್ರಕರ್ತರು, ಬರಹಗಾರರು,ಚಲನ ಚಿತ್ರ ನಟರು, ಎತ್ತಹೋದರೋ ಗೊತ್ತಾಗುತ್ತಿಲ್ಲ! ನಟ ಪುನೀತ್ ರಾಜಕುಮಾರ್ ರ ಗಂಧದಗುಡಿ ಕಿರುಚಿತ್ರದ ಟೀಸರ್ ನೋಡಿ ‘ಕನ್ನಡ ನಾಡು ನಮ್ಮ ಕಾಡು ಗಂಧದ ಬೀಡು!’ ಎಂದೆಲ್ಲಾ ಕಾಮೆಂಟ್ ಮಾಡುತ್ತಾ ಕಾಲಹರಣ ಮಾಡುತ್ತಿರುವ ಸೋಷಿಯಲ್ ಮೀಡಿಯಾ ವಕ್ತಾರರು ಪುನೀತ್ ರಾಜಕುಮಾರ್ ರ ನಿಜವಾದ ಕನಸಿನ ಗಂಧದಗುಡಿ ಪಶ್ಚಿಮಘಟ್ಟ ಅರಣ್ಯಕ್ಕೆ ಬೆಂಕಿಬೀಳುವ ಲಕ್ಷಣಗಳಿದ್ದರೂ ನಿದ್ದೆ ಮಾಡುತ್ತಿದ್ದಾರೆ! ಜಗತ್ತಿನ ಸರ್ವಜನರ ಉಸಿರಿಗೆ ಜೀವಾಳವಾಗಿರುವ ಪಶ್ಚಿಮ ಘಟ್ಟವನ್ನು “ಸೂಕ್ಷ್ಮ ಪರಿಸರ ವಲಯ” ವೆಂದು ಕಠಿಣ ಕಾನೂನು ಅನುಷ್ಠಾನ ಮಾಡಿ ಉಳಿಸಿಕೊಳ್ಳದಿದ್ದರೇ, ಮುಂದೊಂದು ದಿನ ಇಡೀ ಜಗತ್ತಿಗೆ ಬಾರೀ ಗಂಡಾಂತರ ಎದುರಾಗುವುದು ಖಚಿತ.
ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಹತ್ಯೆ!
ಈ ರಾಜಕಾರಣದ ಅಂತಿಮ ಗುರಿ ಹಣ ಸಂಪಾದನೆ! ಎನ್ನುವಂತಾಗಿರುವ ಇಂದಿನ ಕಾಲಘಟ್ಟದಲ್ಲಿ ಆ ಹಣವನ್ನು ಹೇಗಾದರೂ, ಯಾವ ರೀತಿಯಲ್ಲಾದರೂ ತಮ್ಮದಾಗಿಸಿಕೊಳ್ಳಬೇಕೆಂಬ ಹಪಾಹಪಿಯ ದುರಾಸೆಗೆ ಬಿದ್ದಿರುವ ರಾಜಕಾರಣಿಗಳು, ಕೋವಿಡ್19 ಕಾಯಿಲೆಯ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಹಗಹರಣ ನಡೆಸಿ, ತಮ್ಮ ಖಜಾನೆ ತುಂಬಿಸಿಕೊಂಡಾಗಲೂ, ಇದು ಬಡವರನ್ನೂ, ರೋಗಿಗಳನ್ನೂ, ಕೋರೋನಾ ವೈರಸ್ ನಿಂದ ಸತ್ತವರನ್ನೂ ವಂಚಿಸಿದ ಪಾಪದ ಹಣವೆಂದು ಅಸಹ್ಯ ಪಟ್ಟುಕೊಳ್ಳಲಿಲ್ಲ. ಇಂತಹ ರಾಜಕಾರಣಿಗಳು, ಬಂಡವಾಳಶಾಹಿ ಬಿಸಿನೆಸ್ ಮ್ಯಾನ್ ಗಳು ಈಗ ಅಭಿವೃದ್ಧಿ ಹೆಸರಿನಲ್ಲಿ ಆತ್ಮಹತ್ಯಾತ್ಮಕ ಕೆಲಸಕ್ಕೆ ಕೈ ಹಾಕಿದ್ದಾರೆ! ಈ ಹಿಂದೆ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟ ಪ್ರದೇಶಗಳ ಬಗ್ಗೆ ವರದಿಗೆ ನೇಮಿಸಿದ್ದ ಗಾಡ್ಗೀಳ್ ನೇತೃತ್ವದ ಸಮಿತಿಯ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ ಆಳುವ ಸರ್ಕಾರಗಳು, ಈಗ ಕಸ್ತೂರಿ ರಂಗನ್ ವರದಿಯಿಂದಲೂ ಜನರ ಜೀವನೋಪಾಯಕ್ಕೆ ಧಕ್ಕೆ ಎಂಬ ಸುಳ್ಳು ವದಂತಿ ಹಬ್ಬಿಸಿ, ಪಶ್ಚಿಮಘಟ್ಟ ವೆಂಬ ವೈವಿಧ್ಯದ ತಾಣವನ್ನು ಸರ್ವನಾಶ ಮಾಡಲು ಸ್ಕೆಚ್ಚು ರೆಡಿಮಾಡಿದ್ದಾರೆ! ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ರನ್ನುಬೇಟಿಯಾಗಿದ್ದ ಕರ್ನಾಟಕದ ಅರಣ್ಯ ಸಚಿವ ಆನಂದ್ ಸಿಂಗ್ ಮತ್ತು ಇತರ ಮಂತ್ರಿಗಳ ನಿಯೋಗ ಪಶ್ಚಿಮ ಘಟ್ಟವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ವೆಂದು ಘೋಷಿಸದಂತೆ ಮನವಿ ಮಾಡಿ ಬಂದಿದೆ! ಇವರಿಗೆ ಪಶ್ಚಿಮ ಘಟ್ಟದ ಜೀವವೈವಿಧ್ಯತೆಯ ಬಗ್ಗೆ ಯಾಗಲೀ, ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಅರಣ್ಯಪ್ರದೇಶ
ಹೊಂದಿರುವುದರಿಂದ ಅದನ್ನು ಉಳಿಸಿಕೊಳ್ಳಬೇಕೆಂಬ ಕಾಳಜಿಯಾಗಲೀ, ಕಿಂಚಿತ್ತೂ ಕಾಣುತ್ತಿಲ್ಲ. ಸರ್ಕಾರ ಮತ್ತು ಅದರ ಪಾಲುದಾರರಾದ ಬಂಡವಾಳಶಾಹಿ ಕಂಪನಿಗಳು, ಆ ಪಶ್ಚಿಮಘಟ್ಟ ಕಾಡಿನ ಅರಣ್ಯದಲ್ಲಿ ವಿತ್ತ-ಔದ್ಯೋಗಿಕ ಚಟುವಟಿಕೆ ನಡೆಸುವ ಸಂಚಿನೊಂದಿಗೆ ಅರಣ್ಯನಾಶಕ್ಕೆ ಮುಂದಾಗಿದ್ದಾರೆ. ಅಭಿವೃದ್ಧಿಯ ನಾಟಕ ಪ್ರದರ್ಶನ ನಡೆಸುತ್ತಾ ಹಣದಾಸೆಗೆ ಇಡೀ ಪಶ್ಚಿಮ ಘಟ್ಟ ಸೂಕ್ಷ್ಮ ಪರಿಸರ ವಲಯಕ್ಕೆ ಕೊಳ್ಳಿ ಇಡಲು ಸಜ್ಜಾಗಿದ್ದಾರೆ. ಉಪಗ್ರಹದ ಸಮೀಕ್ಷೆ ವರದಿ ಆಧಾರದಲ್ಲಿ ಕಸ್ತೂರಿ ರಂಗನ್ ವರದಿ ಇರುವುದರಿಂದ ಅದು ಅಭಿವೃದ್ಧಿಗೆ ಮಾರಕವಾಗಿದೆಯೆಂದು ‘ಕಸ್ತೂರಿ ರಂಗನ್ ವರದಿ’ ಯನ್ನು ತಿರಸ್ಕರಿಸಲು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದಾರೆ. ಪಶ್ಚಿಮ ಘಟ್ಟ ಅರಣ್ಯಕ್ಕೆ “ಸೂಕ್ಷ್ಮ ಪರಿಸರ ವಲಯ”(ಬಫರ್ ಝೋನ್) ಪಟ್ಟ ಬೇಡವೆಂದು ಪಟ್ಟು ಹಿಡಿದಿರವ ಕರ್ನಾಟಕದ ಅಷ್ಟೂ ರಾಜಕಾರಣಿಗಳು ರಾಜ್ಯ ಸಚಿವ ಸಂಪುಟದಲ್ಲೇ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ ಎಂದರೆ ಊಹಿಸಿಕೊಳ್ಳಿ. ಪಶ್ಚಿಮ ಘಟ್ಟ ಪರಿಸರ ಉಳಿಸಲು ಕಸ್ತೂರಿ ರಂಗನ್ ವರದಿ ಪರವಾಗಿ ಧ್ವನಿ ಎತ್ತಬೇಕಿದ್ದ ವಿರೋಧ ಪಕ್ಷಗಳೂ ಕಸ್ತೂರಿ ರಂಗನ್ ವರದಿ ವಿರೋಧಸಿದ ನಿರ್ಣಯಕ್ಕೆ ಕೈ ಜೋಡಿಸಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ! ಸಂತೆಯಲ್ಲಿ ದೋಚಲು ಗಂಟುಕಳ್ಳರೆಲ್ಲ ಒಂದಾದಂತೆ ಎಲ್ಲಾ ಭ್ರಷ್ಟ ರಾಜಕಾರಣಿಗಳು ಕೂಡ ‘ಅರಣ್ಯ ಹತ್ಯೆ’ ಗೆ ಹಸಿರು ನಿಶಾನೆ ತೋರುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಬಫರ್ ಝೋನ್ ಪ್ರದೇಶವೆಂದು 1543 ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿ ಅಡಿಯಲ್ಲಿ ಘೋಷಿಸಿರುವುದರಿಂದ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಜೀವನೋಪಾಯಕ್ಕೆ ಧಕ್ಕೆ ಯಾಗುತ್ತದೆ ಎಂಬ ವಿಚಿತ್ರ ಕುಂಟು ನೆಪವೊಡ್ಡಿ ಪಶ್ಚಿಮ ಘಟ್ಟ ಅರಣ್ಯದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕಾಂಕ್ರೀಟ್ ಕಾರಿಡಾರು, ಅಲ್ಲಲ್ಲಿ ಪ್ಲೈ ಓವವರ್ ಮೇಲ್ಸೇತುವೆ ನಿರ್ಮಾಣ ಮಾಡಿ 40% ಕಾಂಟ್ರಾಕ್ಟ್ ಕಮಿಷನ್ ಒಡೆಯುವುದರ ಜೊತೆಗೆ ಲಕ್ಷಾಂತರ ಮರಗಿಡ ಜೀವವೈವಿಧ್ಯ ಪರಿಸರವನ್ನು ನಾಶಮಾಡಲು ಮುಂದಾಗಿದ್ದಾರೆ. ಈ ಹಿಂದೆ ಪ್ರೊಫೆಸರ್ ಮಾಧವ ಗಾಡ್ಗೀಳ್ ಸಮಿತಿ ಕೂಡ ಪಶ್ಚಿಮ ಘಟ್ಟಗಳಲ್ಲಿನ ಅಭಿವೃದ್ಧಿ ಯೋಜನೆಗಳು ಹೇಗೆ ಜೀವವೈವಿಧ್ಯತೆಯನ್ನು ನಾಶಮಾಡುತ್ತವೆ ಎಂದು ಉದಾಹರಣೆ ಸಹಿತ ವರದಿ ಕೊಟ್ಟಿತ್ತು. ಆ ವರದಿಯಲ್ಲಿ ಗುಂಡ್ಯಾ ಯೋಜನೆಯನ್ನು ಕೈಬಿಡುವಂತೆ ಶಿಫಾರಸು ಮಾಡಲಾಗಿತ್ತು.
ಚಾಮರಾಜನಗರ-ಸತ್ಯಮಂಗಲ, ಹುಬ್ಬಳ್ಳಿ-ಅಂಕೋಲ, ತಾಳಗುಪ್ಪ-ಹೊನ್ನಾವರ, ಕೊಂಕಣಿ ರೈಲು ಮಾರ್ಗಗಳನ್ನು ಟೀಕಿಸಲಾಗಿತ್ತು! ಬಂಡಿಪುರ ಅಭಯಾರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ಕೇರಳದ ವ್ಯಾಪಾರಿ ಗಳು ರಾತ್ರಿ ಸಂಚಾರಕ್ಕೆ ಬೇಡಿಕೆ ಇಟ್ಟಿದ್ದನ್ನು ಗಾಡ್ಗೀಳ್ ವರದಿ ತಿರಸ್ಕರಿಸಿತ್ತು. ಜೊತೆಗೆ ಪಶ್ಚಿಮ ಘಟ್ಟದಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಯಿಂದ ನದಿಯ ಒಡಲು ಬರಿದಾಗುತ್ತಿದೆ ಎಂದು ಉಲ್ಲೇಖಿಸಲಾಗಿತ್ತು! ಅರಣ್ಯದೊಳಗೇ ಬ್ರಹತ್ ಗಣಿಗಾರಿಕೆ, ದೊಡ್ಡ ಜಲಾಶಯ ಗಳ ನಿರ್ಮಾಣ, ಥರ್ಮಲ್ ವಿದ್ಯುತ್ ಸ್ಥಾವರ ಗಳಿಂದ ಪಶ್ಚಿಮ ಘಟ್ಟ ನಾಶಕ್ಕೆ ಮುನ್ನುಡಿ ಬರೆಯಲಾಗುತ್ತದೆ ಎಂದು ವರದಿ ಎಚ್ಚರಿಕೆ ನೀಡಿತ್ತು! ಪರಿಸರ ಪ್ರವಾಸ ವಲಯ ನಿರ್ಮಾಣವನ್ನೂ ಗಾಡ್ಗೀಳ್ ನೇತೃತ್ವದ ಸಮಿತಿಯು ಬೇಡವೆಂದಿತ್ತು. ನೇತ್ರಾವತಿ ನದಿ ನೀರು ತಿರುಗಿಸುವ ಯೋಜನೆಯಿಂದ, ಇನ್ನಾವುದೇ ನದಿ ನೀರು ತಿರುವು ಯೋಜನೆಯಿಂದಲೂ ಅಪಾರವಾದ ಅರಣ್ಯ ಸಂಪನ್ಮೂಲ, ಜೀವವೈವಿಧ್ಯ ಪರಿಸರ, ಆಯುರ್ವೇದ ಗಿಡಮೂಲಿಕೆಗಳು ಸರ್ವ ನಾಶವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಈ ಪರಿಸರ ಸ್ನೇಹಿ ವರದಿ ಜಾರಿಗೆ ತರಲು ಯಾವ ಆಳುವ ಸರ್ಕಾರಗಳು ಧೈರ್ಯ ತೋರಲೇ ಇಲ್ಲ. ಈಗ ಮಾರ್ಪಾಡು ಮಾಡಿರುವ ಕಸ್ತೂರಿ ರಂಗನ್ ವರದಿಯು ಗಾಡ್ಗೀಳ್ ವರದಿಗಿಂತ ಜನವಸತಿ ಪ್ರದೇಶಗಳಿಗೆ 50% ಸಹಕಾರಿಯಾಗಿದೆ ಎನ್ನಲಾಗುತ್ತಿದೆಯಾದರೂ, ಸರ್ಕಾರ ಗಳು ಇದನ್ನು ಜಾರಿಗೊಳಿಸಲು ಮುಂದಾಗುತ್ತಿಲ್ಲ! ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸುವುದು ಕನ್ನಡ ನಾಡಿನ ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಬೇಕು. ಪಶ್ಚಿಮ ಘಟ್ಟ ಅದೂ ಯಾವತ್ತೂ “ಸೂಕ್ಷ್ಮ” ಆದು ಉಸಿರಾಡುವ ಪ್ರತಿ ಕನ್ನಡಿಗನ “ಆತ್ಮ”.
-ಪರಶಿವ ಧನಗೂರು
ಭೂ ಮಾಫಿಯಾಕ್ಪಕೆ ನಲುಗಿದ ಪಶ್ಚಿಮ ಘಟ್ಟ
ಭೂಮಿಮೇಲಿನ ಮನುಷ್ಯರ ನೆಮ್ಮದಿಯ ಬದುಕಿಗೇ ನೇರವಾಗಿ ಕಾರಣವಾಗಿರುವ ಕೆಲವು ಭೂ ಭಾಗಗಳಲ್ಲಿ ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ಗಳು ಕೂಡ ಪ್ರಮುಖವಾಗಿವೆ. ಜೀವವೈವಿಧ್ಯತೆ ಯಿಂದ ತುಂಬಿ ಕಂಗೊಳಿಸುತ್ತಾ, ಲಕ್ಷಾಂತರ ಸೂಕ್ಷ್ಮಾಣು ಜೀವಿಗಳಿಗೆ, ಸಾವಿರಾರು ಪ್ರಾಣಿ ಪಕ್ಷಿ ಪ್ರಭೇದಗಳಿಗೆ, ಆಸರೆಯಾಗಿ ಪರಿಸರ ಸಮತೋಲನವನ್ನು ವಾತಾವರಣದಲ್ಲಿ ಸರಿದೂಗಿಸುತ್ತಾ, ಮಳೆಮಾರುತಗಳನ್ನು ಸೆಳೆಯುತ್ತಾ ಆಹಾರ ಸರಪಳಿಯ ಕೊಂಡಿಯನ್ನು ಸುಸ್ಥಿತಿಯಲ್ಲಿಟ್ಟು, ರೈತರ ಜೀವನಾಡಿಯಾಗಿ ಇಂದು ಕರ್ನಾಟಕದ ವಿಶಾಲ ಮಲೆನಾಡು, ಪಶ್ಚಿಮ ಘಟ್ಟ ಪ್ರದೇಶಗಳು ನಮ್ಮನು ಪೊರೆಯುತ್ತಿವೆ. ಅದಕ್ಕಾಗಿಯೇ ಪ್ರತಿಬಾರಿಯು ವಿಶ್ವಸಂಸ್ಥೆಯ ಉನ್ನತ ಮಟ್ಟದ ವಿಜ್ಞಾನಿಗಳ ತಜ್ಞರ ಸಮಿತಿ ಅತಿಸೂಕ್ಷ್ಮವಾಗಿ, ಗಂಭೀರವಾಗಿ ಎಚ್ಚರಿಸುತ್ತಾ ‘ನಿಮ್ಮ ಉಸಿರಿನ ಭಾಗವಾಗಿರುವ ಪಶ್ಚಿಮ ಘಟ್ಟವನ್ನು ಕಾಪಾಡಿಕೊಳ್ಳಿ!’ ಎಂದು ಅಪಾಯದ ಮುನ್ಸೂಚನೆಯನ್ನು ನೀಡುತ್ತಿದ್ದರೂ ನಾವು ಕನ್ನಡಿಗರು ಎಚ್ಚೆತ್ತು ಕೊಳ್ಳುತ್ತಿಲ್ಲ. ಬುದ್ಧಿ ಕಲಿಯುತ್ತಲೂ ಇಲ್ಲ. ಸುಖದ ಸವಲತ್ತಿನ ಲೋಲುಪತೆಗೆ ಬಿದ್ದಿರುವ ದುರಾಸೆಯ ಮಾನವನಿಗೆ ತಾನು ವಾಸಿಸುವ ಭೂಮಿಯನ್ನು ವಾಸಿಸಲು ಯೋಗ್ಯವಾಗಿರುವಂತೆ ಇಡಲು ಕಾಡುಗಳು, ಬೆಟ್ಟಗುಡ್ಡ ಪಶ್ಚಿಮ ಘಟ್ಟದಂತ ದಟ್ಟ ಅರಣ್ಯಗಳನ್ನು ಉಳಿಸಿಕೊಳ್ಳಬೇಕಾಗುತ್ತದೆಂಬ ಸಾಮಾನ್ಯ ತಿಳುವಳಿಕೆಯೂ ಸತ್ತು ಹೋಗುತ್ತಿದೆ. ಅದಕ್ಕಾಗಿಯೇ ಈಗ ಪಶ್ಚಿಮ ಘಟ್ಟ ದಂತ ಜಗತ್ತಿನ ಪಾರಂಪರಿಕ ಬ್ರಹತ್ ಸೂಕ್ಷ್ಮ ಪರಿಸರ ವಲಯದಲ್ಲೂ ರಿಯಲ್ ಎಸ್ಟೇಟ್ ಮಾಫಿಯಾ ಜಾಲ ವಿಸ್ತರಿಸಿ ಕೊಳ್ಳಲು ಹವಣಿಸುತ್ತಿದೆ. ಅರಣ್ಯದಂಚಿನಲ್ಲಿ,
ಕಾಡಿನ ಹಾಡಿಗಳ ಪಕ್ಕದಲ್ಲೇ ಇಕೋ ಟೂರಿಸಂ ಹೆಸರಿನ ರೆಸಾರ್ಟ್ಗಳು, ಹೈಫೈ ಮಸಾಜ್ ಹೆಸರಿನ ಪ್ರಕ್ರತಿ ಚಿಕಿತ್ಸಾ ಕೇಂದ್ರಗಳು ತಲೆ ಎತ್ತುವ ಕಾಲ ಹತ್ತಿರಾಗುತ್ತಿದೆ. ಏಕೆಂದರೆ ದೇಶದ ಸಮರ್ಥ ಪರಿಸರ ವಿಜ್ಞಾನಿಗಳು ಹತ್ತಿರತ್ತಿರ ಎರಡು ದಶಕಗಳ ಕಾಲ ಅಧ್ಯಯನ ಮಾಡಿ, ಜಗತ್ತಿನ ಜೀವವೈವಿಧ್ಯತೆಯ ಉಳಿವಿಗಾಗಿ ಪರಿಸರ ಕಾಳಜಿಯಿಂದ ನೀಡಿರುವ ವೈಜ್ಞಾನಿಕ ವರದಿಗಳನ್ನು ನಮ್ಮ ರಾಜಕಾರಣಿಗಳು ತಿರಸ್ಕರಿಸಲು ಸಚಿವ ಸಂಪುಟದಲ್ಲೇ ನಿರ್ಧರಿಸುತ್ತಾರೆಂದರೇ, ಅದಕ್ಕೆ ವಿರೋಧ ಪಕ್ಷಗಳೂ ಮೌನ ಸಮ್ಮತಿ ಸೂಚಿಸುತ್ತಾರೆಂದರೇ, ನಮ್ಮನ್ನಾಳುವ ಸರ್ಕಾರಗಳಿಗೇ ಭವಿಷ್ಯದ ಭಾರತದ ಪರಿಸರ ಸೂಕ್ಷ್ಮ ಹವಾಮಾನ ವೈಪರೀತ್ಯದ ಸಂಗತಿಗಳ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲದಿರುವುದು, ಪಶ್ಚಿಮ ಘಟ್ಟಗಳ ಬಗ್ಗೆ ಸರ್ಕಾರಕ್ಕೆ ಸ್ವಲ್ಪವೂ ಕಾಳಜಿ ಇಲ್ಲದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಎಲ್ಲವನ್ನೂ ಮಾರುಕಟ್ಟೆಯ ಸರಕಾಗಿ ನೋಡುತ್ತಿರುವ ಇಂದಿನ ಆಳುವ ಸರ್ಕಾರಗಳು ಈಗ ಈ ದೇಶದ ಎಲ್ಲಾ ಅರಣ್ಯ ಸಂಪನ್ಮೂಲಗಳನ್ನು ಅಭಿವೃದ್ದಿಯ ಹೆಸರಲ್ಲಿ ದೋಚಿ ಮಾರಿಕೊಳ್ಳಲು ಸಜ್ಜಾಗಿರುವಂತೆ ಭಾಸವಾಗುತ್ತಿದೆ. ಗಂಧದನಾಡು ಎಂದು ಕರೆಸಿಕೊಂಡಿರುವ ನಮ್ಮ ಕನ್ನಡ ನಾಡು ಗಂಧದಗುಡಿ ಯೆನಿಸಿಕೊಳ್ಳಲು ಪಶ್ಚಿಮ ಘಟ್ಟದಂತಹ ಜೀವವೈವಿಧ್ಯತೆಯ ಕಾಡು ನದಿ,ಝರಿಗಳ ತಾಣಗಳೇ ಕಾರಣ. ಇಂತಹ ಗಂಧದಗುಡಿಯನ್ನು ಕ್ರಷಿ ಜಮೀನು ವಿಸ್ತರಣೆಯ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಕಳ್ಳರ ಮಾಫಿಯಾ ರಾಜಕಾರಣಿಗಳೊಡನೆ ಶಾಮೀಲಾಗಿ ಪರಿಸರದ ಪರವಾಗಿದ್ದ ಮಾಧವ ಗಾಡ್ಗೀಳ್ ಸಮಿತಿಯ ವರದಿಯನ್ನು ಈ ಹಿಂದೆ ತಿರಸ್ಕರಿಸಿತ್ತು. ಈಗ ಮತ್ತೆ ಪರಿಷ್ಕರಣೆಗೊಳಪಟ್ಟು, ಜನವಸತಿ ಪ್ರದೇಶಗಳಿಗೂ ದಕ್ಕೆ ಯಾಗದಂತೆ ಪಶ್ಚಿಮ ಘಟ್ಟ ಪ್ರದೇಶಗಳ ಪರವಾದ ಡಾ.ಕೆ.ಕಸ್ತೂರಿ ರಂಗನ್ ವರದಿ ಬಂದಿದೆ. ಈ ವರದಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ! ಈ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಪರಿಸರ ಸೂಕ್ಷ್ಮ ವಲಯ (ಬಾಂಬರ್ ಝೋನ್ )ವೆಂದು ಘೋಷಿಸಿದ ಅರಣ್ಯ ಪ್ರದೇಶದಿಂದ ಐದರಿಂದ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾರೂ ಕೂಡ ಕಾರ್ಖಾನೆಗಳನ್ನು ಸ್ಥಾಪಿಸುವಂತಿಲ್ಲ. ಅರಣ್ಯ ಒತ್ತುವರಿ ಮಾಡಿಕೊಂಡು ರಿಯಲ್ ಎಸ್ಟೇಟ್ ಮಾಫಿಯಾ ಗಳು ವಾಣಿಜ್ಯ ಚಟುವಟಿಕೆ, ಸೈಟು, ಬಡಾವಣೆ ನಿರ್ಮಾಣ ಮಾಡುವಂತಿಲ್ಲ. ಮುಖ್ಯವಾಗಿ ಕಾಡಂಚಿನಲ್ಲಿ ಪ್ರಕ್ರತಿ ಚಿಕಿತ್ಸಾ ಕೇಂದ್ರಗಳ ಹೆಸರಿನಲ್ಲಿ ಹೋಂಸ್ಟೇ, ಬಾಡೀ ಮಸಾಜ್ ಪಾರ್ಲರ್, ರೆಸಾರ್ಟ್, ನೈಟ್ ಔಟ್ ರೇವ್ ಪಾರ್ಟಿ ಪಬ್ ಕಲ್ಚರ್ ಫುಲ್ ಬಂದ್! ಇಷ್ಟೆಲ್ಲಾ ನೀತಿ ನಿಯಮ ನಿಬಂಧನೆಗಳಿರುವ ಪರಿಸರ ಸ್ನೇಹಿ ಕಸ್ತೂರಿ ರಂಗನ್ ವರದಿಯಿಂದ ಕರ್ನಾಟಕದ ಜೀವವೈವಿಧ್ಯತೆಯ ತಾಣ ಪಶ್ಚಿಮ ಘಟ್ಟವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬಹುದೆಂಬುದು ಪರಿಸರ ವಿಜ್ಞಾನಿಗಳ ನಿಲುವು.
ಆದರೆ ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಈ ಎಲ್ಲಾ ರಾಜಕೀಯ ಪಕ್ಷಗಳೂ ಈ ಕಸ್ತೂರಿ ರಂಗನ್ ವರದಿಯನ್ನು ನಾನಾ ಕಾರಣಗಳಿಗೆ ವಿರೋಧಿಸುತ್ತಿದ್ದಾರೆ. ಸೂಕ್ಷ್ಮ ಸಂರಕ್ಷಿತ ಅರಣ್ಯ ಪ್ರದೇಶದ ಕಾಡಿನ ಮಧ್ಯೆ ಇರುವ ಕೆಲವು ಆದಿವಾಸಿ ಬುಡಕಟ್ಟು ಜನಾಂಗದವರನ್ನು, ಒಕ್ಕಲೆಬ್ಬಿಸಿ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಪಶ್ಚಿಮ ಘಟ್ಟ ಪ್ರದೇಶವನ್ನು ‘ಸೂಕ್ಮ’ ಪಟ್ಟಿಯಿಂದ ಬಿಡುಗಡೆ ಗೊಳಿಸಿ, ರಿಯಲ್ ಎಸ್ಟೇಟ್ ಮಾಫಿಯಾ, ಟಿಂಬರ್ ಮಾಫಿಯಾ, ಬಾಡಿ ಮಸಾಜ್ ಇಕೋ ಟೂರಿಸಂ ಬೆಳೆಸಲು ಸಹಾಯವಾಗುವಂತೆ, ಕಸ್ತೂರಿ ರಂಗನ್ ವರದಿಯನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ದುಂಬಾಲು ಬಿದ್ದಿರುವ ರಾಜಕೀಯ ಪಕ್ಷಗಳಿಗೆ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿರುವ ಪ್ರಾಣಿ ಪಕ್ಷಿ ಪ್ರಭೇದಗಳ ಸುರಕ್ಷತೆ ಕಟ್ಟಿಕೊಂಡು ಏನಾಗಬೇಕಿದೇ? ಅಲ್ಲಿರುವ ಬಾಗೇ ಮರಗಳ ಗುಂಪು ಬಂದು ಬಿಜೆಪಿಗೇನೂ ಮತಹಾಕುವುದಿಲ್ಲ! ಕಾಡಲ್ಲಿರುವ ಕಾಡುಬೇವಿನ ಮರಗಳು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರಕ್ಕೆ ಬರುವುದಿಲ್ಲ! ಜಾಲಿಮರಗಳು ಜೆಡಿಎಸ್ ಗೆ ಜೈ ಎನ್ನುವುದೂ ಇಲ್ಲ! ಒಟ್ಟಾರೆ ಅರಣ್ಯದಲ್ಲಿರುವ ಅಷ್ಟೂ ಮರಗಿಡ ಪ್ರಾಣಿಪಕ್ಷಿಗಳಿಗೇ ಮತದಾರರ ಪಟ್ಟಿಯಲ್ಲಿ ಹೆಸರೇ ಇಲ್ಲ! ಓಟಿನ ರಾಜಕಾರಣಕ್ಕೆ ಒಳಪಡದ ಬಡಪಾಯಿ ಪಶ್ಚಿಮ ಘಟ್ಟದ ಜೀವವೈವಿಧ್ಯ, ಪ್ರಾಣಿ ಪಕ್ಷಿ, ಮರಗಿಡಗಳು ಈಗ ತಮ್ಮನ್ನು ಉಳಿಸಿಕೊಳ್ಳಲು ವಿಧಾನಸೌಧ ಚಲೋ-ಮುತ್ತಿಗೆ ಮಾಡುವ ಯಾವ ಅಳುಕೂ ಈಗ ನಮ್ಮ ರಾಜಕಾರಣಿಗಳಿಗೆ ಇಲ್ಲದಿರುವುದರಿಂದ, ಮೂಕ ಪ್ರಾಣಿಗಳ ನೆಲೆವೀಡಾದ ಪಶ್ಚಿಮ ಘಟ್ಟದ ಮೇಲೆ ಮುಖ್ಯಮಂತ್ರಿಗಳಿಗೂ ಕರುಣೆ ಇಲ್ಲ! ಮೌನವನ್ನೇ ಉಸಿರಾಡಿ ನಮ್ಮೆದೆಯ ಉಸಿರಾಗಿರುವ ಪಶ್ಚಿಮ ಘಟ್ಟದ ಅರಣ್ಯಗಳ ಬಗ್ಗೆ ಸಚಿವ ಸಂಪುಟಕ್ಕೆ ಸಣ್ಣ ಪ್ರೀತಿಯೂ ಇಲ್ಲ! ಈಗ ಈ ರಾಜಕಾರಣಿಗಳಿಗೇ ಕಾಡು, ಗಾಳಿ, ನದಿ,ಜಲಪಾತ, ಪ್ರಾಣಿಪಕ್ಷಿ ಯಾವುದೂ ಬೇಕಾಗಿಲ್ಲ. ಓಟಿನ ರಾಜಕಾರಣ..40%ಕಮಿಷನ್ ಹಣ..! ಇವು ಮಾತ್ರ ಈಗ ಸರ್ವ ಪಕ್ಷಗಳ ಧ್ಯೇಯ ಮಂತ್ರ!
ಇಷ್ಟೆಲ್ಲಾ ನಡೆಯುತ್ತಿದ್ದರೂ ಪಶ್ಚಿಮ ಘಟ್ಟಗಳು ಈ ಓಟಿನ ರಾಜಕಾರಣದಿಂದ ಮುಂದೊಂದು ದಿನ ಸರ್ವ ನಾಶವಾಗುವ ಮುನ್ಸೂಚನೆ ಇದ್ದರೂ, ಈ ನಾಡಿನ ಯಾವೊಬ್ಬ ಪ್ರಜ್ಞಾವಂತ ನಾಗರಿಕನೂ ಬಾಯ್ ಬಿಚ್ಚಿಲ್ಲ! ನಾಡಿನ ನೆಲ,ಜಲ, ಕಾಡಿನ ರಕ್ಷಣೆಗೆ ಸಿದ್ಧವೆಂದು ಬೋರ್ಡು ಹಾಕಿಕೊಂಡು ಓಡಾಡುತ್ತಿರುವ ಕರ್ನಾಟಕ ರಕ್ಷಣಾ ಪಡೆಗಳ ಸದ್ದೇ ಇಲ್ಲ! ಪರಿಸರ ಹೋರಾಟಗಾರರು ಪತ್ರಕರ್ತರು, ಬರಹಗಾರರು,ಚಲನ ಚಿತ್ರ ನಟರು, ಎತ್ತಹೋದರೋ ಗೊತ್ತಾಗುತ್ತಿಲ್ಲ! ನಟ ಪುನೀತ್ ರಾಜಕುಮಾರ್ ರ ಗಂಧದಗುಡಿ ಕಿರುಚಿತ್ರದ ಟೀಸರ್ ನೋಡಿ ‘ಕನ್ನಡ ನಾಡು ನಮ್ಮ ಕಾಡು ಗಂಧದ ಬೀಡು!’ ಎಂದೆಲ್ಲಾ ಕಾಮೆಂಟ್ ಮಾಡುತ್ತಾ ಕಾಲಹರಣ ಮಾಡುತ್ತಿರುವ ಸೋಷಿಯಲ್ ಮೀಡಿಯಾ ವಕ್ತಾರರು ಪುನೀತ್ ರಾಜಕುಮಾರ್ ರ ನಿಜವಾದ ಕನಸಿನ ಗಂಧದಗುಡಿ ಪಶ್ಚಿಮಘಟ್ಟ ಅರಣ್ಯಕ್ಕೆ ಬೆಂಕಿಬೀಳುವ ಲಕ್ಷಣಗಳಿದ್ದರೂ ನಿದ್ದೆ ಮಾಡುತ್ತಿದ್ದಾರೆ! ಜಗತ್ತಿನ ಸರ್ವಜನರ ಉಸಿರಿಗೆ ಜೀವಾಳವಾಗಿರುವ ಪಶ್ಚಿಮ ಘಟ್ಟವನ್ನು “ಸೂಕ್ಷ್ಮ ಪರಿಸರ ವಲಯ” ವೆಂದು ಕಠಿಣ ಕಾನೂನು ಅನುಷ್ಠಾನ ಮಾಡಿ ಉಳಿಸಿಕೊಳ್ಳದಿದ್ದರೇ, ಮುಂದೊಂದು ದಿನ ಇಡೀ ಜಗತ್ತಿಗೆ ಬಾರೀ ಗಂಡಾಂತರ ಎದುರಾಗುವುದು ಖಚಿತ.
ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಹತ್ಯೆ!
ಈ ರಾಜಕಾರಣದ ಅಂತಿಮ ಗುರಿ ಹಣ ಸಂಪಾದನೆ! ಎನ್ನುವಂತಾಗಿರುವ ಇಂದಿನ ಕಾಲಘಟ್ಟದಲ್ಲಿ ಆ ಹಣವನ್ನು ಹೇಗಾದರೂ, ಯಾವ ರೀತಿಯಲ್ಲಾದರೂ ತಮ್ಮದಾಗಿಸಿಕೊಳ್ಳಬೇಕೆಂಬ ಹಪಾಹಪಿಯ ದುರಾಸೆಗೆ ಬಿದ್ದಿರುವ ರಾಜಕಾರಣಿಗಳು, ಕೋವಿಡ್19 ಕಾಯಿಲೆಯ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಹಗಹರಣ ನಡೆಸಿ, ತಮ್ಮ ಖಜಾನೆ ತುಂಬಿಸಿಕೊಂಡಾಗಲೂ, ಇದು ಬಡವರನ್ನೂ, ರೋಗಿಗಳನ್ನೂ, ಕೋರೋನಾ ವೈರಸ್ ನಿಂದ ಸತ್ತವರನ್ನೂ ವಂಚಿಸಿದ ಪಾಪದ ಹಣವೆಂದು ಅಸಹ್ಯ ಪಟ್ಟುಕೊಳ್ಳಲಿಲ್ಲ. ಇಂತಹ ರಾಜಕಾರಣಿಗಳು, ಬಂಡವಾಳಶಾಹಿ ಬಿಸಿನೆಸ್ ಮ್ಯಾನ್ ಗಳು ಈಗ ಅಭಿವೃದ್ಧಿ ಹೆಸರಿನಲ್ಲಿ ಆತ್ಮಹತ್ಯಾತ್ಮಕ ಕೆಲಸಕ್ಕೆ ಕೈ ಹಾಕಿದ್ದಾರೆ! ಈ ಹಿಂದೆ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟ ಪ್ರದೇಶಗಳ ಬಗ್ಗೆ ವರದಿಗೆ ನೇಮಿಸಿದ್ದ ಗಾಡ್ಗೀಳ್ ನೇತೃತ್ವದ ಸಮಿತಿಯ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ ಆಳುವ ಸರ್ಕಾರಗಳು, ಈಗ ಕಸ್ತೂರಿ ರಂಗನ್ ವರದಿಯಿಂದಲೂ ಜನರ ಜೀವನೋಪಾಯಕ್ಕೆ ಧಕ್ಕೆ ಎಂಬ ಸುಳ್ಳು ವದಂತಿ ಹಬ್ಬಿಸಿ, ಪಶ್ಚಿಮಘಟ್ಟ ವೆಂಬ ವೈವಿಧ್ಯದ ತಾಣವನ್ನು ಸರ್ವನಾಶ ಮಾಡಲು ಸ್ಕೆಚ್ಚು ರೆಡಿಮಾಡಿದ್ದಾರೆ! ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ರನ್ನುಬೇಟಿಯಾಗಿದ್ದ ಕರ್ನಾಟಕದ ಅರಣ್ಯ ಸಚಿವ ಆನಂದ್ ಸಿಂಗ್ ಮತ್ತು ಇತರ ಮಂತ್ರಿಗಳ ನಿಯೋಗ ಪಶ್ಚಿಮ ಘಟ್ಟವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ವೆಂದು ಘೋಷಿಸದಂತೆ ಮನವಿ ಮಾಡಿ ಬಂದಿದೆ! ಇವರಿಗೆ ಪಶ್ಚಿಮ ಘಟ್ಟದ ಜೀವವೈವಿಧ್ಯತೆಯ ಬಗ್ಗೆ ಯಾಗಲೀ, ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಅರಣ್ಯಪ್ರದೇಶ ಹೊಂದಿರುವುದರಿಂದ ಅದನ್ನು ಉಳಿಸಿಕೊಳ್ಳಬೇಕೆಂಬ ಕಾಳಜಿಯಾಗಲೀ, ಕಿಂಚಿತ್ತೂ ಕಾಣುತ್ತಿಲ್ಲ. ಸರ್ಕಾರ ಮತ್ತು ಅದರ ಪಾಲುದಾರರಾದ ಬಂಡವಾಳಶಾಹಿ ಕಂಪನಿಗಳು, ಆ ಪಶ್ಚಿಮಘಟ್ಟ ಕಾಡಿನ ಅರಣ್ಯದಲ್ಲಿ ವಿತ್ತ-ಔದ್ಯೋಗಿಕ ಚಟುವಟಿಕೆ ನಡೆಸುವ ಸಂಚಿನೊಂದಿಗೆ ಅರಣ್ಯನಾಶಕ್ಕೆ ಮುಂದಾಗಿದ್ದಾರೆ. ಅಭಿವೃದ್ಧಿಯ ನಾಟಕ ಪ್ರದರ್ಶನ ನಡೆಸುತ್ತಾ ಹಣದಾಸೆಗೆ ಇಡೀ ಪಶ್ಚಿಮ ಘಟ್ಟ ಸೂಕ್ಷ್ಮ ಪರಿಸರ ವಲಯಕ್ಕೆ ಕೊಳ್ಳಿ ಇಡಲು ಸಜ್ಜಾಗಿದ್ದಾರೆ. ಉಪಗ್ರಹದ ಸಮೀಕ್ಷೆ ವರದಿ ಆಧಾರದಲ್ಲಿ ಕಸ್ತೂರಿ ರಂಗನ್ ವರದಿ ಇರುವುದರಿಂದ ಅದು ಅಭಿವೃದ್ಧಿಗೆ ಮಾರಕವಾಗಿದೆಯೆಂದು ‘ಕಸ್ತೂರಿ ರಂಗನ್ ವರದಿ’ ಯನ್ನು ತಿರಸ್ಕರಿಸಲು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದಾರೆ. ಪಶ್ಚಿಮ ಘಟ್ಟ ಅರಣ್ಯಕ್ಕೆ “ಸೂಕ್ಷ್ಮ ಪರಿಸರ ವಲಯ”(ಬಫರ್ ಝೋನ್) ಪಟ್ಟ ಬೇಡವೆಂದು ಪಟ್ಟು ಹಿಡಿದಿರವ ಕರ್ನಾಟಕದ ಅಷ್ಟೂ ರಾಜಕಾರಣಿಗಳು ರಾಜ್ಯ ಸಚಿವ ಸಂಪುಟದಲ್ಲೇ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ ಎಂದರೆ ಊಹಿಸಿಕೊಳ್ಳಿ. ಪಶ್ಚಿಮ ಘಟ್ಟ ಪರಿಸರ ಉಳಿಸಲು ಕಸ್ತೂರಿ ರಂಗನ್ ವರದಿ ಪರವಾಗಿ ಧ್ವನಿ ಎತ್ತಬೇಕಿದ್ದ ವಿರೋಧ ಪಕ್ಷಗಳೂ ಕಸ್ತೂರಿ ರಂಗನ್ ವರದಿ ವಿರೋಧಸಿದ ನಿರ್ಣಯಕ್ಕೆ ಕೈ ಜೋಡಿಸಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ! ಸಂತೆಯಲ್ಲಿ ದೋಚಲು ಗಂಟುಕಳ್ಳರೆಲ್ಲ ಒಂದಾದಂತೆ ಎಲ್ಲಾ ಭ್ರಷ್ಟ ರಾಜಕಾರಣಿಗಳು ಕೂಡ ‘ಅರಣ್ಯ ಹತ್ಯೆ’ ಗೆ ಹಸಿರು ನಿಶಾನೆ ತೋರುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಬಫರ್ ಝೋನ್ ಪ್ರದೇಶವೆಂದು 1543 ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿ ಅಡಿಯಲ್ಲಿ ಘೋಷಿಸಿರುವುದರಿಂದ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಜೀವನೋಪಾಯಕ್ಕೆ ಧಕ್ಕೆ ಯಾಗುತ್ತದೆ ಎಂಬ ವಿಚಿತ್ರ ಕುಂಟು ನೆಪವೊಡ್ಡಿ ಪಶ್ಚಿಮ ಘಟ್ಟ ಅರಣ್ಯದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕಾಂಕ್ರೀಟ್ ಕಾರಿಡಾರು, ಅಲ್ಲಲ್ಲಿ ಪ್ಲೈ ಓವವರ್ ಮೇಲ್ಸೇತುವೆ ನಿರ್ಮಾಣ ಮಾಡಿ 40% ಕಾಂಟ್ರಾಕ್ಟ್ ಕಮಿಷನ್ ಒಡೆಯುವುದರ ಜೊತೆಗೆ ಲಕ್ಷಾಂತರ ಮರಗಿಡ ಜೀವವೈವಿಧ್ಯ ಪರಿಸರವನ್ನು ನಾಶಮಾಡಲು ಮುಂದಾಗಿದ್ದಾರೆ.
ಈ ಹಿಂದೆ ಪ್ರೊಫೆಸರ್ ಮಾಧವ ಗಾಡ್ಗೀಳ್ ಸಮಿತಿ ಕೂಡ ಪಶ್ಚಿಮ ಘಟ್ಟಗಳಲ್ಲಿನ ಅಭಿವೃದ್ಧಿ ಯೋಜನೆಗಳು ಹೇಗೆ ಜೀವವೈವಿಧ್ಯತೆಯನ್ನು ನಾಶಮಾಡುತ್ತವೆ ಎಂದು ಉದಾಹರಣೆ ಸಹಿತ ವರದಿ ಕೊಟ್ಟಿತ್ತು. ಆ ವರದಿಯಲ್ಲಿ ಗುಂಡ್ಯಾ ಯೋಜನೆಯನ್ನು ಕೈಬಿಡುವಂತೆ ಶಿಫಾರಸು ಮಾಡಲಾಗಿತ್ತು. ಚಾಮರಾಜನಗರ-ಸತ್ಯಮಂಗಲ, ಹುಬ್ಬಳ್ಳಿ-ಅಂಕೋಲ, ತಾಳಗುಪ್ಪ-ಹೊನ್ನಾವರ, ಕೊಂಕಣಿ ರೈಲು ಮಾರ್ಗಗಳನ್ನು ಟೀಕಿಸಲಾಗಿತ್ತು! ಬಂಡಿಪುರ ಅಭಯಾರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ಕೇರಳದ ವ್ಯಾಪಾರಿ ಗಳು ರಾತ್ರಿ ಸಂಚಾರಕ್ಕೆ ಬೇಡಿಕೆ ಇಟ್ಟಿದ್ದನ್ನು ಗಾಡ್ಗೀಳ್ ವರದಿ ತಿರಸ್ಕರಿಸಿತ್ತು. ಜೊತೆಗೆ ಪಶ್ಚಿಮ ಘಟ್ಟದಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಯಿಂದ ನದಿಯ ಒಡಲು ಬರಿದಾಗುತ್ತಿದೆ ಎಂದು ಉಲ್ಲೇಖಿಸಲಾಗಿತ್ತು! ಅರಣ್ಯದೊಳಗೇ ಬ್ರಹತ್ ಗಣಿಗಾರಿಕೆ, ದೊಡ್ಡ ಜಲಾಶಯ ಗಳ ನಿರ್ಮಾಣ, ಥರ್ಮಲ್ ವಿದ್ಯುತ್ ಸ್ಥಾವರ ಗಳಿಂದ ಪಶ್ಚಿಮ ಘಟ್ಟ ನಾಶಕ್ಕೆ ಮುನ್ನುಡಿ ಬರೆಯಲಾಗುತ್ತದೆ ಎಂದು ವರದಿ ಎಚ್ಚರಿಕೆ ನೀಡಿತ್ತು! ಪರಿಸರ ಪ್ರವಾಸ ವಲಯ ನಿರ್ಮಾಣವನ್ನೂ ಗಾಡ್ಗೀಳ್ ನೇತೃತ್ವದ ಸಮಿತಿಯು ಬೇಡವೆಂದಿತ್ತು. ನೇತ್ರಾವತಿ ನದಿ ನೀರು ತಿರುಗಿಸುವ ಯೋಜನೆಯಿಂದ, ಇನ್ನಾವುದೇ ನದಿ ನೀರು ತಿರುವು ಯೋಜನೆಯಿಂದಲೂ ಅಪಾರವಾದ ಅರಣ್ಯ ಸಂಪನ್ಮೂಲ, ಜೀವವೈವಿಧ್ಯ ಪರಿಸರ, ಆಯುರ್ವೇದ ಗಿಡಮೂಲಿಕೆಗಳು ಸರ್ವ ನಾಶವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಈ ಪರಿಸರ ಸ್ನೇಹಿ ವರದಿ ಜಾರಿಗೆ ತರಲು ಯಾವ ಆಳುವ ಸರ್ಕಾರಗಳು ಧೈರ್ಯ ತೋರಲೇ ಇಲ್ಲ. ಈಗ ಮಾರ್ಪಾಡು ಮಾಡಿರುವ ಕಸ್ತೂರಿ ರಂಗನ್ ವರದಿಯು ಗಾಡ್ಗೀಳ್ ವರದಿಗಿಂತ ಜನವಸತಿ ಪ್ರದೇಶಗಳಿಗೆ 50% ಸಹಕಾರಿಯಾಗಿದೆ ಎನ್ನಲಾಗುತ್ತಿದೆಯಾದರೂ, ಸರ್ಕಾರ ಗಳು ಇದನ್ನು ಜಾರಿಗೊಳಿಸಲು ಮುಂದಾಗುತ್ತಿಲ್ಲ! ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸುವುದು ಕನ್ನಡ ನಾಡಿನ ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಬೇಕು. ಪಶ್ಚಿಮ ಘಟ್ಟ ಅದೂ ಯಾವತ್ತೂ “ಸೂಕ್ಷ್ಮ” ಆದು ಉಸಿರಾಡುವ ಪ್ರತಿ ಕನ್ನಡಿಗನ “ಆತ್