ಸಿಎಂ ಬದಲಾವಣೆ ಖಚಿತ ; ಪರ್ಯಾಯ ಮುಖ್ಯಮಂತ್ರಿ ಯಾರು?

Share

ಬೆಂಗಳೂರು,10:ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆ ಖಚಿತವಾಗಿದ್ದು ಅವರ ಸ್ಥಾನಕ್ಕೆ ಯಾರು ಸೂಕ್ತ ಎಂಬ ಚರ್ಚೆ ಸೋಶಿಯಲ್ ಮೀಡಿಯಾ ದಲ್ಲಿ ಎರಡು ದಿನಗಳಿಂದ ಆರಂಭವಾಗಿದೆ.ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕೆಲವರು ಖಚಿತವಾಗಿ ಹೇಳುತ್ತಿದ್ದಾರೆ .ಮತ್ತೆ ಕೆಲವರು ಗೋವಿಂದ ಕಾರಜೋಳ,dr ಅಶ್ವತ್ಥ ನಾರಾಯಣ,ಆರ್ ಅಶೋಕ್,ಜಗದೀಶ ಶೆಟ್ಟರ್,ಅರವಿಂದ ಬೆಲ್ಲದ್ ಮುಂತಾದವರ ಹೆಸರುಗಳನ್ನು ಪ್ರಸ್ತಾಪಿಸುತ್ತಿದ್ದಾರೆ.ನಾನೂ ಕೂಡ ನನ್ನ ಆಯ್ಕೆಯನ್ನು ಪ್ರಸ್ತಾಪಿಸುತಿದ್ದೇನೆ.ರಾಜ್ಯದ ಸಚಿವರಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ನೈತಿಕ ಶಕ್ತಿಯನ್ನು ಹೊಂದಿರುವ ಏಕೈಕ ವ್ಯಕ್ತಿ ಕೋಟಾ ಶ್ರೀನಿವಾಸ ಪೂಜಾರಿ.ಅವರು ಕೃಷಿ ಕಾರ್ಮಿಕರಾಗಿದ್ದರು.ನಂತರ ಮದುವೆಗಳ ಫೋಟೋಗ್ರಾಫರ್ ಆಗಿದ್ದರು.ಅವರು ಓದಿರುವುದು ಕೇವಲ ಏಳನೇ ಕ್ಲಾಸ್.ಆದರೆ ಅವರ ಲೋಕ ಜ್ಞಾನ ಅಪಾರ.ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ MLC ಆಗಿದ್ದಾರೆ.ನಂತರ gಸಚಿವರಾಗಿದ್ದಾರೆ.ಸಂಬಳ,DA ,HRA ಎಲ್ಲಾ ಸೇರಿ ಸುಮಾರು ಎರಡು ವರೆ ಲಕ್ಷ ರೂಪಾಯಿ ಅವರಿಗೆ ಪ್ರತಿ ತಿಂಗಳು ಬರುತ್ತದೆ.ಯಾವುದೇ ತಿಂಗಳಲ್ಲಿ ಒಂದು ಅಥವಾ ಎರಡನೇ ತಾರೀಕು ಸಂಬಳ ಬರದಿದ್ದರೆ ಅವರಿಗೆ ಜೀವನ ನಿರ್ವಹಣೆ ಕಷ್ಟ.ಅವರಿಗೆ ಬೇರೆ ಆದಾಯವಿಲ್ಲ.ಅವರು ಅಧಿಕಾರಿಗಳಿಂದ ಹಫ್ತಾ ಅಥವಾ ಮಾಮೂಲನ್ನು ಮತ್ತು ಕಂಟ್ರಾಕ್ಟರ್ ಗಳಿಂದ ಕಮಿಷನ್ ವಸೂಲು ಮಾಡುವುದಿಲ್ಲ.ಅಂತಹವರನ್ನು ದೂರ ಇಡುತ್ತಾರೆ.ಅವರು ದಕ್ಷಿಣ ಕನ್ನಡ ಜಿಲ್ಲೆಯ ಕೋಟಾದಲ್ಲಿ ಒಂದು ಗುಡಿಸಲು ರೀತಿಯ ಸಾಧಾರಣ ಮನೆಯಲ್ಲಿ ದ್ದರು.ಈಗ ಸಾಲ ಮಾಡಿ ಒಂದು ಮನೆ ಕಟ್ಟಿಸುತ್ತಿದ್ದಾರೆ.ಅವರ ಹೆಂಡತಿ ಮಕ್ಕಳು ಬೆಂಗಳೂರಿಗೆ ಬರುವುದಿಲ್ಲ.ಆದ್ದರಿಂದ ಪೂಜಾರಿಯವರು ಮಂತ್ರಿಯಾಗಿದ್ದರೂ ಸರ್ಕಾರೀ ಬಂಗಲೆಯನ್ನು ಪಡೆದಿಲ್ಲ.ಶಾಸಕರ ಭವನದ ಒಂದು ಕೊಠಡಿಯಲ್ಲೇ ಉಳಿದುಕೊಂಡಿದ್ದಾರೆ.ಮೃಷ್ಟಾನ್ನ ಭೋಜನ ಎದುರಿಗಿದ್ದರೂ ಅವರು ಮುಟ್ಟುವದಿಲ್ಲ.ಇವತ್ತಿಗೂ ಅನ್ನದ ಗಂಜಿಯೇ ಎರಡು ಹೊತ್ತಿನ ಊಟ.ಮುಂಜಾನೆ ಆರು ಗಂಟೆಗೆ ಜನರ ಸಂದರ್ಶನ ಆರಂಭಿಸುತ್ತಾರೆ.ಎಂಟು ಗಂಟೆಗೆ ಮನೆಯಿಂದ ಹೊರಟು ಬಿಡುತ್ತಾರೆ.ದಿನವಿಡೀ ಜನರ ಸಮಸ್ಯೆಗಳನ್ನೂ ಪರಿಹರಿಸಲು ಒಂದು ನಿಮಿಷವೂ ವ್ಯರ್ಥ ಮಾಡದೆ ಪರಿಶೀಲನಾ ಸಭೆ,ಸರ್ಕಾರೀ ಕಾರ್ಯಕ್ರಮಗಳು ಮುಂತಾಗಿ ಸತತವಾಗಿ ಪ್ರಯತ್ನಿಸುತ್ತಾರೆ.ರಜಾ ದಿನಗಳಲ್ಲೂ ಬಿಡುವು ತೆಗೆದುಕೊಳ್ಳುವಿಲ್ಲ.ಒಂದು ನಿಮಿಷವೂ ವ್ಯರ್ಥ ಮಾಡುವುದಿಲ್ಲ,ಅವರ ಮಗ MBA ಪೂರೈಸಿದ್ದು ಸ್ವಂತ ವೃತ್ತಿಯನ್ನು ಆರಂಭಿಸಿದ್ದಾರೆ.ಇನ್ನೂ ಇಬ್ಬರು ಹೆಣ್ಣು ಮಕ್ಕಳು ಕಾಲೇಜು ವ್ಯಾಸಂಗ ಮಾಡುತ್ತಿದ್ದಾರೆ.ಒಂದು ವೇಳೆ ಮಂತ್ರಿ ಹಾಗೂ MLC ಸ್ಥಾನಗಳು ಹೋದರೆ ಅವರಿಗೆ ಬರಬಹುದಾದ ಮೂವತ್ತು ಅಥವಾ ನಲವತ್ತು ಸಾವಿರ ರೂಪಾಯಿ pensionನಲ್ಲಿಯೇ ಜೀವನ ಸಾಗಿಸಬೇಕು.ಬಹುತೇಕ bjp ಸಚಿವರು ಅಧಿಕಾರದಿಂದ ಬರುವ ಎಲ್ಲಾ ದುರ್ಗುಣಗಳನ್ನು ಅಂಟಿಸಿಕೊಂಡಿದ್ದಾರೆ.ಆದರೆ ಅವರ ನಡುವೆ ಪೂಜಾರಿಯರೊಂದು ಅಪರೂಪದ ವ್ಯಕ್ತಿ.ಅವರ ಮುಖ ಚಹರೆ ಯೂ ಸಮಾಜದ ಕಟ್ತಕಡೆಯ ಮನುಷ್ಯನ ಮನಸ್ಸಿನಲ್ಲು ವಿಶ್ವಾಸ ಮೂಡಿಸುವಂತಿದೆ.ರಾಜ್ಯವನ್ನು ದೋಚುವ ಖದೀಮರಿಗಿಂತ ಇಂತಹ ಪ್ರಾಮಾಣಿಕರು ಮುಖ್ಯ ಮಂತ್ರಿ ಖುರ್ಚಿಯಲ್ಲಿ ಕುಳಿತರೆ ಆ ಸ್ಥಾನದ ಗೌರವವೂ ಹೆಚ್ಚುತ್ತದೆ ಮತ್ತು ಸರ್ಕಾರದ ಬಗ್ಗೆ ಜನರ ವಿಶ್ವಾಸವೂ ಹೆಚ್ಚುತ್ತದೆ

Girl in a jacket
error: Content is protected !!