ಹತ್ತನೇ ತರಗತಿಗೆ ನೀಡುತ್ತಿದ್ದ ಗ್ರೇಸ್ ಮಾರ್ಕ್ಸ್ ರದ್ದು

Share

ಹತ್ತನೇತರಗತಿಗೆ ನಿಡುತ್ತಿದ್ದ ಗ್ರೇಸ್ ಮಾರ್ಕ್ಸ್ ರದ್ದು

  by-ಕೆಂಧೂಳಿ

ಬೆಂಗಳೂರು, ಫೆ,೦3-ಇನ್ನು ಮುಂದೆ ಹತ್ತನೇ ತರಗತಿ ಪರೀಕ್ಷೆಯಲ್ಲಿ ನೀಡುತ್ತಿದ್ದ ಗ್ರೇಸ್ ಮಾರ್ಕ್ಸ್ ಇರುವುದಿಲ್ಲ.

ಹೌದು..ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಈ ಅಂಕ ನೀಡಲು ತೀರ್ಮಾನಿಸಿದ್ದು ಅದು ಇಲ್ಲಿಯವರೆಗೂ ಮುಂದುವರೆದಿತ್ತು ಈಗ ಅದನ್ನು ರದ್ದುಗೊಳಿಸಲಾಗಿದೆ.
ಈ ಕುರಿತು ಸುದ್ದಿಗಾರರ ಜೊತೆಬಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇದನ್ನು ತಿಳಿಸಿದ್ದಾರೆ.

ಸಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಕೊಟ್ಟಿದ್ದ 10 % ಗ್ರೇಸ್ ಅಂಕ ರದ್ದುಗೊಳಿಸಲಾಗಿದೆ ಎಂದರು.ಈ ವರ್ಷದಿಂದ 10ನೇ ತರಗತಿ (ಎಸ್‌ಎಸ್‌ಎಲ್ಸಿ) ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಅಕ ನೀಡುವ ವ್ಯವಸ್ಥೆಯನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದರು.

ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಗೆ ಅವಕಾಶ ನೀಡುವ ವಿಚಾರಕ್ಕೆ ಕುರಿತಂತೆ ಮಾತನಾಡಿದ ಸಚಿವರು ಹಿಜಾಬ್ ವಿವಾದ ಸದ್ಯ ಕೋರ್ಟ್ ನಲ್ಲಿದೆ. ಇನ್ನೂ ಇತ್ಯರ್ಥವಾಗಿಲ್ಲ. ಈ ಬಗ್ಗೆ ಗೃಹ ಸಚಿವರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

Girl in a jacket
error: Content is protected !!