ಬೆಂಗಳೂರು,ಏ,೧೯-ಬೆಂಗಳೂರಿನಲ್ಲಿ ಇನ್ನೂ ನಟೋರಿಯಸ್‌ಗಳ ನಡುವಿನ ಜಿದ್ದು ನಿಂತಂತೆ ಕಾಣುತ್ತಿಲ್ಲ, ಮಾಜಿ ಅಂಡರ್‌ವರ್ಲ್ಡ್ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕ ರೈ ಮೇಲೆ ದುಷ್ಕರ್ಮಿಗಳು ಶೂಟೌಟ್ ನಡೆಯುವ ಮೂಲಕ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ
ಇಂದು ಬೆಳಗಿನಜಾವ ೧-೩೦ರ ಸುಮಾರಿನಲ್ಲಿ ರಾಮನಗರ ಜಿಲ್ಲೆ ಬಿಡದಿಯ ಸಮೀಪ ಮುತ್ತಪ್ಪ ರೈ ನಿವಾಸದ ಮುಂಭಾಗದ ಕಾಂಪೌಂಡ್ ಬಳಿ ಈ ದಾಳಿ ನಡದಿದೆ.
ಮುತ್ತಪ್ಪೆರೈ ಪುತ್ರ ರಿಕ್ಕಿ ರೈ ಕಾರಿನಲ್ಲಿ ಬರುವ ಸಂದರ್ಭದಲ್ಲಿ ದುಷ್ಕರ್ಮಿಗಳ ಗುಂಪೊಂದು ಆತನ ಮೇಲೆ ಮೂರು ಸುತ್ತಿನ ಗುಂಡು ಹಆರಿಸಿದ ತಕ್ಷಣ ಅವರು ಪರಾರಿಯಾಗಿದ್ದಾರೆ, ಆದರೆ ತೀವ್ರ ಗಾಯಗೊಂಡ ರಿಕ್ಕಿ ರೈ ಅವರನ್ನು ತಕ್ಷಣ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ
ರಿಕ್ಕಿ ರೈ ತಮ್ಮ ಫಾರ್ಚೂನರ್ ಕಾರಿನಲ್ಲಿ ಡ್ರೈವರ್ ಮತ್ತು ಗನ್‌ಮ್ಯಾನ್ ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ರಿಕ್ಕಿ ರೈ ಅವರಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಘಟನೆಯ ಸ್ಥಳಕ್ಕೆ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ಮತ್ತು ಡಿವೈಎಸ್‌ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ದಾಳಿಯ ಹಿಂದಿನ ಕಾರಣ, ದುಷ್ಕರ್ಮಿಗಳ ಗುರುತು ಮತ್ತು ಈ ಘಟನೆಯ ಹಿನ್ನೆಲೆಯನ್ನು ಪತ್ತೆಹಚ್ಚಲು ತೀವ್ರ ಪ್ರಯತ್ನ ನಡೆಯುತ್ತಿದೆ.
ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕರೈ ಮೇಲೆ ಗುಂಡಿನ ದಾಳಿ
Share