ನ್ಯೂಯಾರ್ಕ್,ಜೂ,೧೮: ಆಂಟೋನಿಯೊ ಗುಟೆರೆಸ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗಿದ್ದಾರೆ.ಇವರು ಮುಂದಿನ ಐದು ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.
ಶುಕ್ರವಾರದಂದು ೧೯೩ ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗುಟೆರೆಸ್ ಅವರನ್ನು ಆಯ್ಕೆ ಮಾಡಲಾಯಿತು’ಬಲಿಷ್ಠ ಹಾಗೂ ಸಣ್ಣ ರಾಷ್ಟ್ರಗಳ ನಡುವಣ ನಂಬಿಕೆಯನ್ನು ಖಾತ್ರಿಪಡಿಸಲು, ಸೇತುವೆ ನಿರ್ಮಿಸಲು ಮತ್ತು ನಂಬಿಕೆಯನ್ನು ಬೆಳೆಸಲು ನಿರಂತರವಾಗಿ ತೊಡಗಿಸಿಕೊಳ್ಳುವುದಾಗಿ’ ಪ್ರಮಾಣ ವಚನ ಸ್ವೀಕರಿಸದ ಬಳಿಕ ಗುಟೆರೆಸ್ ತಿಳಿಸಿದ್ದಾರೆಬಾನ್ ಕಿ ಮೂನ್ ಉತ್ತರಾಧಿಕಾರಿಯಾಗಿ ಹಾಗೂ ವಿಶ್ವಸಂಸ್ಥೆಯ ಒಂಬತ್ತನೇ ಪ್ರಧಾನ ಕಾರ್ಯದರ್ಶಿಯಾಗಿ ಗುಟೆರೆಸ್ ಅವರು ೨೦೧೭ರ ಜನವರಿ ೧ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಮೊದಲ ಅಧಿಕಾರವಧಿಯು ಡಿಸೆಂಬರ್ ೩೧ರಂದು ಕೊನೆಗೊಳ್ಳುತ್ತದೆ. ಬಳಿಕ ಎರಡನೇ ಅವಧಿಯು ೨೦೨೨ರ ಜನವರಿ ೧ರಿಂದ ಆರಂಭವಾಗಲಿದೆ.೭೨ ವರ್ಷದ ಗುಟೆರೆಸ್ ೧೯೯೫ರಿಂದ ೨೦೦೨ರ ವರೆಗೆ ಪೋರ್ಚುಗಲ್ನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ೨೦೦೫ರಿಂದ ೨೦೧೫ರ ವರೆಗೆ ವಿಶ್ವಸಂಸ್ಥೆಯಲ್ಲಿ ನಿರಾಶ್ರಿತರ ಹೈಕಮಿಷನರ್ ಆಗಿ ಕೆಲಸ ನಿರ್ವಹಿಸಿದ್ದರು.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್
Share