ಲ್ಯಾಂಡ್ ಡಿಲಿಂಗ್ ಹಿನ್ನಲೆ ಮಾರಕಾಸ್ತ್ರದಿಂದ ಹಲ್ಲೆ: ವ್ಯಕ್ತಿ ಸ್ಥಿತಿ ಗಂಭೀರ…!

Share

ಹುಬ್ಬಳ್ಳಿ,ಜು09: ಲ್ಯಾಂಡ್ ಡಿಲಿಂಗ್ ಹಿನ್ನೆಲೆಯಲ್ಲಿವ್ಯಕ್ತಿಯ ಮೇಲೆ‌ ಮಾರಕಾಸ್ತ್ರಗಳಿಂದ ದಾಳಿ ಮಾಡಿರುವ ಘಟನೆ ಹುಬ್ಬಳ್ಳಿಯ ಬೆಂಗೇರಿಯ ಚಿಕ್ಕು ತೋಟದಲ್ಲಿ ನಡೆದಿದೆ.

ವಿರೇಶ ತೆಗಡೆ ಎಂಬ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ. ಉದಯನಗರದ ರೌಡಿ ಶೀಟರ್ ಅಲ್ತಾಫ್ ಬೇಪಾರಿ ಹಾಗೂ ಆತನ ಸಹಚರರಿಂದ ವೀರೇಶ ನ ಮೇಲೆ ಮನಸ್ಸೋ ಇಚ್ಛೆ ಲಾಂಗ್ ದಾಳಿ ನಡೆದಿದೆ ಎನ್ನಲಾಗಿದೆ.

ಹಿನ್ನೆಲೆ: ಎರಡು ಎಕರೆ ಜಮೀನನ್ನು ಬೇರೊಬ್ಬರಿಗೆ ಮಾರಿದ್ದ ಜಮೀನನ್ನು ಖಾಲಿ ಮಾಡಿಸಲು ಅಲ್ತಾಪ ಬೇಪಾರಿ ತನ್ನ ಮಧ್ಯಸ್ತಿಕೆಯಲ್ಲಿ ಡೀಲ್ ಮಾಡುವುದಾಗಿ ಮತ್ತು ಜಮಿನನ್ನು ತನ್ನ ತಾಬಾ ಪಡೆಯುವ ಹಂಬಲದಲ್ಲಿದ್ದ. ಈ ವಿಷಯವಾಗಿ ಅಲ್ತಾಪ್ ವಿರೇಶ್ ಇಬ್ಬರ ನಡುವೆ ಅನೇಕ ಬಾರಿ ತಕರಾರುಗಳು ನಡೆದಿದ್ದವೆನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ರೌಡಿ ಶಿಟರ್ ಅಲ್ತಾಪ್ ವಿರೇಶನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅನೇಕ ದಿನಗಳಿಂದ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ್ದನೆನ್ನಲಾದ ಇತನ ವಿರುದ್ಧ ಬೇರೆ ಬೇರೆ ಠಾಣೆಗಳಲ್ಲಿ ಇತನ ವಿರುದ್ದ ಪ್ರಕರಣಗಳು ದಾಖಲಿವೆ. ಆದರೆ ತನ್ನ ಹವಾ ಮೆಂಟೆನ ಮಾಡೋದಕ್ಕೆ ಇ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಗಾಯಾಳು ವಿರೇಶ್ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಈ ಕುರಿತು ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

Girl in a jacket
error: Content is protected !!