ದರ್ಶನ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಮಹಿಳೆ-ದೂರು

Share

ಮೈಸೂರು,ಜು,೧೨: ಚಾಲೇಂಜಿಂಗ್ ಸ್ಟಾರ್ ಸ್ಟಾರ್ ದರ್ಶನ್ ತಮ್ಮ ಹೆಸರಿನಲ್ಲಿ ಮಹಿಳೆಯೊಬ್ಬಳು ವಂಚನೆ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.
ಈ ಮೂಲಕ ದರ್ಶನ್ ಹೆಸರಿನಲ್ಲಿ ಇರುವ ಯಾವ ಆಸ್ತಿ ನಕಲಿ ಮಾಡಲಾಗಿದೆ ಯಾಕೆ ಈ ಘಟನೆ ನಡೆದಿದೆ ಇದರ ಹಿಂದೆ ಇರುವವರು ಯಾರು ಎನ್ನುವ ಕುತೂಹಲ ಕೆರಳಿಸಿದೆ.
೧೫ ದಿನಗಳ ಹಿಂದೆ ದರ್ಶನ್ ಬಳಿ ಓರ್ವ ಮಹಿಳೆ ಬಂದು, ನಿಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿಕೊಂಡು ೨೫ ಕೋಟಿ ರೂ. ಸಾಲ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ದರ್ಶನ್ ಆಪ್ತ ರಾಬರ್ಟ್ ನಿರ್ಮಾಪಕ ಉಮಾಪತಿ ಮಹಿಳೆಯನ್ನ ದರ್ಶನ್ ಬಳಿ ಕರೆದುಕೊಂಡು ಬಂದಿರುವ ಬಗ್ಗೆ ತಿಳಿದು ಬಂದಿದೆ. ಇನ್ನೂ ತಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿದ್ದಾರೆ ಎನ್ನಲಾದ ಎಲ್ಲ ಗೆಳೆಯರನ್ನು ದರ್ಶನ್ ವಿಚಾರಿಸಿದಾಗ ಮಹಿಳೆಯೇ ನಕಲಿ ಬ್ಯಾಂಕ್ ಮ್ಯಾನೇಜರ್ ಎಂಬುವುದು ತಿಳಿದು ಬಂದಿದೆ.
ಈ ಸಂಬಂಧ ದರ್ಶನ್ ಮೈಸೂರಿನಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಮಹಿಳೆ ನಿರ್ಮಾಪಕ ಉಮಾಪತಿಯೇ ಹೀಗೆ ಹೇಳುವಂತೆ ಹೇಳಿದ್ದರು. ಹಾಗಾಗಿ ಸುಳ್ಳು ಮಾಹಿತಿಯನ್ನು ನೀಡುವಂತೆ ಸೂಚಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಪೊಲೀಸರು ನಿರ್ಮಾಪಕ ಉಮಾಪತಿ, ನಟ ದರ್ಶನ್ ಮತ್ತು ಮಹಿಳೆಯನ್ನು ಎಸಿಪಿ ಕಚೇರಿಗೆ ಬಂದಿದ್ದು, ವಿಚಾರಣೆ ನಡೆಯುತ್ತಿದೆ.

ಸ್ವಲ್ಪ ತಡೀರಿ ಸತ್ಯ ಗೊತ್ತಾಗುತ್ತದೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ದರ್ಶನ ಒಂದಿಷ್ಟು ಕಾದು ನಾಡೋಣ ಏನು ಹೊರಬರುತ್ತದೆ ಯಾವ ಸತ್ಯ ಇದರ ಹಿಂದೆ ಇದೆ ಎನ್ನೋದು ತಿಳಿಯುತ್ತದೆ ಎಂದಿದ್ದಾರೆ.
ಆದರೆ ಅವರ ಯಾವ ಆಸ್ತಿಯ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಯಾಕೆ ಈ ರೀತಿ ಮಾಡಿದ್ದಾರೆ ಎನ್ನುವುದನ್ನು ಅವರು ಬಾಯಿ ಬಿಟ್ಟಿಲ್ಲ ಕಾದು ನೋಡಿ ಅಷ್ಟೆ ಅಂದಿದ್ದಾರೆ ಹೀಗಾಗಿ ಈ ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದೆ.

Girl in a jacket
error: Content is protected !!