ಮಾಜಿ ಕಸರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ; ಆರೀಪಿಗಳ ಸುಳಿವು

Share

ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ಅರೋಪಿಗಳ  ಸುಳಿವುದೊರೆತಿದ್ದು ಯಾವುದೇ ಸಂದರ್ಭದಲ್ಲಿ ಬಂಧಿಸುವ ಸಾಧ್ಯತೆಗಳಿವೆ .

ಬೆಂಗಳೂರು ,ಜೂ, 25:ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರ ಹತ್ಯೆ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹಣಕ್ಕಾಗಿ ಸಂಬಂಧಿಕರಿಂದಲೇ ಈ ಕೊಲೆ ನಡೆದಿರುವ ಬಗ್ಗೆ ಪ್ರಾಥಮಿಕ ತನಿಖೆ ವೇಳೆ ಬಹಿರಂಗವಾಗಿದೆ.

ಆರೋಪಿಗಳ ಬಂಧನಕ್ಕೆ ಬೆಂಗಳೂರು ಪೊಲೀಸರು ತಂಡ ರಚನೆ ಮಾಡಿದ್ದು, ವಿವಿಧ ಆಯಾಮಗಳಲ್ಲಿ ತನಿಖೆಗೆ ಮುಂದಾಗಿದ್ದಾರೆ. ಅಲ್ಲದೆ, ಪ್ರಮುಖ ಆರೋಪಿಗಳಾದ ರೇಖಾರ ಸಂಬಂಧಿ ಪೀಟರ್ ಹಾಗೂ ಸಹಚರರ ಬಗ್ಗೆ ಸುಳಿವು ಸಿಕ್ಕಿದ್ದು, ಯಾವುದೇ ಸಂದರ್ಭದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರೌಡಿಶೀಟರ್ ಪೀಟರ್ ಮತ್ತು ಸೂರ್ಯ ಕೊಲೆ‌ ಮಾಡಲು ಕಾರಣವೇನು..? ಹಣಕಾಸಿನ ವ್ಯವಹಾರ ಮನಸ್ತಾಪವಿತ್ತಾ? ಪೀಟರ್ ಕೆಲಸ ಮಾಡಿಸಿದ್ದ ವಿಚಾರದಲ್ಲಿ ಬಿಲ್ ಆಗಿರಲಿಲ್ಲ. ಬಿಲ್ ಕೊಡಿಸುವಂತೆ ದುಂಬಾಲು ಬಿದ್ದಿದ್ದ ಪೀಟರ್. ರೇಖಾ ಪತಿ ದಿವಂಗತ ಕದಿರೇಶ್ ಗರಡಿಯಲ್ಲೇ ಬೆಳೆದಿದ್ದ ಪೀಟರ್ ಕೊಲೆ ಮಾಡಲು ಕಾರಣವೇನು? ವೈಯಕ್ತಿಕ ವಿಚಾರದಲ್ಲೂ ಜಗಳವಾಗಿತ್ತಾ. ಕೌಟುಂಬಿಕ ಕಲಹವೇ ಕೊಲೆಗೆ ಕಾರಣವೇ? ಕೊಲೆಯ ಮತ್ತೊಬ್ಬ ಆರೋಪಿ ಸ್ಟೀಫನ್ ಎನ್ನಲಾಗಿದೆ. ಸ್ಟೀಫನ್ ಕದಿರೇಶ್ ತಂಗಿಯ ಮಗ ಎನ್ನಲಾಗಿದೆ. ಮಾಜಿ‌ ಕಾರ್ಪೊರೇಟರ್ ಆಗಿದ್ದರು ಹಣಕಾಸಿನ ಸಹಾಯಕ್ಕೆ ಹಿಂದೇಟು. ಮಾವ ಕದಿರೇಶ್ ನಿಂದ ಕಾರ್ಪೋರೇಟರ್ ಆಗಿದ್ರು ರೇಖಾ ಅವರು ಸಂಬಂಧಿಗಳಿಗೆ ಸಹಾಯ ಮಾಡುತ್ತಿರಲಿಲ್ಲ ಅನ್ನೋ ಆರೋಪ. ಇದೇ ಆರೋಪವೇ ಕೊಲೆಗೆ ಕಾರಣವೇ?

ಕೊಲೆಗೆ ರಾಜಕೀಯ ಕಾರಣ ಆಗಿರಬಹುದಾ? ಬಿಬಿಎಂಪಿ ಚುನಾವಣೆಗೆ ಸಜ್ಜಾಗಿದ್ದ ರೇಖಾ ಅವರ ರಾಜಕೀಯವಾಗಿ ಮುಂದುವರೆದ್ರೆ ಕಷ್ಟ ಅನ್ನೋ ಕಾರಣಕ್ಕೆ ಮುಹೂರ್ತವಿಟ್ರಾ..? ಚುನಾವಣೆ ಮೇಲೆ ಕಣ್ಣು ಹಾಕಿದ್ರಾ ಕದಿರೇಶ್ ಅಕ್ಕಾ ಮಾಲಾ? ಮಾಲಾ ವಿರುದ್ಧವೂ ರೌಡಿ ಶೀಟರ್ ತೆರೆಯಲಾಗಿದೆ. ಮಕ್ಕಳಿಗೆ ಅನುಕೂಲವಾಗಲು ಸ್ಕೆಚ್ ಹಾಕಿದ್ರ. ಮುಂದಿನ ಬಿಬಿಎಂಪಿ ಎಲೆಕ್ಷನ್ ಗೆ ಸಜ್ಜಾಗಲು ಕೊಲೆ ಮಾಡಿದ್ರಾ?
ಕೊಲೆ ಆರೋಪಿ ಸೂರ್ಯ ಕಾಟನ್ ಪೇಟೆ ಠಾಣೆಯ ರೌಡಿಶೀಟರ್. ಇತ್ತೀಚೆಗೆ ಸೂರ್ಯನ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ.

ಈ ನಾಲ್ಕು ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈವರೆಗೆ 15 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆಗೆ ಸಹಕಾರಿಯಾಗುವ ಹಳೇಯ ಕ್ರೈಂ ಸಿಬ್ಬಂದಿ ಕೂಡ ಬಳಸಿಕೊಳ್ಳಲಾಗುತ್ತಿದೆ. ಕಾಟನ್ ಪೇಟೆ ಠಾಣೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗುತ್ತಿದೆ. ಸಿಎಂ ಆದೇಶದಂತೆ 24 ಗಂಟೆಯಲ್ಲೇ ಆರೋಪಿಗಳನ್ನು ಹಿಡಿಯಲು ಪ್ಲಾನ್ ಮಾಡಲಾಗಿದೆ ಎಂದು ತಿಳಿದುಬಂದ

ಕೊಲೆ ಮಾಡಿದವರೇ ಜೈಲಿಂದ ರಿಲೀಸ್ ಆದ ಮೇಲೆ ಹೆಂಡತಿ ಕೊಲೆ ಮಾಡಿರುವುದು ಅನುಮಾನವಿದೆ. ಕಮಿಷನರ್ ಜೊತೆಗೆ ಸಿಎಂ ಮಾತನಾಡಿ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದಾರೆ. ಘಟನೆ ಹಿಂದೆ ಯಾರ ಯಾರ ಕೈವಾಡ ಇದೆ ಅವರ ವಿರುದ್ದ ಕ್ರಮ ಆಗಬೇಕು ಎಂದು ಸಿಎಂ ಸೂಚಿಸಿದ್ದಾರ

ಮೃತದೇಹ ಹಸ್ತಾಂತರ;

ಈ ನಡುವೆ ರೇಖಾ ಕದಿರೇಶ್ ಅವರ ಮರಣೋತ್ತರ ಪರೀಕ್ಷೆ ಹಾಗೂ ಕೋವಿಡ್ ಪರೀಕ್ಷೆಯನ್ನು ಇಂದು ಬೆಳಗ್ಗೆ 9 ಗಂಟೆಗೆ ವೈದ್ಯರ ನಡೆಸಲಿದ್ದು, ಬೆಳಗ್ಗೆ 10 ಗಂಟೆ ವೇಳೆಗೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಿಪೋರ್ಟ್ ಬಂದ‌ ಬಳಿಕ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಶುರುವಾಗಲಿದೆ. ನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Girl in a jacket
error: Content is protected !!