ಸಾಮಾಜಿಕ ನ್ಯಾಯ ಪರಿಕಲ್ಪನೆ ಆರಂಭವಾಗಿದ್ದು ಬಸವಣ್ಣನ ಕಾಲದಿಂದ; ರಘುಮೂರ್ತಿ

Share

 

ಚಳ್ಳಕೆರೆ, ಫೆ,24:ಸಾಮಾಜಿಕ ನ್ಯಾಯದ ಪರಿಕಲ್ಪನೆ 12ನೇ ಶತಮಾನದ ಬಸವಣ್ಣನವರಿಂದ ಲು ಪ್ರಾರಂಭವಾಗಿದೆ ಎಂದು ತಹಶಿಲ್ದಾರ ರಘುಮೂರ್ತಿ ಹೇಳಿದರು.

ಚಳ್ಳಕೆರೆ ತಾಲೂಕಿನ ಹಳ್ಳಿ ಗ್ರಾಮದಲ್ಲಿ ಸಾಮಾಜಿಕ ಪರಿಕಲ್ಪನೆಯ ದಿನಾಚರಣೆಯ ಪ್ರಾಸ್ತಾವಿಕವಾಗಿ ಮಾತನಾಡಿ ಬಸವಣ್ಣನವರಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ವರೆಗೂ ಸಮಾಜದಲ್ಲಿ ಇವತ್ತು ಸಮಾನತೆಯ ಬಗ್ಗೆ ಜಾಗೃತಿ ಉಂಟು ಮಾಡಿದರು ಸಮಾಜದಲ್ಲಿ ಶೇಕಡ ನೂರರಷ್ಟು ಪರಿವರ್ತನೆ ಕಾಣದಿರುವುದು ತುಂಬಾ ವಿಷಾದದ ಸಂಗತಿ ಎಂದರು.

ಕಾರ್ಲ್ ಮಾರ್ಕ್ಸ್ ಮಾರ್ಟಿನ್ ಲೂಥರ್ ಕಿಂಗ್ ದಯಾನಂದ ಸರಸ್ವತಿ ಸ್ವಾಮಿ ವಿವೇಕಾನಂದ ಜ್ಯೋತಿ ಬಾಪುಲೆ ಸಾವಿತ್ರಿಬಾಯಿ ಫುಲೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಒಳಗೊಂಡಂತೆ ಅನೇಕ ಮಹನೀಯರು ಈ ಸಮಾಜದ ಅಸಮಾನತೆ ವಿರುದ್ಧ ಧ್ವನಿ ಎತ್ತಿದವರು ಅದರಲ್ಲೂ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ರಾಜ್ಯಾಂಗ ವನ್ನು ರಚಿಸಿ ಇದರ ಮೂಲಕ ಅಧಿಕಾರ ಅಂತಸ್ತು ಮತ್ತು ಸಾಮಾಜಿಕ ನ್ಯಾಯವನ್ನು ದುರ್ಬಲ ಹಿಂದುಳಿದ ಮತ್ತು ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆ ಮತ್ತು ಉನ್ನತ ಸ್ಥಾನಮಾನಗಳನ್ನು ಕಲ್ಪಿಸಿದಂತೆ ಮಿನುಗುತಾರ ಹೀಗಿದ್ದರೂ ಸಮಾಜದಲ್ಲಿ ಅಲ್ಲಲ್ಲಿ ದೌರ್ಜನ್ಯಗಳು ಲೈಂಗಿಕ ಕಿರುಕುಳಗಳು ನಡೆಯುತ್ತಿರುವುದು ಬಾ ವಿಷಾದದ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದ ಸಂಘಟನೆ ಮಾಡಿದ ವಿಡಿಯೋ ಶ್ರೇಣಿಯ ನ್ಯಾಯಾಧೀಶರಾದ ಶ್ರೀಮತಿ ರೇಷ್ಮಾ ಅವರು ಮಾತನಾಡಿ ಕಾನೂನಾತ್ಮಕವಾಗಿ ರಾಜ್ಯ ಅಂಗದಿಂದ ಈ ವರ್ಗದ ಜನರು ಬದುಕಲು ಅವಕಾಶ ಮಾಡಿಕೊಟ್ಟರು ದುರ್ಘಟನೆಗಳು ನಡೆಯುತ್ತಿರುವುದು ವಿಷಾದನೀಯ ಆದುದರಿಂದ ಕೆಲವರಿಗೆ ಆಡಳಿತಶಾಹಿ ನೈತಿಕ ಸ್ಥೈರ್ಯ ತುಂಬಿ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಮತ್ತು ಗ್ರಾಮಗಳಿಗೆ ಇಡೀ ಸರ್ಕಾರವೇ ಬಂದು ಸರ್ಕಾರದಿಂದ ಕೊಡು ಮಾಡುವಂತಹ ಕಾನೂನಾತ್ಮಕ ಸವಲತ್ತುಗಳನ್ನು ನೀಡಿ ನ್ಯಾಯ ಒದಗಿಸುವುದು ಉಚಿತ ಪೂರ್ಣವಾಗಿದೆ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿರುವ ಈ ಕಾರ್ಯ ಅಭೂತಪೂರ್ವವಾದದ್ದು ಸರ್ವೋಚ್ಚ ನ್ಯಾಯಾಲಯದ ಆಶಯದಂತೆ ಲತಾ ವರ್ಗದವರಿಗೆ ಆರೋಗ್ಯ ನೀರು ನಿರ್ಮಲ್ಯ ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿದಾಗ ಮಾತ್ರ ಇವತ್ತು ಸಾಮಾಜಿಕ ನ್ಯಾಯಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು. ಸಮಾರಂಭದಲ್ಲಿ ಹಲೋ ಕೋಕಿಲರ ಸಂಘದ ಅಧ್ಯಕ್ಷ ಆನಂದ್ ಕಿರಿಯ ನ್ಯಾಯಾಧೀಶ ಮನು ಪಾಟೀಲ್ ವಕೀಲರ ಸಂಘದ ಅಧ್ಯಕ್ಷ ಆನಂದ, ಸಾಮಾಜಿಕ ನ್ಯಾಯದ ಬಗ್ಗೆ ಉಪನ್ಯಾಸ ನೀಡಿದರು ಸಮಾರಂಭಕ್ಕೂ ಮುನ್ನ ತಾಲೂಕು ಆಡಳಿತ ಮತ್ತು ನ್ಯಾಯಾಧೀಶರನ್ನು ಒಳಗೊಂಡ ನಿಯೋಗ ದಲಿತ ಕಾಲೋನಿಗಳಿಗೆ ಭೇಟಿ ನೀಡಿ ಕುಂದು ಕೊರತೆ ಮತ್ತು ಸಾರ್ವಜನಿಕ ಅಹವಾಲು ಆಲಿಸಿದರು ಮತ್ತು ದಲಿತ ಕುಟುಂಬವಾದ ತಿಪ್ಪಮ್ಮ ರಾಜಣ್ಣ ಇವರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿ ಕಾಲೋನಿಯ ಎಲ್ಲ ಕುಟುಂಬ ವರ್ಗದವರಿಗೂ ಆತ್ಮಸ್ಥೈರ್ಯ ಮತ್ತು ನೈತಿಕ ಸ್ಥೈರ್ಯವನ್ನು ಮೂಡಿಸಿದರು. ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜಮ್ಮ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಸವರಾಜ್ ರಾಜಣ್ಣ ಹಾಗೂ ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು

Girl in a jacket
error: Content is protected !!