ಬೇಡರಕಣ್ಣಪ್ಪ ಯಶಸ್ಸಿನ ನಂತರರಾಜಕುಮಾರ್‌ಅಭಿನಯದಕಪ್ಪು-ಬಿಳುಪು ಜಾನಪದಕಥಾ ಹಂದರದಚಿತ್ರಸೋದರಿವಿಶ್ವಕಲಾಚಿತ್ರ ಲಾಂಛನದಲ್ಲಿ೧೯೫೫ರಲ್ಲಿ ತೆರೆಗೆ ಬಂದಿತು.ಟಿ.ವಿ.ಸಿಂಗ್ ಠಾಕೂರ್ ಮತ್ತುಜಿ.ಎನ್.ವಿಶ್ವನಾಥಶೆಟ್ಟಿಚಿತ್ರವನ್ನು ನಿರ್ಮಾಣ ಮಾಡಿದರೆ, ನಿರ್ಮಾಪರಲ್ಲಿಒಬ್ಬರಾಗಿದ್ದಟಿ.ವಿ.ಸಿಂಗ್ ಠಾಕೂರ್‌ಚಿತ್ರವನ್ನು ನಿರ್ದೇಶಿಸಿದರು. ಜಿ.ವಿ.ಅಯ್ಯರ್ ಸಹಾಯಕ ನಿರ್ದೇಶಕರಾಗಿಕಾರ್ಯನಿರ್ವಹಿಸುವುದರೊಂದಿಗೆ ಸಂಭಾಷಣೆ, ಗೀತೆಗಳನ್ನು ರಚಿಸುವ ಮೂಲಕ ಕನ್ನಡಚಿತ್ರರಂಗ ಪ್ರವೇಶಿಸಿದರು. ತಮಿಳಿನ ಜನಪದರಲ್ಲಿ ಇಂದಿಗೂ ಮನಮಿಡಿಯುವಕಥಾನಕವಾಗಿ ಉಳಿದಿರುವ ‘ನಲ್ಲ ತಂಗಾಳ್’ ಎಂಬ ಸಾದ್ವಿಯ ಕಥೆಯನ್ನಾಧರಿಸಿ ’ಸೋದರಿ’ ಚಿತ್ರಕಥೆಯನ್ನುಅಯ್ಯರ್ ರಚಿಸಿದರು. ರಾಜಕುಮಾರ್, ಪಂಢರಿಬಾಯಿ, ರಾಘವೇಂದ್ರರಾವ್, ಜಯಶ್ರೀ, ನರಸಿಂಹರಾಜು, ಎಂ.ಎನ್.ಲಕ್ಷ್ಮೀದೇವಿ,ಜಿ.ವಿ.ಅಯ್ಯರ್,ಇಂದಿರಾಆಚಾರ್ಯಬೇಬಿ ಪ್ರಮೀಳಾ, ಉಜ್ವಲ ಅಭಿನಯಿಸಿದರು. ಮೈನಾವತಿ ಭರತನಾಟ್ಯ ಪ್ರದರ್ಶನ ನೀಡಿದದೃಶ್ಯ ಅಳವಡಿಸಲಾಗಿತ್ತು. ಸಾಹಿತ್ಯರಚನೆಯಲ್ಲಿ ಜಿ.ವಿ.ಅಯ್ಯರ್‌ಅವರೊಂದಿಗೆ
ಹುಣಸೂರುಕೃಷ್ಣಮೂರ್ತಿಅವರೂತೊಡಗಿಕೊಂಡಿದ್ದರು. ಪದ್ಮನಾಭಶಾಸ್ತ್ರಿಅವರೊಂದಿಗೆ ಸಂಗೀತ ನಿರ್ದೇಶಿಸುವ ಮೂಲಕ ಜಿ.ಕೆ.ವೆಂಕಟೇಶ್ ಮೊದಲ ಬಾರಿಗೆ ಸಂಗೀತ ನಿರ್ದೇಶನ ನೀಡಿದರು.ಪಿ.ಲೀಲಾ, ಭಗವತಿ, ಎ.ಎಂ. ರಾಜಾ, ಸುಶೀಲ,ಸೌಮಿತ್ರಿ, ಪಿ. ನಾಗೇಶ್ವರರಾವ್ ಹಿನ್ನೆಲೆಗಾಯನ ನೀಡಿದರು.೧೦ ಹಾಡುಗಳುನ್ನು ಅಳವಡಿಸಲಾಗಿತ್ತು.ದೊರೆ-ಭಗವಾನ್‌ಖ್ಯಾತಿಯದೊರೈರಾಜ್‌ಛಾಯಾಗ್ರಹಣನೀಡಿದ ಮೊದಲ ಚಿತ್ರವೂ ಸೋದರಿ. ಎನ್.ಸಿ.ರಾಜನ್ ಸಂಕಲನ, ರಾಯ್‌ಚೌಧರಿ ನೃತ್ಯ ಸಂಯೋಜನೆಯನ್ನುಚಿತ್ರ ಒಳಗೊಂಡಿತ್ತು. ೧೯೫೫ರ ಮೇ ೧೬ರಂದು ಚಿತ್ರ ಸೆನ್ಸಾರ್‌ಆಗಿದ್ದು, ೧೪,೪೮೯ ಅಡಿಉದ್ದವಿತ್ತು.ಮದರಾಸಿನ ರೋಹಿಣಿ, ಫಿಲಂಸೆಂಟರ್ ಹಾಗೂ ರೇವತಿ ಸ್ಟುಡಿಯೊಗಳಲ್ಲಿ ಚಿತ್ರಚಿತ್ರೀಕರಣಗೊಂಡಿತು.
ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾಗಿದ್ದ ಜಿ.ಎನ್.ವಿಶ್ವನಾಥಶೆಟ್ಟಿ ಮಹಾತ್ಮ ಸಂಸ್ಥೆಯ ಪಾಲುದಾರಿಕೆಯಿಂದ ಹೊರಬಂದುತಮ್ಮದೇಆದ ವಿಶ್ವಕಲಾಚಿತ್ರ ಸಂಸ್ಥೆಯನ್ನು ಪ್ರಾರಂಭಿಸಿ, ಆ ಮೂಲಕ ಮೊದಲ ಚಿತ್ರವಾಗಿ’ಸೋದರಿ’ ಚಿತ್ರ ತಯಾರಿಸಿದರು. ವಿಶ್ವಕಲಾ ಸಂಸ್ಥೆ ಸತತವಾಗಿ ನಾಲ್ಕು ಚಿತ್ರಗಳನ್ನು ತಯಾರಿಸಿತು.ಈಸಂಸ್ಥೆಯಎಲ್ಲ ಚಿತ್ರಗಳಲ್ಲಿರಾಜಕುಮಾರ್, ಅಭಿನಯಿಸಿದ್ದರು.ಚಿತ್ರ ಬೆಂಗಳೂರಿನ ಶಿವಾಜಿ ಚಿತ್ರಮಂದಿರದಲ್ಲಿಬಿಡುಗಡೆಯಾದಾಗರಾಜಕುಮಾರ್ ಸಿನಿಮಾ ನೋಡಲು ಆ ಚಿತ್ರಮಂದಿರಕ್ಕೆ ಹೋಗಿದ್ದರು. ಆ ಸಂದರ್ಭವನ್ನುರಾಜಕುಮಾರ್ ಹೀಗೆ ನೆನನಪಿಸಿಕೊಂಡಿದ್ದಾರೆ: “ಜನರು ನನ್ನನ್ನುಚೇಡಿಸುತ್ತಾರೇನೋಎನ್ನುವಆತಂಕವಿತ್ತು. ಆದರೆ, ಅಭಿಮಾನಿಗಳು ಚಪ್ಪಾಳೆ ತಟ್ಟಿ, ಪ್ರೋತ್ಸಾಹಿಸಿದ್ದನ್ನು ಕಂಡು ನನಗೆ ಧೈರ್ಯ ಬಂದಿತು“.
ಹೇಮಾವತಿ ಎಂಬ ರಾಜಕುಮಾರಿದೇವಗಿರಿಯ ಭೂಪಾಲನನ್ನು ವಿವಾಹವಾಗುತ್ತಾಳೆ. ರಾಜ್ಯದಲ್ಲಿಕ್ಷಾಮತಲೆದೋರಿ ಹೇಮಾವತಿತವರು ಸೇರುತ್ತಾಳೆ. ಅಲ್ಲಿ ಶಶಿಧರ ಯುದ್ಧದಕಾರಣ ಬಹುಕಾಲ ದೂರ ಹೋದಾಗ ಅವನ ಹೆಂಡತಿಯು ಹೇಮಾವತಿಗೆ ನಾನಾ Pಷ್ಟಗಳನ್ನು ಕೊಡುತ್ತಾಳೆ.ಅಣ್ಣ ಶಶಿಧರ ಯುದ್ಧದಿಂದ ಬಂದ ನಂತರತಂಗಿಯನ್ನು ಉಳಿಸಿಕೊಂಡು ಹೆಂಡತಿಗೆ ಶಿಕ್ಷೆ ಕೊಡುತ್ತಾನೆ.ದೇವಗಿರಿಯ ಭೂಪಾಲನ ಪಾತ್ರದಲ್ಲಿರಾಜಕುಮಾರ್‌ಅಭಿನಯವಿದೆ.ಇದುಚಿತ್ರದಕಥೆ.
ಟಿ.ವಿ. ಸಿಂಗ್ ಠಾಕೂರ್:ಕನ್ನಡದ ಮೊದಲ ಕಾದಂಬರಿ ಆಧರಿಸಿದ ಕೃಷ್ಣ್ಣಮೂರ್ತಿಪುರಾಣಿಕರ‘ಧರ್ಮದೇವತೆ’ ಆಧಾರಿತ‘ಕರುಣೆಯೇಕುಟುಂಬದಕಣ್ಣು’ ಚಿತ್ರದನಿರ್ದೇಶಕರು ಎಂಬ ಹೆಗ್ಗಳಿಕೆಯನ್ನು ಹೊಂದಿರುವಟಿ.ವಿ.ಸಿಂಗ್ ಠಾಕೂರ್೧೯೧೧ರಲ್ಲಿ ಜನಿಸಿದರು.ಮೂಲ ಹೆಸರು ವಿಠಲ್ ಸಿಂಗ್ ಎಂದಾದ ಇವರುಮಹಾತ್ಮ ಪಿಕ್ಚಸ್‌ನ ಡಿ.ಶಂಕರ್ ಸಿಂಗ್ ಅವರ ಬಂಧು.ಛಾಯಾಗ್ರಹಣದಲ್ಲಿ ಪಡೆದಿದ್ದಅನುಭವ ನಿರ್ದೆಶನದಲ್ಲಿಸಹಾಯವಾಯಿತು. ನಿರ್ದೇಶನದಪ್ರಥಮಚಿತ್ರ “ಸೋದರಿ’. ಹಲವಾರುಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿದರು.ಕನ್ನಡದಲ್ಲಿ ೨೭ ಚಲನಚಿತ್ರಗಳನ್ನು ನಿರ್ದೇಶನ ಮಾಡಿದರು.ಇವರಎಲ್ಲ ಚಿತ್ರಗಳಿಗೂ ಸಹನಿರ್ದೇಶನ, ಸಾಹಿತ್ಯ ನಿರ್ವಹಿಸಿದವರು ಜಿ.ವಿ.ಅಯ್ಯರ್. ಹರಿಭಕ್ತ’, ’ಓಹಿಲೇಶ್ವರ’, ಜಗಜ್ಯೋತಿ ಬಸವೇಶ್ವರ’ , ರಾಷ್ಟ್ರಪತಿಗಳ ಬೆಳ್ಳಿಪದಕ ಪಡೆದ’ಚಂದವಳ್ಳಿಯ ತೋಟ’, ’ಮಂತ್ರಾಲಯ ಮಹಾತ್ಮೆ’ಹೇಮರಡ್ಡಿ ಮಲ್ಲಮ್ಮ’ ಭಾರತದರತ್ನ’, ಕೈವಾರ ಮಹಾತ್ಮೆ’, ’ಕುಲವಧು’, ಕಲಾವತಿ’, ’ಹೂಬಿಸಿಲು’, ’ಕವಲೆರಡು ಕುಲವೊಂದು’, ’ಕಣ್ತೆರದು ನೋಡು‘ ಮುಂತಾದ ಮಹತ್ತರ ಚಿತ್ರಗಳನ್ನು ಸಿಂಗ್ ಠಾಕೂರ್ ನಿರ್ದೇಶಿಸಿದರು. ೧೯೯೫ರಲ್ಲಿ ಮದರಾಸಿನಲ್ಲಿ ನಿಧನರಾದರು.