ಬೆಂಗಳೂರು,ನ,15:ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಕೊಡಮಾಡುವ ವಿ. ಕೃ. ಗೋಕಾಕ್ ಫೇಲೋಶಿಫ್ ಗೆ 2021ನೆಯ ಸಾಲಿನಲ್ಲಿ ’ಬುಕ್ ಬ್ರಹ್ಮ’ ಪ್ರಧಾನ ಸಂಪಾದಕ, ಸಾಹಿತಿ ದೇವು ಪತ್ತಾರ ಹಾಗೂ ಪತ್ರಕರ್ತೆ, ಲೇಖಕಿ ವಿದ್ಯಾರಶ್ಮಿ ಆಯ್ಕೆಯಾಗಿದ್ದಾರೆ.
‘ಗೋಕಾಕರ ಮುನ್ನುಡಿಗಳ ಅಧ್ಯಯನಕ್ಕಾಗಿ ದೇವು ಪತ್ತಾರ ಮತ್ತು ‘ಗೋಕಾಕರನ್ನು ಕುರಿತ ಕವಿತೆಗಳ ಅಧ್ಯಯನಕ್ಕಾಗಿ ವಿದ್ಯಾರಶ್ಮಿ ಪೆಲತ್ತಡ್ಕ ಅವರಿಗೆ ಗೋಕಾಕ್ ವಾಙ್ಮಯ ಟ್ರಸ್ಟ್ ನೀಡುವ ಪ್ರತಿಷ್ಠಿತ ವಿ. ಕೃ. ಗೋಕಾಕ್ ಫೆಲೋಶಿಫ್‌ನ್ನು ನೀಡಲಾಗಿದೆ. ಪ್ರಶಸ್ತಿಯು 10,000 ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಟ್ರಸ್ಟ್‌ನ ಅಧ್ಯಕ್ಷ ವೈ. ಎನ್. ಗಂಗಾಧರ ಶೆಟ್ಟಿ, ಕಾರ್ಯದರ್ಶಿ ಅನಿಲ್ ಗೋಕಾಕ್, ಸಹಕಾರಿ ಧುರೀಣ ಬಿ. ಎಸ್. ವಿಶ್ವನಾಥ್, ಹಿರಿಯ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತು ಅಭಿನವ ರವಿಕುಮಾರ್ ಅವರನ್ನೊಳಗೊಂಡ ಸದಸ್ಯರು ಆಯ್ಕೆ ಸಮಿತಿಯಲ್ಲಿದ್ದರು. ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಫೆಲೋಶಿಫ್‌ನ್ನು ಪ್ರದಾನ ಮಾಡಲಾಗುವುದಾಗಿ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.