ಶ್ರೀ ಶೈಲ ಮಹಾತ್ಮೆಯಲ್ಲಿಬಾಲನಟಿಯಾಗಿಜಯಲಲಿತ ಮಾಯಾಮಂತ್ರಗಳ ಚಿತ್ರಆಶಾಸುಂದರಿ

Share


ಶ್ರೀ ಶೈಲ ಮಹಾತ್ಮೆಯಲ್ಲಿಬಾಲನಟಿಯಾಗಿಜಯಲಲಿತ
ಮಾಯಾಮಂತ್ರಗಳ ಚಿತ್ರಆಶಾಸುಂದರಿ

ಶ್ರೀಶೈಲ ಮಹಾತ್ಮೆಚಿತ್ರದಲ್ಲಿ ಪಾತ್ರವೊಂದನ್ನು ಮಾಡಿದ್ದ ನಟಿ ಸಂಧ್ಯಾ ಮದರಾಸಿನ ಸ್ಟುಡಿಯೊದಲ್ಲಿಚಿತ್ರೀಕರಣ ನಡೆಯುತ್ತಿದ್ದ ವೇಳೆ ತಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದರು. ಬೆಂಗಳೂರಿನ ಕಾನ್ವೆಂಟ್‌ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ಬಾಲೆ ಚಿತ್ರೀಕರಣವನ್ನುಕುತೂಹಲದಿಂದ ನೋಡುತ್ತಾ ಕುಳಿತಿದ್ದಳು.ಬಾಲನಟಿಯಾಗಿನೃತ್ಯದ ಪಾತ್ರ ನಿರ್ವಹಿಸಬೇಕಾಗಿದ್ದ ಶಾಲಾ ಬಾಲಕಿಯೊಬ್ಬಳು ಅಂದಿನ ಚಿತ್ರೀಕರಣಕ್ಕೆಗೈರುಹಾಜರಾಗಿದ್ದುಚಿತ್ರದ ನಿರ್ಮಾಪರು ಹಾಗೂ ನಿರ್ದೇಶಕರಲ್ಲಿ ತಳಮಳ ತಂದಿತ್ತು. ನಿರ್ದೇಶಕಆರೂರು ಪಟ್ಟಾಭಿಯವರಕಣ್ಣಿಗೆಚಿತ್ರೀಕರಣ ವೀಕ್ಷಿಸುತ್ತಿದ್ದ ಬಾಲಕಿ ಕಾಣಿಸಿದಳು. ತಾಯಿ ಸಂಧ್ಯಾಅವರೊಂದಿಗೆ ಮಾತನಾಡಿ ಪಾತ್ರ ನಿರ್ವಹಿಸಲು ಸಮ್ಮತಿ ಪಡೆದು, ಬಣ್ಣ ಹಚ್ಚಿಸಿದರು. ಆ ಬಾಲಕಿ ಮುಂದೆ ಬಹು ದೊಡ್ಡತಾರೆಯಾಗಿ, ರಾಜಕಾರಣಿಯಾಗಬಹುದೆಂಬ ನಿರೀಕ್ಷೆಅಂದುಯಾರಿಗೂಇರಲಿಲ್ಲ.ಮುಂದೆತಮಿಳುನಾಡು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ಜನಪ್ರಿಯತಾರೆಜಯಲಲಿತಾ ಬಾಲನಟಿಯಾಗಿಚಿತ್ರರಂಗ ಪ್ರವೇಶಿಸಿದ ಈ ಕಪ್ಪುಬಿಳುಪು ಪೌರಾಣಿಕಚಿತ್ರ ಶ್ರೀ ಶೈಲ ಮಹಾತ್ಮೆ ೧೯೬೧ರಲ್ಲಿ ಶ್ರೀಶೈಲ ಪಿಕ್ಚರ್ಸ್ ಲಾಂಛನದಲ್ಲಿತೆರೆಕಂಡಿತು.ಎನ್.ತಾಳಿಕೇರಪ್ಪ ನಿರ್ಮಾಣದಚಿತ್ರವನ್ನುಆರೂರು ಪಟ್ಟಾಭಿ ನಿರ್ದೇಶಿಸಿದರು.

ರಾಜಕುಮಾರ್, ಡಿಕ್ಕಿಮಾಧವರಾವ್, ಅನಿಲ್‌ಕುಮಾರ್, ಬಾಲಕೃಷ್ಣ, ಹನುಮಂತಾಚಾರ್, ಗೋಪಾಲಕೃಷ್ಣ,ಮಹಾಲಿಂಗಭಾಗವತರ್, ಕೃಷ್ಣ್ಣಕುಮಾರಿ, ಸಂಧ್ಯಾ, ಶೇಷಕುಮಾರಿ, ಲಕ್ಷ್ಮೀದೇವಿ, ಶಾಂತಾ, ಪಾಪಮ್ಮ, ರಾಜಲಕ್ಷ್ಮಿ ಅಭಿನಯಿಸಿದರು.ಆರೂರು ಪಟ್ಟಾಭಿಚಿತ್ರಕಥೆ ರಚಿಸಿದ್ದು, ಸೋರಟ್‌ಅಶ್ವತ್ ಸಂಭಾಷಣೆ ರಚಿಸಿದರು. ನಟ ಟಿ.ಎನ್.ಬಾಲಕೃಷ್ಣ ಹಾಸ್ಯ ಸಂಭಾಷಣೆ ಜೊಡಿಸಿಕೊಟ್ಟಿದ್ದರು. ಹುಣಸೂರುಕಷ್ಣಮೂರ್ತಿ, ವಿಜಯನಾರಸಿಂಹ, ರತ್ನಾಕರ್, ಸೋರಟ್‌ಅಶ್ವತ್, ಎಂ.ನರೇಂದ್ರಬಾಬು ಗೀತೆಗಳನ್ನು ರಚಿಸಿದರು. ಪಿ.ಬಿ.ಶ್ರೀನಿವಾಸ್, ಮಂಗಪತಿ, ಸಿ.ಎಸ್. ಸರೋಜಿನಿ, ಟಿ.ಎಸ್.ಭಗವತಿ, ಗಜಲಕ್ಷ್ಮಿ, ರುಕ್ಷ್ಮಿಣಿ ಹಾಡುಗಳನ್ನು ಹಾಡಿದರು.ಟಿ.ಎ.ಕಲ್ಯಾಣಂ ಸಂಗೀತ ನಿಡಿದಚಿತ್ರದಲ್ಲಿ ೧೪ ಹಾಡುಗಳನ್ನು ಅಳವಡಿಸಲಾಗಿತ್ತು.ಮದರಾಸಿನ ವಿಜಯ ವಾಹಿನಿ, ಭರಣಿ, ಗೋಲ್ಡನ್ ಹಾಗೂ ಮೆಜೆಸ್ಟಿಕ್ ಸ್ಟುಡಿಯೊಗಳಲ್ಲಿ ಚಿತ್ರೀಕರಣ ನಡೆಯಿತು.ದೂರ್ವಾಸರಿಂದ ಶಪಿಸಲ್ಪಟ್ಟ ಪಾರ್ವತಿ, ಯಕ್ಷಕನೆಯೊಬ್ಬಳಿಂದ ಶಪಿಸಲ್ಪಟ್ಟ ಋಷಿಪುತ್ರಇಬ್ಬರೂ ಭೂಲೋಕದಲ್ಲಿ ಜನಿಸುವರು.ಪಾರ್ವತಿ ಭೂಮಿಯಲ್ಲಿಯಕ್ಷಕನ್ಯೆಯಿಂದ ಶಪಿಸಲ್ಪಟ್ಟ ವ್ಯಕ್ತಿಯ ಸಾಕುಮಗಳಾಗಿ ಆತನ ಪಟ್ಟದ ರಾಣಿಯಾಗುವಳು.ಯುದ್ಧದಿಂದ ಹಿಂತಿರುಗಿದರಾಜತನ್ನ ಸಾಕುಮಗಳನ್ನೇ ಮದುವೆಯಾಗಲು ಹಠ ಹಿಡಿಯುವನು.ಆಕೆ ರಾಜ್ಯ ಪರಿತ್ಯಾಗ ಮಾಡಿ ಶ್ರೀಶೈಲಕ್ಕೆ ತೆರಳಿ ತಪೋಮಗ್ನಳಾಗಿ ಶಿವನನ್ನು ಹೊಂದುವಳು.

ಮಾಯಾಮಂತ್ರಗಳ ಚಿತ್ರಆಶಾಸುಂದರಿ
ಗೌರಿ ಪ್ರೊಡಕ್ಷನ್ಸ್ ಲಾಂಛನದಲ್ಲಿಎಸ್.ಭಾವನಾರಾಯಣ ನಿರ್ಮಾಣ ಮಾಡಿ, ಹುಣಸೂರುಕಷ್ಣೃಮೂರ್ತಿ ನಿರ್ದೇಶನ ಮಾಡಿದಜಾನಪದಕಥಾಹಂದರದಕಪ್ಪು-ಬಿಳುಪು ಚಿತ್ರಆಶಾಸುಂದರಿ೧೯೬೦ರಲ್ಲಿ ತೆರೆಕಂಡಿತು.ಕೆ.ಎಸ್.ಆರ್.ದಾಸ್, ಸಿ.ವಿ.ಶಿವಶಂಕರ್, ಎ.ಬಿ.ಜಗಮೋಹನರಾವ್ ಹಾಗೂ ಎಸ್.ಸುಬ್ಬರಾಯನ್ ಸಹಾಯಕ ನಿರ್ದೇಶಕರಾಗಿಕಾರ್ಯನಿರ್ವಹಿಸಿದರು. ರಾಜಕುಮಾರ್, ಕೃಷ್ಣಕುಮಾರಿ, ಹರಿಣಿ, ನರಸಿಂಹರಾಜು, ಸಿ.ವಿ.ಶಿವಶಂಕರ್, ರಾಜನಾಲ, ರಾಮಚಂದ್ರಶಾಸ್ತ್ರಿ, ದೇವಿ, ರಾಜಶ್ರೀ, ಕಾಂತಾರಾವ್, ಹನುಮಂತರಾವ್, ಹೇಮಲತಾ ಅಭಿನಯಿಸಿದರು.

ಎಸ್.ಭಾವನಾರಾಯಣಕಥೆ ರಚಿಸಿದ್ದು, ಹುಣಸೂರುಕಷ್ಣೃಮೂರ್ತಿಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದರು. ಸುಸರ‍್ಲದಕ್ಷಿಣಾಮೂರ್ತಿಚಿತ್ರಕ್ಕೆ ಸಂಗೀತ ನೀಡಿದ್ದು, ಚಿತ್ರದಲ್ಲಿ ಅಳವಡಿಸಲಾಗಿದ್ದ ೧೦ ಹಾಡುಗಳನ್ನು ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ, ಎಸ್.ಜಾನಕಿ, ವರಲಕ್ಷ್ಮಿ, ಘಂಟಸಾಲ ಹಾಡಿದರು. ಚಿತ್ರ ಮದರಾಸಿನ ವಿಜಯವಾಹಿನಿ ಸ್ಟುಡಿಯೊದಲ್ಲಿಚಿತ್ರೀಕರಣಗೊಂಡಿತು. ಜಾನಪದ ಶೈಲಿಯ ಈ ಕಥಾನಕದಲ್ಲಿ ಮಾಯಾ ಮಂತ್ರಗಳನ್ನು ಹೇರಳವಾಗಿ ಬಳಸಿಕೊಳ್ಳಲಾಗಿದೆ. ತರುಣಿಯರಿಬ್ಬರ ಪ್ರೇಮಅಸಹಜವೆಂಬ ಟೀಕೆ ಬಂತು. ಬೆಂಗಳೂರಿನ ಕೆಂಪೇಗೌಡ ಹಾಗೂ ಇನ್ನಿತರ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೊಂಡಿತು.

ಭಾವನಾರಾಯಣ: ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿದ ಪ್ರಮುಖ ನಿರ್ಮಾಪಕರು. ೧೯೧೧ರಲ್ಲಿ ಜನಿಸಿದ ಇವರುಕನ್ನಡದಲ್ಲಿದೇವರಗೆದ್ದ ಮಗ, ಸಿಂಹಸ್ವಪ್ನ, ಗಾಂಧಿನಗರ, ಬೆಂಗಳೂರು ಮೆಯಿಲ್, ಜಗಮೆಚ್ಚಿದ ಮಗ, ಐ ಲವ್ ಯೂ, ಕುಲಪುತ್ರ ಚಿತ್ರಗಳನ್ನು ನಿರ್ಮಿಸಿದರು.ತಮ್ಮ ನಿರ್ಮಾಣದ ಹಲವಾರುಕನ್ನಡ ಹಾಗೂ ತೆಲುಗು ಚಿತ್ರಗಳಗೆ ಕಥೆ ಹಾಗೂ ಚಿತ್ರಕಥೆ ರಚಿಸಿದ್ದರು.

ಸೂಸರ್ಲದಕ್ಷಿಣಾಮೂರ್ತಿ ಶಾಸ್ತ್ರಿ: ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ ಸೂಸರ್ಲದಕ್ಷಿಣಾಮೂರ್ತಿ ಶಾಸ್ತ್ರಿ ೧೯೨೧ರ ನವೆಂಬರ್ ೧೧ರಂದು ಆಂದ್ರಪ್ರದೇಶದಲ್ಲಿ ಜನಿಸಿದರು. ಹಿನ್ನಲೆಗಾಯಕರೂಆಗಿದ್ದಇವರು, ಶಾಸ್ತ್ರೀಯ ಸಂಗೀತ ಹಾಗೂ ವಾದ್ಯಗಾರರಾಗಿಯೂ ಪ್ರಖ್ಯಾತರಾಗಿದ್ದರು.ದಕ್ಷಿಣಭಾರತೀಯ ಚಿತ್ರಗಳಿಗೆ ಮಾತ್ರವಲ್ಲದೆ, ಹಿಂದಿ, ಸಿಂಹಳಿ ಭಾಷೆಯ ಚಿತ್ರಗಳಿಗೂ ಕಾರ್ಯನಿರ್ವಹಿಸಿದರು.೨೧೦೨ರ ಫೆಬ್ರವರಿ ೯ರಂದು ಚೆನ್ನೈನಲ್ಲಿ ನಿಧನರಾದರು.

 

Girl in a jacket
error: Content is protected !!