ನಟ ಸುದೀಪ್ ಪ್ರಶಸ್ತಿಯನ್ನು ತಿರಸ್ಕರಿಸಲು ಕಾರಣ ಏನು?
byಕೆಂಧೂಳಿ
ನಟ ಕಿಚ್ಚ ಸುದೀಪ್ ತಮಗೆ ಬಂದ ಚಲನಚಿತ್ರ ರಾಜ್ಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದು ಯಾಕೆ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ, ಅದರ ಕುರಿತು ಇಲ್ಲಿದೆ ಉತ್ತರ..
ಮೊನ್ನೆ ಕನ್ನಡ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದಾಗ ಕಿಚ್ಚ ಸುದೀಪ್ ಅವರಿಗೆ ೨೦೧೯ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದರು ಅದು ಅವರ ಫೈಲ್ವಾನ್ ಚಿತ್ರದ ನಟನೆಗೆ ಅತ್ಯುತ್ತಮ ನಾಯಕ ಪ್ರಶಸ್ತಿ.
ಪ್ರಶಸ್ತಿ ಪ್ರಕಟವಾಗತ್ತಿದ್ದಂತೆ ಅವರ ಅಭಿಮಾನಿಗಳು ಸಂಭ್ರಮಿಸಿದ್ದರು ಆದರೆ ಕೆಲವೊತ್ತಿನಲ್ಲಿಯೇ ಸುದೀಪ್ ಮಾಡಿದ ಟ್ವೀಟ್ ಎಲ್ಲರಿಗೂ ನಿರಾಸೆಯಾಗಿತ್ತು ಏಕೆಂದರೆ ಅವರ ಮಾಡಿದ ಟ್ವೀಟ್ ಮಾಡಿ ಅವರು ಪ್ರಶಸ್ತಿಯನ್ನು ತಿರಸ್ಕರಿಸಿದ್ದರು
ನನಗಿಂತ ಅರ್ಹರಾಗಿರುವ ನಟರಿಗೆ ಪ್ರಶಸ್ತಿಯನ್ನು ನೀಡಿ. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಅದುವೇ ನನಗೆ ದೊಡ್ಡ ಗೌರವ. ಆದರೆ ಕೆಲವೊಂದು ವೈಯಕ್ತಿಕ ಕಾರಣಗಳಿಂದಾಗಿ ನಾನು ಯಾವುದೇ ಪ್ರಶಸ್ತಿಗಳನ್ನೂ ಸ್ವೀಕರಿಸದೇ ಇರಲು ತೀರ್ಮಾನಿಸಿದ್ದೆ. ಈಗಲೂ ಅದೇ ತೀರ್ಮಾನಕ್ಕೆ ಬಧ್ಧನಾಗಿರುತ್ತೇನೆ ಎಂದು ಸುದೀಪ್ ಮನವಿ ಮಾಡಿದ್ದರು.
ಅವರ ಈ ನಿರ್ಧಾರ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಆದರೆ ಇದರ ಹಿಂದೆಯೂ ಒಂದು ಕಾರಣವಿದೆ. ಈ ಹಿಂದೆ ರಂಗ ಎಸ್‌ಎಸ್‌ಎಲ್ ಸಿ (೨೦೦೪) ಮತ್ತು ಮುಸ್ಸಂಜೆ ಮಾತು (೨೦೦೮) ಸಿನಿಮಾಗೆ ಪ್ರಶಸ್ತಿ ಬಂದಾಗ ಪ್ರಶಸ್ತಿ ಕಮಿಟಿಯಲ್ಲಿರುವವರೇ ಫೋನ್ ಮಾಡಿ ನಿಮಗೆ ಪ್ರಶಸ್ತಿ ಬಂದಿದೆ ಎಂದು ಹೇಳಿದ್ದರು. ಹೀಗಾಗಿ ಅವರು ಸಂಭ್ರಮಿಸಿದ್ದರು. ಆದರೆ ಕೊನೆಗೆ ಘೋಷಣೆಯಾದಾಗ ಬೇರೆಯವರ ಹೆಸರು ಘೋಷಣೆಯಾಗಿತ್ತು. ಈ ಘಟನೆ ಸುದೀಪ್ ಗೆ ನೋವು ತಂದಿತ್ತು. ಇದೇ ಕಾರಣಕ್ಕೆ ಸುದೀಪ್ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸುವುದಿಲ್ಲ ಎನ್ನುವುದು ನಿಜವಾದ ಸಂಗತಿ.