ಕನ್ನಡ ಚಿತ್ರರಂಗದ ನಟರು,ನಿರ್ದೇಶಕರು ನಿರ್ಮಾಪಕರು ಹೀಗೆ ಹಲವಾರು ಮಂದಿ ಹಸಿದವರಿಗೆ ಹಾಗೂ ಚಿತ್ರರಂಗದ ಕಾರ್ಮಿಕರಿಗೆ ನೆರವಾಗುತ್ತಿದ್ದಾರೆ. ಈಗಾಗಲೇ ಹಿರಿಯನಟಿ ಲೀಲಾವತಿ,ಉಪೇಂದ್ರ ಸೇರಿದಂತೆ ಹಲವರು ಹಸಿದವರಿಗೆ ಸಹಾಯ ಹಸ್ತ ಚಾಚಿದ್ದಾರೆ .
ಈಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿಮಾನಿಗಳು ಕಷ್ಟದಲ್ಲಿರುವವರ ಸಹಾಯಕ್ಕೆ ಮುಂದಾಗಿದ್ದಾರೆ .ನಾಗಾವಾರದ ಸುತ್ತಮುತ್ತಲಿರುವ ಪ್ರದೇಶದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ‘ಆಸರೆ’ ಯಾಗಿದ್ದಾರೆ
ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗೂ ಶಿವಣ್ಣ ಬಾಯ್ಸ್ ಸೇರಿಕೊಂಡು ನಾಗವಾರ ಏರಿಯಾದಲ್ಲಿ ಪ್ರತಿನಿತ್ಯ ೫೦೦ ಜನರಿಗೆ ಊಟ, ತಿಂಡಿ, ಹಾಗೂ ಟೀ ವ್ಯವಸ್ಥೆಯನ್ನ ಮಾಡಿದ್ದಾರೆ. ಈ ಕೆಲಸಕ್ಕಾಗಿ ಶಿವಣ್ಣ ಬೊಲೆರೊ ಕ್ಯಾಂಟ್ರೋನ ಆರೇಂಜ್ ಮಾಡಿದ್ದು, ಈ ವಾಹನದಲ್ಲೇ ಊಟ ತಿಂಡಿ ಸರಬರಾಜು ಆಗುತ್ತಿದೆ.
“ಆಸರೆ” ಹಸಿದ ಹೊಟ್ಟೆಗೆ ಕೈ ತುತ್ತು ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ, ಸದ್ಯ ೧೦ ದಿನದವರೆಗೂ ಮುಂದುವರೆಯಲಿದೆ. ಲಾಕ್ ಡೌನ್ ಹೀಗೆ ಮುಂದುವರೆದಲ್ಲಿ ಸುಮಾರು ೧೦೦೦ ಜನಕ್ಕೆ ಪ್ರತಿ ದಿನ ಅನ್ನ ದಾಸೋಹ ಮಾಡುವುದಕ್ಕೆ ಶಿವಣ್ಣ, ಗೀತಾ ಶಿವಣ್ಣ ಹಾಗೂ ಶಿವಣ್ಣ ಬಾಯ್ಸ್ ಯೋಜನೆ ರೂಪಿಸಿಕೊಂಡಿದ್ದಾರೆ.
ಇನ್ನು ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ವತಿಯಿಂದ ಕಿಚ್ಚನ ಕೈ ತುತ್ತು ಎಂಬ ಯೋಜನೆ ಚಾಲ್ತಿಯಲ್ಲಿದೆ. ಉಪೇಂದ್ರ ಅವರು ಖುದ್ದು ದೇಣಿಗೆ ಸಂಗ್ರಹಿಸಿ ಜನರಿಗೆ ಅಗತ್ಯ ದಿನಸಿ ಹಂಚುತ್ತಿದ್ದಾರೆ. ಭುವನ್ ಪೊನ್ನಣ್ಣ, ಹರ್ಷಿಕಾ ಉಚಿತ ಆಕ್ಸಿಜನ್ ಹಾಗೂ ಆಟೋ ವ್ಯವಸ್ಥೆ ಮಾಡಿದ್ದಾರೆ.