ಕೇದ್ರಕಾರಾಗೃಹದ ಕರಾಳ ಕಥೆ.

Share

 

ಕೇಂದ್ರ ಕಾರಾಗೃಹದ ಕರಾಳ ಕಥ

Writing;ಪರಶಿವ ಧನಗೂರು

ಇದೀಗ ರಾಜ್ಯದ ರಾಜಧಾನಿ ಬೆಂಗಳೂರಿನ ಕೇಂದ್ರ ಕಾರಾಗೃಹದ ಪರಪ್ಪನ ಅಗ್ರಹಾರದ ಬಂದೀಖಾನೆ ಬಾರೀ ಸದ್ದುಮಾಡುತ್ತಿದೆ. ತನ್ನ ಕುಖ್ಯಾತಿಯಿಂದಲೇ ಸುದ್ದಿಯಾಗುತ್ತಿದೆ! ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೆಲವು ಭ್ರಷ್ಟ ಜೈಲು ಪೊಲೀಸ್ ಸಿಬ್ಬಂದಿಗಳು ಅಲ್ಲಿರುವ ರೌಡಿಗಳಿಂದ ಲಂಚ ಪಡೆಯುತ್ತಿರುವ ವೀಡಿಯೋ ದ್ರಶ್ಯಗಳು ನಾಡಿನ ಹಲವು ಮೀಡಿಯಾಗಳಲ್ಲಿ ಪ್ರಸಾರವಾಗಿ ಕಾರಾಗೃಹ ಕ್ಕೆ ಕಿಚ್ಚು ಹಬ್ಬಿತ್ತು. ಬೆಂಗಳೂರಿನ ಕೇಂದ್ರ ಕಾರಾಗೃಹ ದಲ್ಲಿರುವ ಕೆಲವು ವಿಚಾರಣಾಧೀನ ಕೈದಿಗಳು ಹಣಕೊಟ್ಟು ಹಲವು ಸೌಲಭ್ಯಗಳನ್ನು ಪಡೆಯುತ್ತಿರುವ ವಿಡಿಯೋ ತುಣುಕುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸ್ರಷ್ಠಿಸಿ ಜನರನ್ನು ಬೆಚ್ಚಿ ಬೀಳಿಸಿವೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮತ್ತು ಗ್ರಹ ಮಂತ್ರಿಗಳಾದ ಅರಗ ಜ್ಞಾನೇಂದ್ರರವರು ಈ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಸಂಬಂದಿಸಿದಂತೆ ತನಿಖೆ ನಡೆಸಿ ವರದಿ ಸಲ್ಲಿಸಲು ಎಡಿಜಿಪಿ ಎಸ್. ಮುರುಗನ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಎಲ್ಲಾ ಮಾಧ್ಯಮಗಳು ಜೈಲಿನ ದುರಾಡಳಿತದ ವಿರುದ್ಧ ಧ್ವನಿ ಎತ್ತಿ ಸುದ್ದಿ ಮಾಡಿದ್ದವು. ಕೆಲವು ಮಾಧ್ಯಮಗಳು ಹಳೆಯ ವೀಡಿಯೋಗಳನ್ನೇ ಇಂದಿನ ಎಕ್ಸ್ ಕ್ಲೂಸಿವ್! ಬ್ರೇಕಿಂಗ್ ನ್ಯೂಸ್! ಎಂದು ಬಿತ್ತರಿಸಲು ಹೋಗಿ ನಗೆಪಾಟಲಿಗೀಡಾದವು! ಕುಖ್ಯಾತ ರೌಡಿಗಳು ಜೈಲಿನಲ್ಲಿ ಕುಳಿತು ಕೊಂಡು ಮೊಬೈಲ್ ಫೋನ್ ಬಳಸಿಕೊಂಡು ತಮ್ಮ ಸಹಚರರ ಮೂಲಕ, ರೌಡಿ ಸಿಂಡಿಕೇಟುಗಳ ಜೊತೆ ಸೇರಿಕೊಂಡು ಅಪರಾಧ ಕ್ರತ್ಯಗಳನ್ನು, ರಿಯಲ್ ಎಸ್ಟೇಟ್ ವ್ಯವಹಾರ ಗಳನ್ನೂ ನಡೆಸುತ್ತಾ, ಹಫ್ತಾ ವಸೂಲಿ ಮಾಡುತ್ತಾ ಹಣ ಸಂಪಾದನೆ ಮಾಡಿಕೊಂಡು, ಜೈಲಿನ ಪೊಲೀಸ್ ಸಿಬ್ಬಂದಿಗೆ ಲಂಚ ಕೊಟ್ಟು ಜೈಲಿನೊಳಗೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಎಲ್ಲಾ ಮಾಧ್ಯಮಗಳು ವೀಡಿಯೋ ಸಮೇತ ಎಳೆ ಎಳೆಯಾಗಿ ಬಯಲಿಗೆಳೆದಿದ್ದವು. ಇದೇ ವಿಚಾರವಾಗಿ ಮಾನ್ಯ ಗ್ರಹ ಮಂತ್ರಿಗಳು ಐ.ಪಿ.ಎಸ್ ಅಧಿಕಾರಿ ಮುರುಗನ್ ಮತ್ತು ಜೈಲು ಡಿ.ಐ.ಜಿ ಸೋಮಶೇಖರ್ ನೇತ್ರತ್ವದಲ್ಲಿ ತನಿಖೆ ನಡೆಯುತ್ತಿರುವಾಗಲೇ, ನ್ಯಾಯಾಧೀಶರುಗಳು ಕೂಡ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ! ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ತಾವೂ ತನಿಖೆ ನಡೆಸುವ ಸಾಧ್ಯತೆಯನ್ನು ಹೊರಹಾಕಿದ್ದಾರೆ

 

. ಇಷ್ಟೆಲ್ಲಾ ನಾನಾ ಅಕ್ರಮ, ಅವ್ಯವಸ್ಥೆಯ ಗೂಡಾಗಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವಿಚಿತ್ರವಾದ ಇತಿಹಾಸವೇ ಇದೆ. ಇಲ್ಲಿಗೆ ಎರಡು ರಾಜ್ಯಗಳ ಮುಖ್ಯಮಂತ್ರಿಗಳೇ ಬಂದು ಸೆರೆವಾಸ ಅನುಭವಿಸಿದರು! ಹಲವಾರು ಮಂತ್ರಿಗಳು ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದರು! ಪ್ರಖ್ಯಾತ ಸಿನಿಮಾ ನಟರು, ನಟಿಯರು, ಬೆಂಗಳೂರು ಭೂಗತ ಜಗತ್ತಿನ ಡಾನ್ ಗಳು ಇದೇ ಜೈಲಿನಲ್ಲಿ ಕುಳಿತು ಬೆಂಗಳೂರನ್ನೂ, ಜೈಲನ್ನೂ ರೂಲ್ ಮಾಡಲು ಹೋಗಿ ಮಸಣ ಸೇರಿದ್ದಾರೆ! ಇಷ್ಟೆಲ್ಲಾ ಪ್ರಖ್ಯಾತ-ಕುಖ್ಯಾತ ಸೆಲೆಬ್ರಿಟಿಗಳನ್ನು ಸಂಬಾಳಿಸಿದ ಜೈಲು ಈ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ. ಅದಕ್ಕಾಗಿಯೇ ಈ ಕೇಂದ್ರ ಕಾರಾಗೃಹಕ್ಕೆ ಇಷ್ಟು ದೊಡ್ಡ ಮಹತ್ವವಾದ ಕುಖ್ಯಾತಿ ಇದೆ. ಮತ್ತು ರಾಜ್ಯದ ಸದ್ಯದ ಸೇಪೆಸ್ಟ್ ಜೈಲ್ ಎಂಬ ಖ್ಯಾತಿಯನ್ನು ಗಳಿಸಿದೆ. ಹೊರಗಿನಿಂದ ಯಾರೂ ಜೈಲಿನಲ್ಲಿರುವವರ ಮೇಲೆ ದಾಳಿಮಾಡಲು ಸಾಧ್ಯವೇ ಇಲ್ಲ! ಆದರೇ ಜೈಲೊಳಗಿರುವವರೇ ಹೊಡೆದಾಡಿಕೊಂಡು ಸತ್ತರೇ ಜೈಲು ಸಿಬ್ಬಂದಿಗಳ ಕೆಲಸಕ್ಕೆ ಕುತ್ತು ತಪ್ಪಿದ್ದಲ್ಲ. ಬೆಂಗಳೂರಿನ ಜೈಲಿನಲ್ಲಿ ಸರಣಿಬಾಂಬ್ ಸ್ಫೋಟದ ಆರೋಪಿಗಳು, ಟಿರರಿಂಸಂ ಕೇಸಿನಲ್ಲಿರುವ ಮೋಸ್ಟ್ ಡೇಂಜರಸ್ ಭಯೋತ್ಪಾದಕರು ಇದ್ದಾರೆ.

 

ಜೈಲೆಂಬುದು ಕೆಲವೇ ಕೆಲವು ಅಮಾಯಕರ , ಸಾವಿರಾರು ಖತರ್ನಾಕ್ ಕ್ರಿಮಿನಲ್ ಗಳ ಮಿನಿ ಮ್ರಗಾಲಯದಂತಾಗಿ. ಹೋಗಿದೆ. ಈ ದೇಶದ ಎಷ್ಟೋ ಯುವಕರು ಈ ಆಳುವ ಸರ್ಕಾರಗಳು ಬೇಜವಾಬ್ದಾರಿಯಿಂದ ಹಾದಿತಪ್ಪಿ, ಅಡ್ಡದಾರಿಗಳಿದು, ತಮ್ಮ ಬದುಕನ್ನೇ ಸರ್ವನಾಶ ಮಾಡಿಕೊಂಡು ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಈ ಮಾನವ ಮ್ರಗಾಲಯವನ್ನು ಉಳಿಸಿಕೊಂಡು ಹೋಗುವ ವ್ಯವಸ್ಥೆಯನ್ನು ನಮ್ಮ ಭ್ರಷ್ಟ ರಾಜಕಾರಣಿಗಳು ಪೋಷಿಸಿ ಕೊಂಡೇ ಬರುತ್ತಿದ್ದಾರೆ. ಭ್ರಷ್ಟ ರಾಜಕಾರಣಿಗಳಿಗೆ ಜೈಲಿಗಳಿದ್ದರೇನೆ ಚೆಂದ! ಜೈಲುಗಳಳೊಗೆ ಯುವಕರು ನಲುಗುತ್ತಿರಬೇಕು. ಕ್ರಿಮಿನಲ್ ಚಟುವಟಿಕೆ ನಿತ್ಯ ನಿರಂತರವಾಗಿದ್ದರೇನೇ ಕೆಲವರಿಗೆ ಹೊಟ್ಟೆ ತುಂಬೋದು., ಜೀವನಡೆಸೋದು ! ಅಂತವರೇ ಈ ಬಂದೀಖಾನೆಗಳ ನಿರ್ಮಾಪಕರು. ಮನುಷ್ಯನನ್ನು ಮ್ರಗವಾಗಿಸಿ ಬಂದೀಖಾನೆಯಲ್ಲಿ ಕೂಡಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಈ ಕ್ರೂರ ಅಮಾನವೀಯ ಭ್ರಷ್ಟ ವ್ಯವಸ್ಥೆ ಎಂದಿಗೂ ಪ್ರೀತಿ, ಕರುಣೆ, ಸ್ನೇಹ, ಸಹಬಾಳ್ವೆ, ಶಾಂತಿ ತುಂಬಿದ ಸಮಾಜವನ್ನು ಕಟ್ಟಲು ಬಯಸುವುದಿಲ್ಲ! ಅದಕ್ಕಾಗಿಯೇ ಜೈಲುಗಳು ಮನಃಪರಿವರ್ತನೆಯ ಕೇಂದ್ರ ಗಳಾಗದೇ ಕ್ರೈಂ ಯೂನಿವರ್ಸಿಟಿಗಳಾಗಿ ಬದಲಾಗುತ್ತಿವೆ! ನೆಮ್ಮದಿಯಾಗಿ, ಅಪ್ಪ ಅಮ್ಮ, ಅಣ್ಣ ತಮ್ಮ, ಹೆಂಡತಿ ಮಕ್ಕಳೊಂದಿಗೆ ಮನೆಯಲ್ಲಿ ಖುಷಿಯಿಂದ, ನೆಮ್ಮದಿಯಾಗಿ, ಬದುಕಿ ಬಾಳಬೇಕಿದ್ದ ಜನರು ಅಜ್ಞಾನದಿಂದ ಅಡ್ಡದಾರಿ ಹಿಡಿದು, ಹಾದಿ ತಪ್ಪಿ ಜೈಲು ಹಕ್ಕಿಗಳಾಗಿ ಬಂಧೀಖಾನೆ ಎಂಬ ಭಯಾನಕ ಪಂಜರದೊಳಗೇ ಬದುಕು ಸವೆಸುತಿದ್ದಾರೆ! ತಮಗೇ ಅರಿವಿಲ್ಲದೇ ವಿವಿಧ ರೀತಿಯ ದುರಾಸೆಗೆ ದಾಸರಾಗಿ ನಾನಾ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿ ಕೊಲೆ, ಸುಲಿಗೆ, ದರೋಡೆ,ಮೋಸ ವಂಚನೆಗಳಲ್ಲಿ ಮುಳುಗಿ, ಮಾನವೀಯ ಮೌಲ್ಯಗಳನ್ನೇ ಮರೆತು ಸಮಾಜಕ್ಕೆ ಕಂಟಕರಾಗಿ, ವ್ಯವಸ್ಥೆಗೆ ಶಾಪವಾಗಿ ಪರಿಣಮಿಸುತ್ತಿದ್ದಾರೆ. “ಸಾಲ ಮಾಡಿಯಾದರೂ ತುಪ್ಪ ತಿನ್ನು!” ಎಂಬ ತಪ್ಪು ಸಂದೇಶವನ್ನು ತಲೆಗೆ ಹಚ್ಚಿ ಕೊಂಡು ಹಣದಾಸೆಗೆ ಜೈಲುಗಳಲ್ಲಿ ಕುಳಿತು ಮಾಡಬಾರದ್ದನ್ನು ಮಾಡುತ್ತಿದ್ದಾರೆ. ಐಷಾರಾಮಿ ಜೀವನ ನಡೆಸಲು ದುಡ್ಡಿನಾಸೆಗೆ ಅಪ್ಪ ಅಮ್ಮಂದಿರನ್ನೆ ನಡುಬೀದಿಯಲ್ಲಿ ಕೊಂದು ಜೈಲು ಸೇರುತ್ತಿದ್ದಾರೆ! ಎತ್ತ ಸಾಗುತ್ತಿದೆ ನಮ್ಮ ಸಮಾಜ? ಇವರಿಗೆಲ್ಲಾ ಆದರ್ಶಗಳ್ಯಾರು! ಮನುಷ್ಯತ್ವ ವನ್ನೇ ಮರೆಮಾಚುವ, ಸಂಬಂಧಗಳನ್ನೇ ಸಾಯಿಸುವ, ಗೆಳೆತನವನ್ನೆ ಗಲ್ಲಿಗೇರಿಸುತ್ತಿರುವ ಈ ಕಾಂಚಾಣವೆಂಬ ಕಾಸು ಮಾತ್ರವೇ ಎಲ್ಲರಿಗೂ ಬಾಸು ಎಂಬಂತಾದರೇ ಈ ಸಮಾಜದ ಭವಿಷ್ಯದ ಗತಿಯೇನು? ಜೈಲುಗಳು ರಾಜರ ಕಾಲದಿಂದಲೂ ಇವೆ. ಬ್ರಿಟೀಷರ ವಸಾಹತು ಸಾಮ್ರಾಜ್ಯದಲ್ಲೂ ಇದ್ದವು.

ಗಣರಾಜ್ಯವಾದ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೂ ಇವೆ. ಮುಂದೆಯೂ ಇರುತ್ತವೆ. ಪ್ರೀತಿ ಮಮತೆ ಹಂಚುತ್ತಿದ್ದ ಬುದ್ದನನ್ನೇ ನಿಶೇದಿಸಿದ ಈ ಜಗತ್ತಿನಲ್ಲಿ, ಕರುಣೆಯ ಕೈವಲ್ಯ ಬಿತ್ತಲು ಹೊರಟ ಜೀಸಸ್ ನನ್ನೇ ಶಿಲುಬೆಗೇರಿಸಿ ಮೈಯೆಲ್ಲಾ ಮೊಳೆಜಡಿದು ಕೊಂದ ನಾಡಿನಲ್ಲಿ, ಶಾಂತಿ ಬಯಸಿದ ಪೈಗಂಬರ್ ನನ್ನೇ ಭಯೋತ್ಪಾದಕರ ನಾಯಕನೆಂದು ತಪ್ಪಾಗಿ ಅರ್ಥೈಸುತ್ತಿರುವ ಹೊತ್ತಿನಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಲು ಹೊರಟವನೆ ಅಪರಾಧಿಯಾಗಿ ಕಾಣುತ್ತಾನೆ! ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವನು ಬಂಡುಕೋರನಂತೆ ಗೋಚರಿಸುತ್ತಾನೆ! ಇವೇ ಕಂಬಿಗಳ ಹಿಂದೆ ಇರುವ ಕಂಬಿ ಕಳ್ಳರನ್ನು ಬಳಸಿಕೊಂಡು ಈ ಭ್ರಷ್ಟ ರಾಜಕಾರಣಿಗಳು, ಮತ ಧರ್ಮಗಳ ಅಫೀಮು ಕುಡಿದ ಮೂಡರು, ಮಾನವೀಯ ಮೌಲ್ಯಗಳನ್ನು ಬಿತ್ತಲು ಹೊರಟವರನ್ನೇ ಮ್ರಗೀಯವಾಗಿ ಬೇಟೆಯಾಡಿ ಸುತ್ತಾರೆ . ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟಿ ಭ್ರಷ್ಟ ನೊಬ್ಬ ಬಂಧೀಖಾನೆಗಳ ರಾಜಧಾನಿಗೆ ರಾಜನಾಗುತ್ತಾನೆ! ಸಣ್ಣ ಪುಟ್ಟ ರೌಡಿಗಳನ್ನು ಹಾದಿ ತಪ್ಪಿಸಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಈ ವ್ಯವಸ್ಥೆ ರೌಡಿಗಳನ್ನೇ ಭೂಗತ ದೊರೆ! ರಾಜಾ! ಎಂದು ಉಬ್ಬಿಷಿ-ನಂಬಿಸಿ ಕತ್ತು ಕುಯ್ಯುತ್ತಾರೆ! ಇದು ಹೀಗೆಯೇ ಸುದೀರ್ಘವಾಗಿ ನಡೆದುಕೊಂಡು ಬರುತ್ತಿದೆ. 1986-88ರಿಂದಲೂ ಬೆಂಗಳೂರನ್ನು, ಬೆಂಗಳೂರು ಜೈಲನ್ನು ಈ ಭೂಗತ ಜಗತ್ತಿನ ರೌಡಿಗಳೇ ರೂಲ್ ಮಾಡಿಕೊಂಡು ಬರುತ್ತಿದ್ದಾರೆ.

ತಮ್ಮ ರೌಡಿ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಲು ರೌಡಿಗಳ ಮಧ್ಯೆ ಗ್ಯಾಂಗ್ ವಾರ್ ಗಳು, ರಿವೇಂಜ್ ಕಿಲ್ಲಿಂಗ್, ಸುಫಾರಿ ಕಿಲ್ಲಿಂಗ್ ನಡೆದು ನೂರಾರು ಜನರು ಮಣ್ಣು ಸೇರಿದ್ದಾರೆ. ಕರ್ನಾಟಕದ ಖಡಕ್ ಪೊಲೀಸ್ ಆಫೀಸರ್ ಗಳು ಎಷ್ಟೇ ಎನ್ ಕೌಂಟರ್ ನಡೆಸಿದರೂ ತಣ್ಣಗಾಗದ ಈ ಭೂಗತ ಜಗತ್ತಿನ ಆಟ ಈಗ ರಾಜಕಾರಣಿಗಳ ನಂಟಿನೊಂದಿಗೆ, ಕೆಲವು ಭ್ರಷ್ಟ ಪೊಲೀಸರ ಬೆಂಬಲದೊಂದಿಗೆ ರಂಗೇರಿದೆ! ಈ ಚದುರಂಗದಾಟಕ್ಕೆ ಜೈಲು ಅಧಿಕಾರಿಗಳು ಸಾತ್ ನೀಡುತ್ತಿರುವುದೇನೂ ಸುಳ್ಳಲ್ಲ. ಬಹಳ ಹಿಂದಿನಿಂದಲೂ ರಾಜ್ಯದ ಎಲ್ಲಾ ಜೈಲುಗಳಲ್ಲು ಈ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಲ್ಲೊಬ್ಬ ಇಲ್ಲೊಬ್ಬ ಪ್ರಾಮಾಣಿಕ ಅಧಿಕಾರಿಗಳು ಈ ಜೈಲಿನ ಅಕ್ರಮ ಚಟುವಟಿಕೆಗಳನ್ನು ಸರಿಮಾಡಲು ಮುಂದಾಗಿ , ಮೇಲಧಿಕಾರಿಗಳಿಂದಲೇ, ಧಮ್ಕಿ ಹಾಕಿಸಿಕೊಂಡು ಮೌನಕ್ಕೆ ಶರಣಾಗಿದ್ದಾರೆ. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನಾನಾ ಅಪರಾಧ ಪ್ರಕರಣಗಳನ್ನು ಹೊತ್ತುಬಂದಿದ್ದ ಹಣವಂತರು , ಮಂತ್ರಿಗಳು ತಮ್ಮ ಐಷಾರಾಮಿ ಸುಖಕ್ಕಾಗಿ ಇಲ್ಲಿ ಹಣಕೊಟ್ಟು ಸೌಲಭ್ಯಗಳನ್ನು ಪಡೆಯುವ ಪರಿಪಾಠವನ್ನು ಪರಿಚಯಿಸಿ ಹೋಗಿದ್ದಾರೆ.

ಅದನ್ನೇ ರೌಡಿಗಳು ಫಾಲೋ ಮಾಡಿಕೊಂಡು ಬರುತ್ತಿದ್ದಾರೆ ಅಷ್ಟೇ! ತಮಿಳು ನಾಡಿನ ಮುಖ್ಯಮಂತ್ರಿ ಜಯಲಲಿತಾ ಸ್ನೇಹಿತೆ ಶಶಿಕಲಾ ಶಿಕ್ಷೆಗೊಳಗಾಗಿ , ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂದಿಯಾಗಿದ್ದಾಗ ಆಕೆಗೆ ಟಿವಿ ಮತ್ತು ವಿಶೇಷ ಆಹಾರ ವಸ್ತ್ರಗಳನ್ನು ನೀಡಲಾಗಿದೆ ಎಂದು ಗುಲ್ಲೆದ್ದು, ಜೈಲಿಗೆ ದಾವಿಸಿದ್ದ ಅಂದಿನ ಜೈಲು ಡಿ.ಐ.ಜಿ‌ ರೂಪರವರು ಮಾಧ್ಯಮದವರೆದುರು ಇಡೀ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನೆಲ್ಲಾ ನಾನೇ ಸ್ವಚ್ಚ ಮಾಡುತ್ತೇನೆ ಎಂಬಂತೆ ಮಾತನಾಡಿದ್ದರು. ಆ ಘಟನೆಯ ನಂತರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಕೆಲವು ಭ್ರಷ್ಟ ಜೈಲು ಅಧಿಕಾರಿಗಳಿಗೆ ಎತ್ತಂಗಡಿ ಮಾಡಲಾಯಿತಾದರೂ, ಕ್ರಷ್ಣ ಕುಮಾರ್ ರಂತಹ ದಕ್ಷ ಪ್ರಾಮಾಣಿಕ ಅಧಿಕಾರಿಗಳನ್ನೂ ಬೆಂಗಳೂರು ಜೈಲಿನಿಂದ ಯಾವುದೋ ಒತ್ತಡಕ್ಕೆ ಮಣಿದು ಸರ್ಕಾರ ಟ್ರಾನ್ಸ್ ಫರ್ ಮಾಡಿತ್ತು. ಜೈಲಿನ ಭ್ರಷ್ಟಾಚಾರದ ವಿರುದ್ಧ, ರೌಡಿಗಳ ಅಕ್ರಮ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಬೆಂಗಳೂರಿನ ಕುಖ್ಯಾತ ರೌಡಿಗಳಿಂದ ಬೆದರಿಕೆಗೆ-ಕೆಂಗಣ್ಣಿಗೆ ಗುರಿಯಾಗಿದ್ದ ಕ್ರಷ್ಣ ಕುಮಾರ್ ಯಾವುದೇ ರೀತಿಯ ಗೊಡ್ಡು ಬೆದರಿಕೆಗಳಿಗೂ ಬಗ್ಗದೆ, ಜೈಲಿನ ಅವ್ಯವಸ್ಥೆ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಪ್ರಾಮಾಣಿಕವಾಗಿ ಶ್ರಮಿಸಿದ್ದರು. ಜೈಲಿನಲ್ಲಿ ಖೈದಿಗಳು ಮನಃಪರಿವರ್ತನೆ ಯಾಗಿ ಬದಲಾಗಿ ಹೊರಹೋಗಲೆಂದು “ರೂಪಾಂತರ,” ಎಂಬ ವಿಭಿನ್ನ ದ್ಯಾನಶಿಭಿರದ ಕಾರ್ಯಾಗಾರದ ಮೂಲಕ ರೌಡಿಗಳಿಗೆ ಶಾಂತಿಯ ಹಾದಿ ಬೋದಿಸಿದ್ದರು. ಅದಕ್ಕಾಗಿಯೇ ಇತ್ತೀಚೆಗೆ ಜೈಲಿನಲ್ಲಿ ಅನಾರೋಗ್ಯದ ಸಾವುಗಳ ವಿಚಾರಕ್ಕೆ, ಹಣಕಾಸು ಪೀಕುವ ಭ್ರಷ್ಟಾಚಾರದ ವಿಚಾರಕ್ಕೆ ಪ್ರತಿಭಟನೆಗಳಾದಾಗ ಮತ್ತೆ ಬೆಂಗಳೂರು ಜೈಲಿಗೆ ಬೆಳಗಾಂ ಇಂಡಲಗಾ ಜೈಲಿನಲ್ಲಿರುವ ಕ್ರಷ್ಣ ಕುಮಾರ್ ರನ್ನೇ ಕರೆತನ್ನೀ ಎಂದು ಖೈದಿಗಳ ಕಡೆಯಿಂದ ಕೂಗೆದ್ದಿತ್ತು. ಇಡೀ ಜೈಲನ್ನೇ ಹಾಳುಮಾಡುತ್ತಿರುವ ಈ ಭ್ರಷ್ಟ ಜೈಲು ಅಧಿಕಾರಿ ಸಿಬ್ಬಂದಿ ವರ್ಗಕ್ಕೆ ಬುದ್ಧಿ ಕಲಿಸಲು ಕ್ರಷ್ಣ ಕುಮಾರ್ ರಂತಹ ದಕ್ಷ ಪ್ರಾಮಾಣಿಕ ಅಧಿಕಾರಿಯೇ ಸೂಕ್ತ ಎಂಬುದು ಹಲವು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಗೊತ್ತಿದೆ. ಈಗಿರುವ ಅಧೀಕ್ಷಕ ರಂಗನಾಥ್ ಬಂದಾಗಿನಿಂದಲೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಏನು ನಡೆಯುತ್ತಿದೆ ಎಂಬುದು ಅಲ್ಲಿರುವ ಎಲ್ಲಾ ಖೈದಿಗಳಿಗೂ ಗೊತ್ತಿದೆ. ಒಂದಕ್ಕೆರಡು ಹಣ ಕಿತ್ತುಕೊಂಡು ಜೈಲಿನ ಖೈದಿಗಳನ್ನು ಹಿಂಸಿಸುತಿದ್ದರೂ, ಸೋಷಿಯಲ್ ಮೀಡಿಯಾಗಳಿಗೆ ದುಡ್ಡು ಕೊಟ್ಟು ಪರಮ ಪ್ರಾಮಾಣಿಕ ಅಧಿಕಾರಿ ಎಂದು ಪೋಜುಕೊಡುತ್ತಿರುವ ಈ ಅಧೀಕ್ಷಕ ರಂಗನಾಥ್ ಮತ್ತವರ ಪಟಾಲಂ ಹಾವಳಿಯಿಂದ ಪರೋಕ್ಷವಾಗಿ ಬೆಂಗಳೂರಿನಲ್ಲಿ ಕ್ರೈಂ ರೇಟ್ ಜಾಸ್ತಿ ಯಾಗಿದೆಯಂತೇ! ಇಲ್ಲಿರುವ ಭ್ರಷ್ಟ ಜೈಲಿನ ಸಿಬ್ಬಂದಿ ಗಳಿಗೆ ಟೀವಿಗಿಷ್ಟೂ, ನೀರಿಗಿಷ್ಟೂ, ರೂಮಿಗಿಷ್ಟೂ, ಎಂಟ್ರಿಗಿಷ್ಟೂ ಎಂದು ತಿಂಗಳಿಗೆ ಹಣ ಕೊಡುವುದಕ್ಕಾಗಿಯೇ ಅಲ್ಲಿರುವ ಖೈದಿಗಳು ಒಳಗಿನಿಂದಲೇ ಕ್ರೈಂ ಮಾಡಬೇಕಾದ ಅನಿವಾರ್ಯತೆ ತಂದಿಟ್ಟಿದ್ದಾರೆ! ಕೆಲವು ಹಿರಿಯ ಜೈಲು ಅಧಿಕಾರಿಗಳೂ ಸೇರಿಕೊಂಡು ದೊಡ್ಡ ದೊಡ್ಡ ರೌಡಿಗಳಿಗೆ ಸಕಲ ಸೌಲಭ್ಯಗಳನ್ನು ನೀಡಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವುದೇನೂ ಗುಟ್ಟಾಗಿ ಉಳಿದಿಲ್ಲ! ಪರಪ್ಪನ ಅಗ್ರಹಾರ ಬಂಧೀಖಾನೆಯಲ್ಲಿ ದುಡ್ಡು ಕೊಟ್ಟರೆ ಎಲ್ಲಾ ಸಿಗುತ್ತದೆ ಎಂಬುದನ್ನು ಎಲ್ಲಾ ಮಾಧ್ಯಮಗಳು ಬಯಲಿಗೆಳೆದಿವೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಕಳೆದ ವರ್ಷ ಜುಲೈ ಮತ್ತು ಡಿಸೆಂಬರ್ ತಿಂಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಡಾಗ್ ಸ್ಕ್ವಾಡ್ ನೊಂದಿಗೆ ಮೂವರು ಎಸಿಪಿ ಗಳು ಹಾಗೂ 15 ಇನ್ಸ್ಪೆಕ್ಟರ್ ಗಳು ಏಕಕಾಲದಲ್ಲಿ ಜೈಲಿಗೆ ಬೆಳ್ಳಂಬೆಳಗ್ಗೆ ದಾಳಿ ಇಟ್ಟಿದ್ದರು. ಜೈಲಿನ ಅಧಿಕಾರಿಗಳು ಬಾಗಿಲಿನಲ್ಲೆ ಪೊಲೀಸರ ಸಹಿಮಾಡಿಸಿಕೊಳ್ಳುವ ನೆಪದಲ್ಲಿ ಬಾಗಿಲಲ್ಲೇ 30ನಿಮಿಷ ತಡೆದು ನಾಟಕಮಾಡಿದ್ದೂ ಸುದ್ದಿಯಾಗಿತ್ತು! ಪ್ರತಿಯೊಂದು ಬ್ಯಾರಕ್ ಹಾಗೂ ವಿ. ಐ.ಪಿ ಕೊಠಡಿಗಳನ್ನೂ ಕೂಲಂಕಷವಾಗಿ ಪರಿಶೀಲಿಸಿದಾಗ ಏನೂ ಸಿಕ್ಕಿರಲೇಇಲ್ಲ. ರೌಡಿಗಳು ಮೊಬೈಲ್ ಫೋನ್ ಬಳಸಿಕೊಂಡು ಜೈಲಿನೊಳಗಿನಿಂದಲೇ ಅಪರಾಧ ಕ್ರತ್ಯವೆಸಗಲು ಸಂಚು ರೂಪಿಸುತ್ತಿದ್ದಾರೆ‌. ಜೈಲಿನಿಂದಲೇ ಕೆಲವರಿಗೆ ಹಫ್ತಾ ವಸೂಲಿಗಾಗಿ ಬೆದರಿಕೆ ಹಾಕಲಾಗುತ್ತಿದೆ. ಜೈಲಿನೊಳಗೆ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದಾರೆ. ಎಂಬ ಖಚಿತ ಮಾಹಿತಿ ಆಧಾರದಲ್ಲಿ ಹೋಗಿದ್ದ ಪೊಲೀಸ್ ತಂಡಕ್ಕೆ ನಿರಾಸೆಯಾಗಿತ್ತು. ಬರಿಗೈಲೇ ವಾಪಸ್ಸಾಗಿದ್ದರು‌.

 

ಮುಂಜಾನೆಯೆ ಸಿಸಿಬಿ ಪೊಲೀಸರು ಜೈಲು ರೈಡಿಗೆ ಬರುತ್ತಾರೆಂಬ ಸೀಕ್ರೆಟ್ ವಿಷಯವನ್ನು ಯಾರೋ ಪೊಲೀಸ್ ಇಲಾಖೆಯವರೇ ಜೈಲಿನ ಅಧಿಕಾರಿಗಳಿಗೋ, ರೌಡಿಗಳಿಗೋ ತಿಳಿಸಿ ಎಲ್ಲಾ ಹಾಳುಮಾಡಿಬಿಟ್ಟಿದ್ದರು! ಸಿಸಿಬಿ ಪೊಲೀಸರಿಗೂ ಚಳ್ಳೇಹಣ್ಣು ತಿನ್ನಿಸುವ ಇವರ ಚಾಣಾಕ್ಷ ನೆಟ್ವರ್ಕ್ ನೋಡಿ. ನಾಲ್ಕು ಸಾವಿರಕ್ಕೂ ಅಧಿಕವಿರುವ ವೀಚಾರಣಾಧೀನ ಮತ್ತು ಸಜಾಬಂದಿಗಳ ಬ್ಯಾರಕ್ಕುಗಳು, ವಿ.ಐ.ಪಿ. ಸೆಲ್ ಗಳು, ಟಿರರಿಸ್ಟ್ ಸೆಲ್ಗಳು, ಲೆಡೀಸ್ ಬ್ಯಾರಕ್ಕೂ ಎಲ್ಲವನ್ನೂ ಮಧ್ಯಾನದ ವರೆಗೂ ಜಾಲಾಡಿ ತಲೆಕೆಡಿಸಿಕೊಂಡು ವಾಪಾಸ್ಸಿಗಿತ್ತು ಸಿಸಿಬಿ ಪೊಲೀಸರ ಟೀಂ. ಬೆಂಗಳೂರಿನಲ್ಲಿ ರೌಡಿಗಳ ನಡುವೆ ಗ್ಯಾಂಗ್ ವಾರ್, ರಿವೇಂಜ್ ಕಿಲ್ಲಿಂಗ್ ಗಳಾದಾಗ ಹೀಗೆ ಸ್ವಯಂ ಪ್ರೇರಿತರಾಗಿ ಬೆಂಗಳೂರಿನ ಪೊಲೀಸರೇ ನಗರದ ಎಲ್ಲಾ ರೌಡಿಗಳ ಮನೆ ಮೇಲೆ ರಾತ್ರೋರಾತ್ರಿ ದಾಳಿ ನಡೆಸುವುದು ಜೈಲಿನೊಳಗೆ ದಿಡೀರ್ ನುಗ್ಗಿ ಸಿಸಿಬಿ ಪೊಲೀಸರು ತಪಾಸಣೆ ನಡೆಸುವುದು, ಪ್ರತಿ ಠಾಣಾ ವ್ಯಾಪ್ತಿಯಲ್ಲಿಯೂ ರೌಡಿ ಪೆರೇಡ್ ನಡೆಸಿ ಸಿಂಗಂ ಸ್ಟೈಲ್ ನಲ್ಲಿ ವಾರ್ನಿಂಗ್ ಕೊಡುವುದು ವಾಡಿಕೆಯಾಗಿದೆ. ಕರ್ನಾಟಕ ರಾಜ್ಯದಾದ್ಯಂತ ಮಾದಕವಸ್ತು ಕಳ್ಳಸಾಗಾಣಿಕೆ ಮಾರಾಟದ ಜಾಲವನ್ನು ಭೇದಿಸಿ ಬುಡಸಮೇತ ಕಿತ್ತು ಹಾಕಲು ಪಣತೊಟ್ಟಿದ್ದ ನಮ್ಮ ಪೊಲೀಸರು ಡ್ರಗ್ಸ್ ಮಾಫಿಯಾ ಜಾಲದ ಹಲವಾರು ಡ್ರಗ್ಸ್ ದಂಧೆಯ ಪೆಡ್ಲರ್ ಗಳನ್ನು, ಸಿನಿಮಾ ರಂಗದ ನಟ-ನಟಿಯರನ್ನು ಹೆಡೆಮುರಿ ಕಟ್ಟಿ ತಂದು ಜೈಲಿಗಟ್ಟಿದ್ದರು. ಅದೆ ಟೈಮಿನಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ದಿಢೀರ್ ದಾಳಿಮಾಡಿದ್ದಾಗ ಆಗಿ ಜೈಲಿನ ಬ್ಯಾರಕ್ಕು ಗಳಲ್ಲಿ ಗಾಂಜಾ ಪ್ಯಾಕೆಟ್, ಸೇದುವ ಕೊಳವೆ ಸೇರಿದಂತೆ ಅನೇಕ ಮಾರಕ ವಸ್ತುಗಳು, ಮೊಬೈಲ್ ಫೋನ್, ಸಿಮ್ ಪತ್ತೆಯಾಗಿದ್ದವು. ಜೈಲಿನಲ್ಲಿ ನೀಡುವ ತಟ್ಟೆ, ಲೋಟ, ಹಾಗೂ ಕಬ್ಬಿಣದ ಸಲಾಕೆ ಗಳನ್ನೇ ಚಾಕು ಚೂರಿಯಂತಹ ಆಯುದಗಳನ್ನಾಗಿ ಮಾಡಿಟ್ಟುಕೊಂಡಿರುವುದು ಪತ್ತೆಯಾಗಿತ್ತು. ಜೈಲ್ ರೈಡ್ ಮಾಡುವುದು. ರೈಡ್ ವಿಷಯ ಮೊದಲೆ ತಿಳಿದು ಎಲ್ಲಾ ವಸ್ತು ಗಳನ್ನೂ ಬಚ್ಚಿಡುವುದು ಇದು ಹಳೇ ಕತೆ. ಇದರಿಂದ ಏನೂ ಪ್ರಯೋಜನವಿಲ್ಲ. ನೋಡಿ ಮಾಧ್ಯಮದಲ್ಲಿ ಪ್ರಸಾರವಾದ ಜೈಲು ಅಧಿಕಾರಿಗಳು ಹಣ ಪಡೆಯುತ್ತಿರುವ ವೀಡಿಯೋ ಚಿತ್ರೀಕರಣ ವಾಗಿರುವುದು 2018-19ರಲ್ಲಿ ಆಗ ಜೈಲಿನಲ್ಲಿ ಮುಖ್ಯ ಅಧೀಕ್ಷಕರಾಗಿದ್ದವರು ಈಗ ಜೈಲಿನ ಅಕ್ರಮಗಳ ತನಿಖೆಗೆ ನೇಮಕಗೊಂಡಿರುವ ಇದೆ ಡಿ.ಐ.ಜಿ. ಸೋಮಶೇಖರ್! ಈಗ ಅವರ ಅವಧಿಯಲ್ಲಿ ಚಿತ್ರೀಕರಣವಾಗಿದೆಯೆಂಬ ಜೈಲೊಳಗಿನ ವೀಡಿಯೋದ ಬಗ್ಗೆ ಅವರೇ ಕೂಲಂಕಷವಾಗಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕಂತೇ! ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಈಗಲೂ ನಡೆಯುತ್ತಿರುವ ಎಲ್ಲಾ ಅಕ್ರಮ ಚಟುವಟಿಕೆಗಳ ಸರದಾರ ಮುಖ್ಯ ಅಧೀಕ್ಷಕ ರಂಗನಾಥ್ ರವರೇ ಬೆಂಗಳೂರು ಜೈಲಿಗೆ ತನಿಖೆಗೆ ಬಂದಿದ್ದ ತನಿಖಾಧಿಕಾರಿ ಸೋಮಶೇಖರ್ ಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೀತೆ! ಇದರ ಆಧಾರದ ಮೇಲೆ ಮಾನ್ಯ ರಾಜ್ಯದ ಕೇಂದ್ರ ಕಾರಾಗೃಹಗಳ ಮುಖ್ಯಸ್ಥರಾದ ಅಲೋಕ್ ಮೋಹನ್ ರವರು 20ಪ್ರಮುಖ ಅಂಶಗಳುಳ್ಳ ಆರು ಪುಟಗಳ ವರದಿಯನ್ನು ಸಲ್ಲಿಸಿದ್ದಾರಂತೆ. ಅದರಲ್ಲಿ ಪ್ರಮುಖವಾಗಿ ಉಲ್ಲೇಖಿಸಿರುವ ಅಂಶವೆಂದರೆ, ಕೆಲವು ಜೈಲಿನ ಪೊಲೀಸ್ ಸಿಬ್ಬಂದಿಗಳ ಪಿತೂರಿಯಿಂದಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಗಿಲ್ಲ ಎಂಬುದು! ಇದುವರೆಗೂ ಖೈದಿಗಳು ಗಾಂಜಾ ಮತ್ತು ಮೊಬೈಲ್ ಫೋನ್ ಬಳಸಿದ್ದರಿಂದ 19ಮಂದಿ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆಯಂತೆ. ಸುಮಾರು ವರ್ಷಗಳಿಂದ ಇಲ್ಲೇ ಠಿಕಾಣಿ ಹೂಡಿರುವ 52 ಜೈಲು ಸಿಬ್ಬಂದಿಯನ್ನು ವರ್ಖಾವಣೆ ಮಾಡಲಾಗಿದೆ ಎಂಬ ಹಳೇ ಕತೆಯನ್ನೇ ಉಲ್ಲೇಖಿಸಲಾಗಿದೆ. ಮುಖ್ಯ ಅಧೀಕ್ಷಕರು ಮತ್ತು ಅಧೀಕ್ಷಕ ರಂತಹ ಅಧಿಕಾರಿಗಳು ಮಾತ್ರವೇ ಜೈಲಿನೊಳಗೆ ಮೊಬೈಲ್ ಬಳಸಬಹುದು ಎಂದು ವರದಿ ಹೇಳುತ್ತದೆ. ಆದರೆ ರೌಡಿಗಳನ್ನು ನೋಡಲು ಬರುವವರಿಂದ ಜೈಲು ಸಿಬ್ಬಂದಿ ಹಣ ವಸೂಲಿ ಮಾಡುವ ವಿಚಾರವಾಗಲಿ, ತರಕಾರಿ, ಕ್ಯಾಂಟೀನ್ ವಾಹನದಲ್ಲೇ ಸಪ್ಲೈ ಆಗುವ ಗಾಂಜಾ, ಸಿಗರೇಟು, ಮದ್ಯೆ, ಮೊಬೈಲ್, ಸಿಮ್ಮುಗಳ ಬಗ್ಗೆಯಾಗಲೀ ವರದಿಯಲ್ಲಿ ಎಲ್ಲಿಯೂ ಚಕಾರವೆತ್ತಿಲ್ಲ. ಹಣವಂತ ಖೈದಿಗಳು ಜೈಲಿನೊಳಗೆ ತೀರಿಸಿಕೊಳ್ಳವ ಕೇಜಿಗಟ್ಟಲೆ ಚಿಕನ್, ಮಟನ್ ಆಳೇತ್ತರದ ಬರ್ತ್ ಡೇ ಕ್ರಿಂ ಕೇಕ್ ಗಳ ಬಗ್ಗೆಯೂ ಸೊಲ್ಲೆತ್ತಿಲ್ಲ. ಅಲ್ಲಿಗೆ ತನಿಖೆಯ ನಾಟಕದ ಪರದೆ ಕ್ಲೋಸ್! ಹಿಂಗಾದರೇ ಜೈಲು ಸುಧಾರಿಸುವುದು ಹೇಗೇ? ಅಕ್ರಮ ಚಟುವಟಿಕೆಗೆ ಕಡಿವಾಣ ಬೀಳುವುದು ಯಾವಾಗ? ಜೈಲಿನಲ್ಲಿ ಸಾಕಷ್ಟು ಭದ್ರತೆಯ ಕೊರೆತೆಯೂ ಇದೆ. ಆದ ಕಾರಣದಿಂದಲೇ ತಮಿಳು ನಾಡಿನ ರೇಪಿಸ್ಖ್ ಶಂಕರ್ ಎಂಬ ಖೈದಿ ಎತ್ತರದ ಗೋಡೆ ಹಾರಿ ಪರಾರಿಯಾಗಿದ್ದ! ದೇಶದ ಎಲ್ಲಾ ಕಾರಾಗೃಹಗಳಲ್ಲಿ ಸಂದರ್ಶಕರ ಮಂಡಳಿ ರಚನೆ ಮಾಗಬೇಕು ಎಂದು ಸುಪ್ರೀಂ ಕೋರ್ಟ್ ಹಲವು ವರ್ಷಗಳ ಹಿಂದೆಯೇ ಹೇಳಿದ್ದರೂ ಆದೆಶ ಪಾಲನೆಯಾಗುತ್ತಿಲ್ಲ. ಅಕ್ರಮ ಚಟುವಟಿಕೆ ತಡೆಯಲು ಮೊಬೈಲ್ ಫೋನ್ ಜಾಮರ್ ಉನ್ನತಿಕರಿಸುವ ಅಗತ್ಯವಿದೆ. ಪ್ರಮುಖವಾಗಿ ಖೈದಿಗಳಿಗೆ ವೈದ್ಯಕೀಯ ವ್ಯವಸ್ಥೆಯ ಕೊರತೆ ಇದೆ. ರಾತ್ರಿವೇಳೆ ವೈಧ್ಯರಿಲ್ಲದೆ ಈಗಲೂ ತೊಂದರೆಯಾಗುತ್ತಿದೆ. ಮತ್ತು ಕ್ರೂರ ಖೈದಿಗಳ ಮನಪರಿವರ್ತನೆಗೆ ಕೌನ್ಸೆಲಿಂಗ್ ಕ್ಲಾಸ್ ಗಳ ಅವಶ್ಯಕತೆ ಇದೆ.

 

ಮಾದಕ ವಸ್ತುಗಳನ್ನು ಮತ್ತು ಮೊಬೈಲ್ ಫೋನ್ ಗಳನ್ನು ಮಾತ್ರ ಯಾವುದೇ ಕಾರಣಕ್ಕು ತಡೆಹಿಡಿಯಬೇಡಿ ಎಂದು ಜೈಲು ಅಧಿಕಾರಿಗಳಿಂದಲೆ ಗುಪ್ತ ಸಂದೇಶವಿದೆಯೆಂಬ ಅನುಮಾನಗಳು ಓಡಾಡುತ್ತಿದೆ. ಇದರ ಹಿಂದಿರುವ ಮರ್ಮವೇನೆಂಬುದು ಇನ್ನೂ ನಿಗೂಢ. ಹಾಗೆಯೇ ಬೇರೆಯ ರಾಜ್ಯಗಳಲ್ಲಿ ಆಗಿರುವಂತೆ ಸಜಾ ಬಂದಿಗಳನ್ನ ಹತ್ತರಿಂದ ಹನ್ನೊಂದು ವರ್ಷಗಳು ಪೂರೈಸುತ್ತಿದ್ದಂತೆಯೆ ಸನ್ನಡತೆಯ ಆಧಾರದಲ್ಲಿ ಗುರುತಿಸಿ ಬಿಡುಗಡೆಗೊಳಿಸುವ ಕೆಲಸವಾಗಬೇಕಿದೆ. ಜೈಲಿನಿಂದ ಹೆಚ್ಚಿನ ಕಮರ್ಶಿಯಲ್ ಆದಾಯ ಹೇಗೆ ತರಬಹುದು ಎಂಬ ವಾಣಿಜ್ಯ ವಹಿವಾಟಿನ ನಿರೀಕ್ಷೆ ಯಲ್ಲಿರುವ ಬಂದೀಖಾನೆ ಸಚಿವಾಲಯ ಮತ್ತು ಸರ್ಕಾರಗಳು, ಜೈಲಿನಲ್ಲಿ ರುವ ಮರಗೆಲಸ, ಪ್ಯಾಬ್ರಿಕೆಷನ್, ಮಗ್ಗ ನೂಲುವ ಮತ್ತು ಮುದ್ರಣ ವಿಭಾಗನ್ನು ‘ಸಿಲ್ಕ್ ಇಂಡಿಯಾ ಯೋಜನೆ_ವ್ಯಾಪ್ತಿಯೊಳಗೆ ತಂದು ಅಲ್ಲಿ ದುಡಿಯುವ ಖೈದಿಗಳಿಗೆ ಹೆಚ್ಚಿನ ಕೂಲಿಯನ್ನು ನಿಗದಿ ಮಾಡಬೇಕಾಗಿದೆ. 2200ಖೈದಿಗಳನ್ನು ಇಡಬೇಕಾದ ಕ್ಯಪಾಸಿಟಿ ಇರುವ 40ಎಕರೆ ವಿಸ್ತೀರ್ಣದ ಈ ಜೈಲಿನಲ್ಲಿ ಈಗ 4000ಕ್ಕೂ ಹೆಚ್ಚಿನ ಖೈದಿಗಳನ್ನು ಕುರಿಗಳಂತೆ ತುಂಬಲಾಗಿದೆ. ಜೈಲಿನ ವ್ಯವಹಾರಗಳಲ್ಲಿ ರಾಜಕಾರಣಿಗಳು ಹಸ್ತಕ್ಷೇಪ ಮಾಡುವುದನ್ನು, ಅಲ್ಲಿರುವ ಖೈದಿಗಳ ಪರವಾಗಿ ವಕಾಲತ್ತು ವಹಿಸುವುದನ್ನು ಮೂದಲು ತಪ್ಪಿಸಬೇಕಿದೆ. ಭ್ರಷ್ಟಾಚಾರ ಈಗ ಎಲ್ಲಾಕಡೆ ತಾಂಡವವಾಡುತ್ತಿರುವ ರಾಷ್ಟ್ರೀಯ ಸಮಸ್ಯೆ-ಪಿಡುಗು! ಆದ್ದರಿಂದಲೇ ಜೈಲಿನಲ್ಲಿಯೂ ಎಲ್ಲಾಕಡೆಯೂ ಭ್ರಷ್ಟ ಅಧಿಕಾರಿಗಳು ಸೇರಿಕೊಂಡಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಕ್ರಿಮಿನಲ್ ಗಳಿರುವ ಜೈಲುಗಳಲ್ಲಿ ಕ್ರಿಮಿನಲ್ ಗಳ ಜೊತೆಗೆ ಕೈಜೋಡಿಸಿ ಆರೋಗ್ಯಕರ ಸಾಮಾಜಿಕ ವ್ಯವಸ್ಥೆಯನ್ನೇ ಹಾಳುಮಾಡುವ ಮನಸ್ಸಿರುವ ಜೈಲು ಅಧಿಕಾರಿಗಳು ಸೇರಿಕೊಂಡರೆ ಸಮಾಜದ ಗತಿ ಏನು? ಜೈಲುಗಳು ಪರಿವರ್ತನೆಯ ಧ್ಯಾನ ಮಂದಿರಗಳಾಗಬೇಕಾದರೆ ಅಲ್ಲಿಗೆ ನಿಷ್ಠಾವಂತ, ಹ್ರದಯವಂತ ಅಧಿಕಾರಿಗಳನ್ನು ಸರ್ಕಾರ ನೇಮಿಸಬ

Girl in a jacket
error: Content is protected !!