ಯಕ್ಷಗಾನ ಪ್ರಸಂಗದಲ್ಲೂ ಸೈ ಎನಿಸಿಕೊಂಡ ಉಮಾಶ್ರೀ

Share

ಯಕ್ಷಗಾನ ಪ್ರಸಂಗದಲ್ಲೂ ಸೈ ಎನಿಸಿಕೊಂಡ ಉಮಾಶ್ರೀ

ಉಮಾಶ್ರೀ ಅವರ ನಟನೆ ಎನ್ನುವುದಿದೆಯಲ್ಲ ಎಂಥವರನ್ನು ಮಂತ್ರಮುಗ್ದತೆ ಮಾಡಿಬಿಡುತ್ತದೆ.ಅವರ ಹಲವಾರು ಪಾತ್ರಗಳು ಜನಮಾನಸದಲ್ಲಿ ಉಳಿದಿರುವುದೇ ಅದೇಕಾರಣಕ್ಕೆ..ಹಾಗಾಗಿಯೇ ಪುಟ್ನಜ್ಜಿ ಪಾತ್ರದ ಆ ನಟನೆ ಮೂಲಕ ಕಲಾರಸಿಕರನ್ನು ಆಕ್ರಮಿಸಿಕೊಂಡು ಬಿಟ್ಟಿದ್ದಾರೆ.

ಎಂಥದ್ದೆ ಪಾತ್ರ ಕೊಟ್ಟರು ಲೀಲಾಜಾಲವಾಗಿ ಅಭಿನಯಿಸುವ ಈ ಪುಟ್ನಂಜಿ ಈಗ ಯಕ್ಷಗಾನದಲ್ಲೂ ತಮ್ಮನ್ನು ಪರಿಕ್ಷೆಗೊಡ್ಡಿಕೊಂಡು ಸೈ ಎನಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಹೊನ್ನಾವರ ಸಮೀಪದ ಪೆರ್ಡೂರಿನಲ್ಲಿ ನಡೆದ ಶ್ರೀ ರಾಮ ಪಟ್ಟಾಭಿಷೇಕ ಮಾಯಾಮೃಗಗಾವತಿ ಎಂಬ ಯಕ್ಷಗಾನ ಪ್ರಸಂಗದಲ್ಲಿ ಮಂಥರೆಯಾಗಿ ಉಮಾಶ್ರೀ ಅಭಿನಯಿಸುವ ಮೂಲಕ ಇದೇ ಮೊದಲಬಾರಿ ಯಕ್ಷಗಾನ ಪ್ರಸಂಗ ದಲ್ಲೂ ತಮ್ಮ ಅಮೋಘ ಅಭಿನಯಿಸುವುದರೊಂದಿಗೆ ಅಲ್ಲಿನ ಜನಮನ ಗೆದ್ದಿದ್ದಾರೆ.

ನಟನೆಗೆ ಎಂದರೆ ಉಮಾಶ್ರಿ ಅವರದ್ದು ಮೊದಲೇ ಎತ್ತಿದ ಕೈ. ಪುಟ್ನಂಜ ಎಂದು ಇಡೀ ಕರ್ನಾಟಕದ ಮನ ಗೆದ್ದವರು. ಆದರೆ ಇದುವರೆಗೂ ಯಕ್ಷಗಾನದಲ್ಲಿ ಎಲ್ಲಿಯೂ ಉಮಾಶ್ರೀ ಅವರು ಕಾಣಿಸಿಕೊಂಡಿರಲಿಲ್ಲ. ಇದೇ ಮೊಟ್ಟ ಮೊದಲ ಬಾರಿಗೆ ಯಕ್ಷರಂಗದಲ್ಲಿ ಕಾಣಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಮಂಥರೆ ಪಾತ್ರಕ್ಕಾಗಿ ಎರಡು ದಿನ ಯಕ್ಷಗಾನ ತರಬೇತಿ ಪಡೆದುಕೊಂಡಿದ್ದರು. ಬಳಿಕ ಟ್ರೈನ್ ಮೂಲಕ ಹೊನ್ನಾವರಕ್ಕೆ ಬಂದಿದ್ದ ಹಿರಿಯ ನಟಿ ಹೋಟೆಲ್ ಒಂದರಲ್ಲಿ ತಂಗಿದ್ದರು. ಅಲ್ಲಿಯೇ 1 ಗಂಟೆ ತಮ್ಮ ಪಾತ್ರವನ್ನು ಅಭ್ಯಾಸ ಮಾಡಿದ್ದರು. ಬಳಿಕ ರಾತ್ರಿ ಪೆರ್ಡೂರಿನಲ್ಲಿ ನಡೆದ ಯಕ್ಷಗಾನ ವೇದಿಕೆಯಲ್ಲಿ ಅಭಿನಯದ ಮೂಲಕ ಜನರನ್ನು ರಂಜಿಸಿದರು. ಅವರ ಮಂಥರೆ ಪಾತ್ರಕ್ಕೆ ಅಭಿಮಾನಿಗಳ ಚಪ್ಪಾಳೆ ಏನು ಕಡಿಮೆ ಇರಲಿಲ್ಲ ಎಂದು ಹೇಳಬಹುದು.
ಒಟ್ಟಾರೆ ಉಮಾಶ್ರೀ ಅವರು ಕಲೆಯ ಆರಾಧಕರು ಎಂಥಾ ಪಾತ್ರಗಳಲ್ಲೂ ಜನರನ್ನು ರಂಜಿಸುವಲ್ಲಿ ಸಿದ್ದಹಸ್ತರು..ಈಗಲೂ ಮೊದಲ ಬಸರಿಗೆ ಯಕ್ಷಗಾನ ಪ್ರಸಂದಲ್ಲಿ ಅಭಿನಯಿಸಿದರು..ಹೊಸದಾಗಿ ಅಭಿನಯಿಸಿದರು ಅನಿಸಲಿಲ್ಲ ಒಬ್ಬ ಅನುಭವಿ ಯಕ್ಷಕ ಅಭಿನಯಿಸಿದ ಪರಿಯಲ್ಲಿ ಅಭಿನಯಿಸಿ ಮನೆಸೂರೆಗೊಂಡರು ಎನ್ನುವುದೇ ವಿಶೇಷ..

Girl in a jacket
error: Content is protected !!