ಆಕ್ಸಿಜನ್ ಮಾರಾಟ ಜಾಲ: ಮತ್ತಿಬ್ಬರ ಬಂಧನ

Share

ಬೆಂಗಳೂರು,ಮೇ,22:ಒಂದು ಕಡೆ ಸರ್ಕಾರ ಆಕ್ಸಿಜನ್ ಅಗತ್ಯ ಇರುವಕಡೆಗೆ ತಕ್ಷಣ ಒದಗಿಸಲಾಗುತ್ತದೆ ಎಂದು ಆದರೆ ಆಕ್ಸಿಜನ್ ಮಾರಾಟ ಜಾಲ ಮಾತ್ರ ನಿಂತಿಲ್ಲ.ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹೆಚ್ಚು ಬೆಲೆಗೆ ಆಕ್ಸಿಜನ್ ಮಾರುತ್ತಿದ್ದ ಶಿವ ಗಣೇಶ್ ಮತ್ತು ಭರತ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಇವರಿಬ್ಬರು ಶೇಷಾದ್ರಿಪುರಂ ಮತ್ತು ಬ್ಯಾಟರಾಯನ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕ್ಸಿಜನ್ ಸಿಲಿಂಡರ್ ದಾಸ್ತಾನು ಮಾಡಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದರು. ಸಂಕಷ್ಟದಲ್ಲಿರೋ ರೋಗಿಗಳನ್ನೆ ಟಾರ್ಗೆಟ್ ಮಾಡಿ ಆಕ್ಸಿಜನ್ ಸಿಲಿಂಡರ್‍ ಗಳನ್ನು ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ದೂರು ಕೇಳಿ ಬಂದಿತ್ತು. ಬಳಿಕ ಕಾರ್ಯಾಚರಣೆಗೆ ಇಳಿದ ಪೊಲೀಸರು ಸಿಲಿಂಡರ್ ಕೇಳುವ ನೇಪದಲ್ಲಿ ಹೋಗಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದ ಆಕ್ಸಿಜನ್ ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಶೇಷಾದ್ರಿಪುರಂ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಆಕ್ಸಿಜನ್ ಅಭಾವವನ್ನೇ ಬಂಡವಾಳ ಮಾಡಿಕೊಂಡು ದುಪ್ಪಟ್ಟು ಹಣ ಮಾಡಿಕೊಳ್ಳಲು ಮುಂದಾಗಿರುವುದು ಪ್ರಾಥಮಿಕ ತನಿಖೆ ವೇಳೆ ಗೋತ್ತಾಗಿದೆ. ಆಕ್ಸಿಜನ್ ಆಕ್ರಮ ದಂಧೆಯ ಹಿಂದೆ ಮತ್ತಷ್ಟು ಆರೋಪಿಗಳಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Girl in a jacket
error: Content is protected !!