ರಾಜಕುಮಾರ್‌ಅರ್ಜುನನಾಗಿ ಅಭಿನಯಿಸಿದ ನಾಗಾರ್ಜುನ

Share

ರಾಜಕುಮಾರ್‌ಅರ್ಜುನನಾಗಿ ಅಭಿನಯಿಸಿದ ನಾಗಾರ್ಜುನ

ಮಹಾಭಾರತದ ಪ್ರಸಂಗವೊಂದನ್ನು ಆಧರಿಸಿದ, ರಾಜಕುಮಾರ್‌ಅರ್ಜುನನಾಗಿ ಅಭಿನಯಿಸಿದ ಕಪ್ಪುಬಿಳುಪು ಪೌರಾಣಿಕಚಿತ್ರನಾಗಾರ್ಜುನ ನಂದಿ ಪಿಕ್ಚsರ್ಸ್ ಲಾಂಛನದಲ್ಲಿ ೧೯೬೧ರಲ್ಲಿ ತೆರೆಗೆ ಬಂದಿತು. ಕೆ.ಎನ್.ಮಲ್ಲಿಕಾರ್ಜುನ ನಿರ್ಮಾಣದ ಈ ಚಿತ್ರವನ್ನುಕನ್ನಡದ ಮೊದಲ ಮಾತನಾಡುವಚಿತ್ರಸತಿ ಸುಲೋಚನ ನಿರ್ದೇಶನ ಮಾಡಿದ ವೈ.ವಿ.ರಾವ್ ನಿರ್ದೇಶಿಸಿದರು. ಆರ್.ಶ್ರೀನಿವಾಸ್ ಹಾಗೂ ಕುಂದಾನಿ ಸತ್ಯನ್ ಸಹಾಯಕ ನಿರ್ದೇಶಕರಾಗಿದ್ದರು.

ರಾಜಕುಮಾರ್, ವರಲಕ್ಷ್ಮಿ, ವಿ.ನಾಗಯ್ಯ, ಸಂಧ್ಯಾ, ಕಾಂತಾರಾವ್, ಕೆ.ಎಸ್.ಅಶ್ವತ್, ಹರಿಣಿ, ನರಸಿಂಹರಾಜು, ರಾಜನಾಲ, ರಾಘವೇಂದ್ರರಾವ್, ರಮಾದೇವಿ ಮುಂತಾದವರುಅಭಿನಯಿಸಿದ ಈ ಚಿತ್ರದಲ್ಲಿ ಮದರಾಸು ಸಹೋದರಿಯರು ನೃತ್ಯ ಪ್ರದರ್ಶನ ನೀಡಿದ್ದರು. ರಾಜಕುಮಾರ್‌ಅರ್ಜುನನಾಗಿ, ವರಲಕ್ಷ್ಮಿಉಲೂಚಿಯಾಗಿ, ಕಾಂತಾರಾವ್ ಕೃಷ್ಣನಾಗಿ, ಸಂಧ್ಯಾ ಪಾರ್ವತಿಯಾಗಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ತಾಂಡ್ರ ಸುಬ್ರಹ್ಮಣ್ಯಂಅವರಕಥೆ ಆಧರಿಸಿ, ವಿಷ್ಣುವರ್ಧನ್‌ಅವರತಂದೆ ಹೆಚ್.ಎಲ್.ನಾರಾಯಣರಾವ್ ಸಂಭಾಷಣೆ ರಚಿಸಿದ ಈ ಚಿತ್ರಕ್ಕಾಗಿ ಹುಣಸೂರುಕೃಷ್ಣ್ಣಮೂರ್ತಿ ಹಾಗೂ ವಿಜಯನಾರಸಿಂಹ ಗೀತೆಗಳನ್ನು ರಚಿಸಿದರು. ರಾಜನ್-ನಾಗೇಂದ್ರ ಸಂಗೀತ ನೀಡಿದ್ದು, ಜೆ.ಲಕ್ಷ್ಮೀನಾರಾಯಣ ಪದ್ಯ ಸಂಗೀತ ಒದಗಿಸಿದರು. ೧೪ ಹಾಡುಗಳನ್ನು ಅಳವಡಿಸಲಾಗಿದ್ದು, ಪಿ.ಲೀಲಾ, ಪಿ.ಸುಶೀಲ, ಜಿಕ್ಕಿ, ರಾಜಲಕ್ಷ್ಮಿಎಸ್.ಜಾನಕಿ, ಸಿ.ಎಸ್.ಸರೋಜಿನಿ, ಪಿ.ಬಿ.ಶ್ರೀನಿವಾಸ್, ಮಾಧವ ಪೆದ್ದಿ ಸತ್ಯಂ, ಪೀಠಾಪುರಂ ನಾಗೇಶ್ವರರಾವ್, ಎಂ.ಎಸ್.ರಾಮರಾವ್, ಶ್ರೀರಾಮುಲು, ರಾಮಚಂದ್ರಶರ್ಮ, ನಾಗೇಂದ್ರ, ಅಪ್ಪಾರಾವ್, ಕೋಮಲ, ಶಿರ್ಕಾಳಿ ಗೋವಿಂದರಾಜನ್ ಹಾಡುಗಳಿಗೆ ದನಿಯಾದರು. ಮೈಸೂರಿನ ಪ್ರೀಮಿಯರ್ ಸ್ಟುಡಿಯೊದಲ್ಲಿಚಿತ್ರದಚಿತ್ರೀಕರಣ ನಡೆಯಿತು.ಮನದೊಳು ತುಂಬಿತುಆನಂದ ಮುಂತಾದ ಹಾಡುಗಳು ಜನಪ್ರಿಯಗೊಂಡಿದ್ದವು.

ಜಿ.ವರಲಕ್ಷ್ಮಿ: ಚಿತ್ರದ ನಾಯಕಿಯಾಗಿ ಅಭಿನಯಿಸಿದ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ ಪ್ರಖ್ಯಾತ ನಟಿ ಜಿ.ವರಲಕ್ಷ್ಮಿ ಈ ಚಿತ್ರದಲ್ಲಿಅಭಿನಯಿಸುವ ವೇಳೆಗೆ ತೆಲುಗು ಹಾಗೂ ತಮಿಳಿನಲ್ಲಿ ಸುಮಾರು ೪೦ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ೧೯೨೬ರಲ್ಲಿ ಜನಿಸಿದ ಇವರುರಂಗಭೂಮಿ ನಟಿಯಾಗಿ ನಟನಾಕ್ಷೇತ್ರಕ್ಕೆ ಬಂದರು.ರಾಜಕೀಯರಂಗದಲ್ಲೂ ಗುರ್ತಿಸಿಕೊಂಡ ವರಲಕ್ಷ್ಮಿಎಂ.ಜಿ.ಆರ್‌ಅವರನ್ನು ಬೆಂಬಲಿಸಿದ್ದರು. ೨೦೦೬ರಲ್ಲಿ ವರಲಕ್ಷ್ಮಿ ನಿಧನರಾದರು.

ಬಬ್ರುವಾಹನಕಥೆಯಂತೆಯೇ ಸಾಗುವ ನಾಗಾರ್ಜುನಕಥಾನಕದಲ್ಲಿಉಲೂಚಿ ಹಾಗೂ ಅರ್ಜುನರುಗಾಂಧರ್ವ ವಿವಾಹವಾಗುತ್ತಾರೆ.ಶಾಪದಿಂದಾಗಿಅರ್ಜುನಉಲೂಚಿಯನ್ನು ಮರೆಯುತ್ತಾನೆ. ನಾಗಾರ್ಜುನಇರೀರ್ವರ ಪುತ್ರನಾಗಿ ಜನಿಸುತ್ತಾನೆ. ಇವನಿಗೆ ಶಿರದಲ್ಲಿ ಶೃಂಗವಿರುತ್ತದೆ.ಪಾಂಡುರಾಜನಿಗೆ ಸ್ವರ್ಗಪ್ರಾಪ್ತಿಯಾಗಲು ಶೃಂಗಶಿರದ ಬಾಲಕನ ಬಲಿ ಅನಿವಾರ್ಯಎಂದು ನಿರ್ಣಯಿಸಲ್ಪಡುತ್ತದೆ.ಅರ್ಜುನಇಂತಹ ಬಾಲಕನ ಹುಡುಕಾಟದಲ್ಲಿಇದ್ದಾಗ ನಾಗಾರ್ಜುನಕಾಣಿಸುತ್ತಾನೆ. ತಂದೆ ಮಗನಿಗೆ ಯುದ್ಧ ನಡೆಯುತ್ತದೆ.ನಾಗಾರ್ಜುನನ ಪರವಾಗಿ ಪಾರ್ವತಿ, ಅರ್ಜುನನ ಪರವಾಗಿ ಕೃಷ್ಣ ನೆರವಿಗೆ ಬರುತ್ತಾರೆ.ಅರ್ಜುನಸೋತುಅಗ್ನಿ ಪ್ರವೇಶಕ್ಕೆ ಸಿದ್ಧನಾದಾಗ ನಾಗಾರ್ಜುನತಾನೇತಲೆ ಕತ್ತರಿಸಿಕೊಂಡು ಪಾಂಡುರಾಜನ ಸ್ವರ್ಗಾರೋಹಣಕ್ಕೆಕಾರಣನಾಗುತ್ತಾನೆ. ಇದುಚಿತ್ರದಕಥೆ.

ಸಹಜಅಭಿನಯದ ನಟ ಎಚ್.ರಾಮಚಂದ್ರಶಾಸ್ತ್ರಿ
ಮಂಡ್ಯಜಿಲ್ಲೆಯ ಮೇಲುಕೋಟೆ ಸಮೀಪದ ಹಳೇಬೀಡಿನಲ್ಲಿ ೧೯೦೫ರ ನವೆಂಬರ್ ೨ರಂದು ಜನಿಸಿದ ಎಚ್.ರಾಮಚಂದ್ರಶಾಸ್ತ್ರಿ ಶಾಲೆಯಲ್ಲಿಕಲಿಯುತ್ತಿದ್ದಾಗಲೇಕವಿರತ್ನ ಕಾಳಿದಾಸ’ ನಾಟಕವನ್ನು ಪ್ರದರ್ಶಿಸಿ, ಅಭಿನಯಿಸಿದ್ದರು.ರೈಲ್ವೆಇಲಾಖೆಯಕಾಮಗಾರಿಯಲ್ಲಿಕಾರ್ಮಿಕನಾಗಿದುಡಿದರು. ಕನ್ನಡರಂಗಭೂಮಿಯ ಪಿತಾಮಹ ಎ.ವಿ.ವರದಾಚಾರ್ಯರ ಆಶೀರ್ವಾದ ಪಡೆದು ಮುಂದೆ ಹಲವಾರು ವೃತ್ತಿ ನಾಟಕ ಸಂಸ್ಥೆಗಳಲ್ಲಿ ದುಡಿದರು. ೧೯೩೦ರ ದಶಕದಲ್ಲಿಆರ್.ನಾಗೇಂದ್ರರಾವ್ ತಮಿಳಿನಲ್ಲಿ ತಯಾರಿಸಿದ ಭಕ್ತಅಂಬರೀಷಚಿತ್ರದಲ್ಲಿ ಅಭಿನಯಿಸಿದರು. ಶಾಸ್ತ್ರಿಗಳು ೧೯೪೧ರಲ್ಲಿ ಗುಬ್ಬಿ ವೀರಣ್ಣನವರು ತಯಾರಿಸಿದ ಸುಭದ್ರ’ ಚಿತ್ರದಲ್ಲಿಧರ್ಮರಾಯನ ಪಾತ್ರವಹಿಸುವ ಮೂಲಕ ಕನ್ನಡಚಿತ್ರರಂಗ ಪ್ರವೇಶಿಸಿದರು.

 

ಮತ್ತೆ ಕೆಲವು ತಮಿಳು, ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ ನಂತರ ಮತ್ತೆರಂಗಭೂಮಿಗೆ ಹಿಂದಿರುಗಿ ಎಚ್.ಎಲ್.ಎನ್.ಸಿಂಹ ಅವರ ಸಿಂಹಾಸ್ ಸೆಲೆಕ್ಟ್‌ಆರ್ಟಿಸ್ಟ್‌ತಂಡದಲ್ಲಿ ಪಾತ್ರಗಳನ್ನು ಮಾಡಲಾರಂಭಿಸಿದರು. ಅನಂತರ ಸ್ವಂತ ನಾಟಕ ಸಂಸ್ಥೆಯೋದನ್ನು ಸ್ಥಾಪಿಸಿದರು.ಮತ್ತೆಚಿತ್ರರಂಗ ಪ್ರವೇಶಿಸಿ ರಾಜಕುಮಾರ್ ಹಾಗೂ ಕಲ್ಯಾಣಕುಮಾರ ಮೊದಲ ಚಿತ್ರಗಳಾದ ಬೇಡರ ಕಣ್ಣಪ್ಪ’ ಮತ್ತುನಟಶೇಖರ’ ಚಿತ್ರಗಳಲ್ಲಿ ಅಭಿನಯಿಸಿದರು.ಚಿತ್ರರಂಗದಲ್ಲೇ ನೆಲೆಸಿ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು. ೧೯೬೮-೬೯ರಲ್ಲಿ ರಾಜ್ಯ ನಾಟಕಅಕಾಡೆಮಿ ಪ್ರಶಸ್ತಿ ಪಡೆದರು.೧೯೭೬ರ ಡಿಸೆಂಬರ್ ೧೨ರಂದುಶಾಸ್ತ್ರಿಗಳು ನಿಧನರಾದರು.

Girl in a jacket
error: Content is protected !!