ವಿಜಯೇಂದ್ರ ಬದಲಿಸಲು ಆರೆಸ್ಸೆಸ್‌ಗೆ ಅಶೋಕ, ಬೊಮ್ಮಾಯಿ ಮನವಿ
by-ಕೆಂಧೂಳಿ
ಬೆಂಗಳೂರು,ಫೆ,೦೫-ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಮಾಡುವಂತೆ ಅವರ ವಿರೋಧಿಗಳ ಸಂಖ್ಯೆ ದಿನೆ ದಿನೆ ಬೆಳೆಯುತ್ತಿದ್ದು ಹೈಕಮಾಂಡ್ ಮೇಲೂ ಕೂಡ ಒತ್ತಡ ಹೇರಲಾಗುತ್ತಿದೆ.
ಬಿ.ವೈ ವಿಜಯೇಂದ್ರ ಅವರನ್ನು ಬದಲಿಸಬೇಕು ಇಲ್ಲದಿದ್ದರೆ ಪಕ್ಷದಲ್ಲಿ ಮತ್ತಷ್ಟು ಬಣಗಳು ಮತ್ತು ಗೊಂದಲಗಳು ಸೃಷ್ಟಿಯಾಗುತ್ತವೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಪ್ರತಿಪಕ್ಷದ ನಾಯಕ ಆರ್ ಅಶೋಕ್ ಅವರು ಮನವಿ ಮಾಡಿದ್ದಾರೆ ಎನ್ನುವುದು ಈಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ

Adavategement
ಈ ಇಬ್ಬರು ನಾಯಕರು ಆರ್‌ಎಸ್ ಹಿರಿಯ ಮುಖಂಡರಬೊಬ್ಬರನ್ನು ಭೇಟಿ ಮನವಿ ಮಾಡಿದ್ದಾರೆ ಪಕ್ಷದಲ್ಲಿ ಹಂತ ಹಂತದಲ್ಲು ಗೊಂದಲಗಳು ಸೃಷ್ಟಿಯಾಗುತ್ತವೆ ಹೀಗೆ ಮುಂದುವರೆದರೆ ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ಪಕ್ಷದ ಹಲವಾರು ನಾಯಕರು ಪಕ್ಷವನ್ನು ತೊರೆಯುತ್ತಾರಲ್ಲದೆ ಮತದಾರರು ಕೂಡ ಈ ಗೊಂದಲಗಳನ್ನು ಸಹಿಸಲಾರದೆ ಮತದಾರರು ಇತರೆ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಹೀಗಾಗಿ ತಾವು ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್‌ಗೆ ಸೂಚನೆ ನೀಡಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ
ಹಿಂದೆಂದೂ ಇಷ್ಟು ಗೊಂದಲ ನಿರ್ಮಾಣ ಆಗಿರಲಿಲ್ಲ. ವಿಜಯೇಂದ್ರ ಅವರನ್ನು ಮುಂದುವರೆಸುವ ಸಂಬಂಧ ಯಾರಿಗೂ ಒಲವು ಇಲ್ಲ. ಆದ್ದರಿಂದ ಬೇರೆ ಯಾರನ್ನಾದರೂ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಹೇಳಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಪದಾಧಿಕಾರಿಗಳ ಮತ್ತು ಜಿಲ್ಲಾ ಅಧ್ಯಕ್ಷರ ಸಭೆಗಳನ್ನು ನಾಮ್‌ಕಾವಸ್ತೆ ಎಂಬಂತೆ ನಡೆಸಿದ್ದು ಬಿಟ್ಟರೆ, ಗಂಭೀರವಾಗಿ ಸಭೆಗಳನ್ನು ನಡೆಸಲಿಲ್ಲ. ಅವರಿಗೆ ಪಕ್ಷವನ್ನು ಮುನ್ನಡೆಸುವಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಒಂದು ವೇಳೆ ಮತ್ತೆ ಅಧ್ಯಕ್ಷರನ್ನಾಗಿ ಮಾಡಿದರೆ, ಪಕ್ಷ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ವಿಷಯವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಬೇಕು. ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು’ ಎಂದೂ ಮನವಿ ಮಾಡಿದರು.
ಲಿಂಗಾಯತ ಸಮುದಾಯದವರಾದರೆ ವಿ.ಸೋಮಣ್ಣ, ಒಕ್ಕಲಿಗರ ಸಮುದಾಯಕ್ಕೆ ಕೊಡುವುದಾದರೆ ಆರ್.ಅಶೋಕ ಅವರನ್ನು ಪರಿಗಣಿಸಬಹುದು ಎಂಬ ಸಲಹೆಯನ್ನೂ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅದಕ್ಕೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್ ಮುಖಂಡರು, ‘ಪಕ್ಷದ ವಿದ್ಯಮಾನಗಳು ಗಮನಕ್ಕೆ ಬಂದಿವೆ. ನೀವು ತಿಳಿಸಿರುವ ವಿಚಾರವನ್ನು ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.ಅಲ್ಲದೆ, ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಅವರನ್ನು ಭೇಟಿ ಮಾಡಿರುವ ಈಇಬ್ಬರು ವಿಜಯೇಂದ್ರ ಅವರನ್ನು ಬದಲಿಸಬೇಕು ಎಂಬ ಮನವಿಯನ್ನೂ ಮಾಡಿದ್ದಾರೆ
ಇಂದು ಸಭೆ
ವಿಜಯೇಂದ್ರ ಬಣದ ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಇತರರು ಬುಧವಾರ ಬೆಂಗಳೂರಿನಲ್ಲಿ ಸಭೆ ನಡೆಸಿ ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸಲು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲಿದ್ದಾರೆ.