ಬೆಂಗಳೂರು,ಆ,26:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮತ್ತು ಪ್ರೆಸ್ ಕ್ಲಬ್ ಮಾಜಿ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಗುಡಿಹಳ್ಳಿಹಿರಿಯ ನಾಗರಾಜ್(66) ನಿಧನರಾಗಿದ್ದಾರೆ. ಮೈತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಗುಡಿಹಳ್ಳಿ ನಾಗರಾಜ್ ಪ್ರಜಾವಾಣಿ ಪತ್ರಿಕೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದವರು. ಕನ್ನಡ ಸಾಂಸ್ಕೃತಿಕ ಲೋಕದ ಜೊತೆ ನಿಕಟ ಒಡನಾಟ ಇರಿಸಿ ಕೊಂಡಿದ್ದ ಗುಡಿಹಳ್ಳಿ ನಾಗರಾಜ್, ವಿಶೇಷವಾಗಿ ಕನ್ನಡ ರಂಗಭೂಮಿ ಕುರಿತು ಬರೆದ ಲೇಖನಗಳು ಮತ್ತು ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ.
ಒಂದು ರೀತಿಯಲ್ಲಿ ಕನ್ನಡ ವೃತ್ತಿರಂಗಭೂಮಿಯ ಇತಿಹಾಸಕಾರ ಎಂದು ಅವರನ್ನು ಕರೆದರೆ ತಪ್ಪಾಗಲಾರದು. ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದ ಅನೇಕ ರಂಗಕರ್ಮಿಗಳನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸಿದವರು ಗುಡಿಹಳ್ಳಿ ನಾಗರಾಜ್
ಸಂತಸಪ;ಪತ್ರಕರ್ತರ ಸಂಘಟನೆಗೆ ಸಕ್ರಿಯವಾಗಿ ತೊಡಗಿಸಿಕೊಂಡು ದುಡಿದವರು.
ಕೆಯುಡಬ್ಲ್ಯೂಜೆ ಸಂಘಟನೆಯಲ್ಲಿ ಅವರ ಸೇವೆ ಮರೆಯಲಾಗದು ಎಂದು ಶ್ಲಾಘಿಸಿರುವ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯೂಜೆ ಪ್ರಾರ್ಥಿಸಿದೆ.
ಹಾಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಕೂಡ ಗುಡಿಹಳ್ಳಿ ನಾಗರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.