ಕನ್ನಡತಿಯ ನೇತೃತ್ವದಲ್ಲಿ ಭಾರತಕ್ಕೆ ಎರಡನೇ ವಿಶ್ವಕಪ್ ಕಿರೀಟ
by-ಕೆಂಧೂಳಿ
ಕೌಲಾಲಂಪುರ,ಫೆ,೦೩-ಕನ್ನಡದ ಪ್ರಸಾದ್ ನಾಯಕ್ವದ ಭಾರತ ಯುವ ಮಹಿಳೆಯರ ತಂಡವು ೧೯ ವರ್ಷದೊಳಗಿನ ಮಹಿಳಾ ಟಿ-೨೦ ಕ್ರಿಕೆಟ್ ವಿಶ್ವಕಪ್ ತಮ್ಮ ಮುಡಿಗೇರಿಸಿಕೊಂಡರು.
ಭಾರತ ಸತತ ಎರಡನೇ ಬಾರಿ ಈ ಸಾದನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಭಾನುವಾರ ನಡೆದ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಪ್ರಿಪ ವಿರುದ್ಧ ಜಯವನ್ನು ಸಾಧಿಸುವ ಮೂಲಕ ಭಾರತೀಯರ ಸಂಭ್ರಮಕ್ಕೆ ಸಾಕ್ಷಿಯಾದರು.
ಲ್ಲಿ ಭಾರತ ಪುರಷರ ತಂಡ ಟಿ೨೦ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿ ಟಿ೨೦ ವಿಶ್ವಕಪ್ ಗೆದ್ದಿದ್ದರೆ, ಈ ವರ್ಷ ಅಂಡರ್ ೧೯ ಮಹಿಳಾ ತಂಡ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ೯ ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.
ಕೌಲಾಲಂಪುರದ ಬೇಯುಮಸ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಭಾರತದ ಎದುರು ದಕ್ಷಿಣ ಆಫ್ರಿಕಾ ಹೋರಾಟ ಕೂಡ ಕೊಡದೆ ಸೋಲೊಪ್ಪಿಕೊಂಡಿತು. ಕನ್ನಡತಿ ನಿಕಿ ಪ್ರಸಾದ್ ನಾಯಕತ್ವದ ಭಾರತ ಈ ಪಂದ್ಯಾವಳಿಯಲ್ಲಿ ಅಜೇಯವಾಗಿಯೇ ಉಳಿದು, ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಭಾರತದ ಬಿಗಿ ಬೌಲಿಂಗ್ ದಾಳಿ ಎದುರು ಸಾಧಾರಣ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ೨೦ ಓವರ್ ಗಳಲ್ಲಿ ೮೨ ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಮೀಕ್ ವ್ಯಾನ್ ವೂರ್ಸ್ಟ್ ೨೩ ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಇಡೀ ಪಂದ್ಯಾವಳಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಗೊಂಗಾಡಿ ತ್ರಿಷಾ ೪ ಓವರ್ ಗಳಲ್ಲಿ ೧೫ ರನ್ ಬಿಟ್ಟುಕೊಟ್ಟು ೩ ವಿಕೆಟ್ ಪಡೆದರು. ವೈಷ್ಣವಿ ಶರ್ಮಾ ಪಾರುಣಿಕಾ ಸಿಸೋಡಿಯಾ ಮತ್ತು ಆಯುಷಿ ಶುಕ್ಲಾ ತಲಾ ಎರಡು ವಿಕೆಟ್ ಪಡೆದುಕೊಂಡರು, ಶಭ್ನಮ್ ಶಕೀಲ್ ಒಂದು ವಿಕೆಟ್ ಪಡೆದರು.
೮೩ ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ೧೧.೨ ಓವರ್ ಗಳಲ್ಲೇ ೧ ವಿಕೆಟ್ ಕಳೆದುಕೊಂಡು ೮೪ ರನ್ ಗಳಿಸುವ ಮೂಲಕ ೯ ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಕಳೆದ ಬಾರಿ ಟಿ೨೦ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿದ್ದ ಭಾರತ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.