ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ

Share

ನವದೆಹಲಿ, ಮೇ ೨೯: ದೇಶದಲ್ಲಿ ಕಳೆದ ೨೪ ಗಂಟೆಯಲ್ಲಿ ಹೊಸದಾಗಿ ೧,೭೩,೭೯೦ ಕೊರೊನಾ ಸೋಂಕಿತರು ಪತ್ತೆಯಾಗಿದ್ದರೆ೩೬೧೭ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಈ ಮೂಲಕ ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದೆ ಅದೇ ರೀತಿ ಸಾವುಗಳು ಕೂಡ ಕಡಿಮೆಯಾಗುತ್ತಿವೆ.ಯಾವಾಗ ಬೇಕಾದರೂ ಕೊರೊನಾದ ಮೂರನೇ ಅಲೆ ಶುರುವಾಗಬಹುದು. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏನೋ ಕಡಿಮೆಯಾಗುತ್ತಿದೆ ಆದರೆ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ.
ಒಟ್ಟು ೨,೭೭,೨೯,೨೪೭ ಪ್ರಕರಣಗಳಿವೆ, ಇದುವರೆಗೆ ೨,೫೧,೭೮,೦೧೧ ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ೩,೨೨,೫೧೨ ಮಂದಿ ಮೃತಪಟ್ಟಿದ್ದಾರೆ, ೨೨,೨೮,೭೨೪ ಸಕ್ರಿಯ ಪ್ರಕರಣಗಳಿವೆ.
ಇದುವರೆಗೆ ಒಟ್ಟು ೨೦,೮೯,೦೨,೪೪೫ ಮಂದಿಗೆ ಲಸಿಕೆ ನೀಡಲಾಗಿದೆ. ಮೇ ೨೮ರವರೆಗೆ ೩೪,೧೧,೧೯,೯೦೯ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಂದೇ ದಿನದಲ್ಲಿ ೨೦,೮೦,೦೪೮ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

Girl in a jacket
error: Content is protected !!