ಕನ್ನಡದ ಚಿತ್ರ ‘ದಾರಿ ಯಾವುದಯ್ಯಾ ವೈಕುಂಠಕೆ ಚಿತ್ರಕಥೆಗೆ ಉತ್ತಮ ಚಿತ್ರಕತೆ ಪ್ರಶಸ್ತಿ ದೊರಕಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಛಪತ್ರಪತಿ ಶಿವಾಜಿ ಅಂತರಾಷ್ಟ್ರೀಯ ಚಲನಚಿತರೋತ್ಸವದಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದೆ
ಇದರ ಜೊತೆಗೆ “ಸ್ಪೇನ್” ನಲ್ಲಿ ನಡೆಯುವ ಬಾರ್ಸೆಲೋನಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶನ ಪ್ರಶಸ್ತಿಗಾಗಿ ಬೇರೆ ಬೇರೆ ದೇಶದ ನಿರ್ದೇಶಕರ ಜೊತೆ ಸ್ಪರ್ಧೆಗಿಳಿದು ಕೊನೆಗೂ “ಅತ್ಯುತ್ತಮ ನಿರ್ದೇಶಕ” ಪ್ರಶಸ್ತಿಯನ್ನು ದಕ್ಕಿಸಿಕೊಂಡಿದೆ.
“ನಾವ್ಡಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ೧೬೦೦ ಸಿನಿಮಾಗಳ ಪೈಕಿ ನನಗೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಂದಿದ್ದು ಹೆಚ್ಚು ಖುಷಿ ತಂದಿತು. ಲಂಡನ್ ಇಂಡಿಪೆಂಡೆಂಟ್ ಫಿಲ್ಮ ಫೆಸ್ಟಿವಲ್ ನಲ್ಲಿ ಉತ್ತಮ ನಟ ಮತ್ತು ಉತ್ತಮ ನಿದೇಶಕ ಪ್ರಶಸ್ತಿ ಸಿಕ್ಕಿದೆ” ಎಂದು ನಿರ್ದೇಶಕ ಸಿದ್ದು ಪೂರ್ಣಚಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.
ರೇ(ಸತ್ಯಜಿತ್ ರೇ) ಸಿನಿಮೋತ್ಸವದಲ್ಲೂ ಬೆಸ್ಟ್ ಫೀಚರ್ ಫಿಲ್ಮ್ ಆಂಡ್ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಬಂತು. ಮುಂಬೈ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನನಗೆ ಬೆಸ್ಟ್ ರೈಟರ್ ಅವಾರ್ಡ್ ದೊರಕಿತು. ಮೊದಲ ವರ್ಷ್ ಕಾಶಿ ಇಂಡಿಯನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯತ್ತಮ “ಚಿತ್ರಕಥೆ ಮತ್ತು ಸಂಭಾಷಣೆ”ಗೆ ಅವಾರ್ಡ್ ಬಂದಿದೆ ಎಂದಿದ್ದಾರೆ.
ಸ್ಯಾಂಡ್ ಡ್ಯಾನ್ಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಪೋರ್ಟ್ ಬ್ಲೇರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಗೋಲ್ಡನ್ ಗುಬ್ಬಚ್ಚಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಉರುವಾಟ್ಟಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ರಾಮೇಶ್ವರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಕ್ರೌನ್ ವುಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ವ್ಯಾಲೆಟ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಗೊನ್ನಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಡ್ರುಕ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ. ಬಿಳಿ ಯುನಿಕಾರ್ನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಓಯಸಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಅಕಾರ್ಡ್ ಸಿನಿ ಫೆಸ್ಟ್, ಕಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಟ್ಯಾಗೋರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಇನ್ನೂ ಹಲವು ಚಲನಚಿತ್ರೋತ್ಸವಗಳಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.