ಬಿಗ್ ಬಾಸ್ ಸೀಸನ್ ೮ ರ ವಿನ್ನರ್ ಲ್ಯಾಗ್ ಮಂಜು ಅಲಿಯಾಸ್ ಮಂಜು ಪಾವಗಡ ಹೊರಹೊಮ್ಮಿದ್ದಾರೆ.
ಅವರಿಗೆ ೪೫,೦೩,೪೯೫ ಮತಗಳು ಬಿದ್ದರೆ, ರನ್ನರ್ ಅಪ್ ಅರವಿಂದ್ ಅವರಿಗೆ ೪೩,೩೫,೯೫೭ ಮತಗಳು ಬಿದ್ದಿವೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆಯಾಗಿದೆ.
ರಂಗಭೂಮಿ ಹಿನ್ನಲೆಯುಳ್ಳ ಮಂಜು, ತಮ್ಮ ಹಾಸ್ಯ ಪ್ರಜ್ಞೆ ಮೂಲಕ ಮನೆಯ ಎಲ್ಲ ಸದಸ್ಯರು ಮತ್ತು ವೀಕ್ಷಕರ ಮನ ಗೆದ್ದಿದ್ದರು. ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಜೊತೆಗಿನ ಕೆಲ ಗದ್ದಲಗಳನ್ನು ಬಿಟ್ಟರೆ ಬೇರಾವ ಜಗಳದಲ್ಲೂ ಮಂಜು ಕಾಣಿಸಿಕೊಂಡವರಲ್ಲ.ಹಾಸ್ಟೆಲ್ ಟಾಸ್ಕ್ ವೇಳೆ ವಾರ್ಡನ್ ಆಗಿದ್ದ ನಿಧಿ ಜೊತೆ ಸೇರಿ ದಿವ್ಯಾ ಸುರೇಶ್ ಮ್ಯಾಚ್ ಫಿಕ್ಸಿಂಗ್ ಐಡಿಯಾ ಮಾಡಿದ್ದರು. ಈ ವೇಳೆ, ದಿವ್ಯಾ ಸುರೇಶ್ ಸಲಹೆ ಕೇಳಿದಾಗ ಮಂಜು, ಓಕೆ ಮಾಡಬಹುದು ಎಂದು ಹೇಳಿದ್ದರು. ಆ ಒಂದು ಮಾತು ಮಂಜು ಪಾವಗಡ ಅವರ ಇಮೇಜ್ ಅನ್ನು ೩ ವಾರ ಕಾಡಿತ್ತು.
ಎಲಿಮಿನೇಶನ್ ವೇಳೆಯು ಎರಡು ಮತ್ತು ಮೂರನೆಯವರಾಗಿ ಸೇಫ್ ಆಗಿದ್ದರು.ಉಳಿದಂತೆ ಮನೆಯ ತುಂಬೆಲ್ಲ ನಗುವಿನ ಹೊಳೆ ಹರಿಸಿದ್ದ ಮಂಜು ಪಾವಗಡ ಅರ್ಹವಾಗಿಯೇ ಗೆದ್ದು ಬೀಗಿದ್ದಾರೆಮಂಜು
ಮಂಜು ಪಾವಗಡ ಕನ್ನಡ ಕಿರುತೆರೆಯ ಹಾಸ್ಯ ಕಲಾವಿದ. ಕಲರ್ಸ್ ಕನ್ನಡ ವಾಹಿನಿಯ ಮಜಾ ಭಾರತ ಹಾಸ್ಯಪ್ರಧಾನ ಕಾರ್ಯಕ್ರಮದ ಮೂಲಕ ಖ್ಯಾತರಾದವರು. ರಂಗಭೂಮಿ, ಕಲೆ ಇವರ ಆಸಕ್ತಿಯ ಕ್ಷೇತ್ರಗಳು. ಬಿಗ್ ಬಾಸ್ ಮನೆಯಲ್ಲಿ ತಮ್ಮ ಎಂದಿನ ಹಾಸ್ಯ, ಭಾವುಕತೆಯ ಕಾರಣದಿಂದ ಗಮನ ಸೆಳೆದವರು. ಶಿವರಾಜ್‌ಕುಮಾರ್ ಅವರಿಂದ ಶುಭಹಾರೈಕೆ ಬೇಕು ಎಂದು ಬಿಗ್ ಬಾಸ್ ‘ಕಿವಿ’ಯಲ್ಲಿ ಕೇಳಿ ಅದನ್ನು ಈಡೇರಿಸಿಕೊಂಡು ಸುದ್ದಿಯಾದವರು.