ಶಿವಣ್ಣಗೆ ೫೯ನೇ ಜನ್ಮದಿನದ ಸಂಭ್ರಮ

Share

ಕನ್ನಡ ಚಿತ್ರರಂಗದ ಅತ್ಯಂತ ಬಿಜಿ ನಟ ಎಂದರೆ ಅದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ,ಅವರ ಎನರ್ಜಿ ಇನ್ನೂ ಯುವಕರಂತೆಯೇ ಇದೆ ಅವರ ಚಿತ್ರಗಳಲ್ಲಿ ಅವರ ಲವಲವಿಕೆ ನೋಡಿದರೆ ಹಾಗೆ ಅನಿಸದೆ ಇರಲಾರದು ಸದಾ ನಗು ನಗುತ್ತಲೇ ಇರುವ ಅವರಿಗೆ ಇಂದು ೫೯ ನೇ ಜನ್ಮದಿನದ ವಿಶೇಷ.
ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಅವರು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ ಅಭಿಮಾನಿಗಳಿಗೂ ಕೂಡ ಯಾರು ಮನೆ ಮುಂದೆ ಬರಬೇಡಿ ನಾನು ಇರುವುದಿಲ್ಲ ಎಂದು ಹೇಳಿದ್ದಾರೆ ಅಲ್ಲದೆ. ಎಲ್ಲರಿಗೂ ಅವರ ಆರೋಗ್ಯ ಮುಖ್ಯ ಹಾಗಾಗಿ ಇಂತಹ ಸಂಕಷ್ಟದ ಸಂದರ್ಭದಲ್ಲಿ ಬರುವ ಸಾಹಸಕ್ಕೆ ಕೈ ಹಾಕಬೇಡಿ ನೀವಿಲ್ಲಿದ್ದಿರೋ ಅಲ್ಲಿಯೇ ಶುಭ ಹಾರೈಸಿ ಎಂದಿದ್ದಾರೆ ಹೀಗಾಗಿ ಅವರ ಅದ್ಧೂರಿ ಹುಟ್ಟು ಹಬ್ಬದ ಆಚರಣೆ ಈ ಬಾರಿ ಇಲ್ಲ.


ಒಂದು ರೀತಿ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಆಕ್ಷಿವ್ ಆಗಿದ್ದಾರೆ ಹಲವಾರು ಚಿತ್ರಗಳು ಅವರ ಕೈಯಲ್ಲಿವೆ ಅವರ ಎನರ್ಜಿ ಇನ್ನೂ ಯುವಕರನ್ನೂ ನಾಚಿಸುವಂತಿದೆ ಎಂದರೆ ಅತಿಶಯೋಕ್ತಿಯಾಗಲಾರದು,ಸದ್ಯ ಈ ವಿಶೇಷ ದಿನದಂದು ಶಿವರಾಜ್ ಕುಮಾರ್ರವರಿಗೆ ಗಣ್ಯಾತಿ ಗಣ್ಯರು ಸೋಶಿಯಲ್ ಮೀಡಿಯಾದ ಮೂಲಕ ವಿಶ್ ಮಾಡುತ್ತಿದ್ದಾರೆ. ಅಲ್ಲದೇ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ವಿಜಯ್ ಮಿಲ್ಟನ್ ನಿರ್ದೇಶನ ಮಾಡಲಿರುವ ೧೨೩ನೇ ಸಿನಿಮಾದ ಹೆಸರು ಘೋಷಣೆ ಆಗಲಿದೆ. ಜೊತೆಗೆ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಶಿವರಾಜ್ ಕುಮಾರ್ ಕಾಂಬೀನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾದ ಟೈಟಲ್ ಕೂಡ ಲಾಂಚ್ ಆಗಲಿದೆ.
ಸದ್ಯ ನೃತ್ಯ ನಿರ್ದೇಶಕ ಭಜರಂಗಿ-೨ ಸಿನಿಮಾದಲ್ಲಿ ಶಿವರಾಜ್ ಕುಮಾರ್‌ಬ್ಯೂಸಿಯಾಗಿದ್ದು, ನಂತರ ಹಲವಾರು ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳು ಶಿವಣ್ಣ ಕೈನಲ್ಲಿದೆ. ಇಲ್ಲಿಯವರೆಗೂ ೧೨೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶಿವರಾಜ್ ಕುಮಾರ್‌ರವರು ಅಭಿನಯಿಸಿದ್ದಾರೆ.

ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ರವರು ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ದೇವರ ದಯೆಯಿಂದ ಕೊರೊನಾ ಕಡಿಮೆಯಾಗಿದೆ. ಹಾಗಂತ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಇನ್ನೂ ಮುಗಿದಿಲ್ಲ. ಮುಂದೆ ಇನ್ನೂ ಎಚ್ಚರಿಕೆಯಿಂದ ಇರಬೇಕಾಗಿದೆ. ನಿಮಗೆಲ್ಲರಿಗೂ ಗೊತ್ತಿರುವಂತೆ ಜುಲೈ ೧೨ ರಂದು ನನ್ನ ಹುಟ್ಟಿದ ದಿನ. ಕಾರಣಾಂತರಗಳಿಂದ ನಾನು ಬೆಂಗಳೂರಿನಲ್ಲಿ ಇರಲ್ಲ. ದಯವಿಟ್ಟು ಯಾರೂ ಬೇಜಾರು ಮಾಡಿಕೊಳ್ಳಬೇಡಿ. ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಮಾಡಲ್ಲ. ಹೀಗಾಗಿ ಯಾರೂ ಕೂಡ ಮನೆ ಬಳಿ ಬರಬೇಡಿ ಎಂದು ಮನವಿ ಮಾಡಿದ್ದರು.

Girl in a jacket
error: Content is protected !!