ಚಾಮರಾಜನಗರ,ಜು,೩೧: ತಮ್ಮ ತಂದೆ ವರನಟ ಡಾ.ರಾಜ್ಕುಮಾರ್ ಹುಟ್ಟೂರಾದ ಗಾಜನೂರಿಗೆ ಭೇಟಿ ನೀಡಿದ ಖ್ಯಾತ ನಟರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ಕುಮಾರ್,ಸೋದರತ್ತೆ ನಾಗಮ್ಮ ಅವರ ಕುಟುಂಬದೊಂದಿಗೆ ಸಮಯ ಕಳೆದರು.
ನಾಗಮ್ಮ ಅವರ ಆರೋಗ್ಯ ವಿಚಾರಿಸಲು ತಮ್ಮ ಕುಟುಂಬದೊಂದಿಗೆ ಬಂದಿದ್ದ ಶಿವಣ್ಣ ಹಾಗೂ ಅಪ್ಪು ಅವರು, ಗಾಜನೂರಿನಲ್ಲಿ ಡಾ.ರಾಜ್ಕುಮಾರ್ ಅವರು ಧ್ಯಾನ ಮಾಡುತ್ತಿದ್ದ ಸ್ಥಳ, ತೋಟದಲ್ಲಿ ಸುತ್ತಾಡಿದರು.
ಎಲ್ಲರೂ ಜೊತೆಯಾಗಿ ಮಧ್ಯಾಹ್ನದ ಭೋಜನ ಸವಿದರು.
ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಮನೆಯವರಿಗೂ ತಿಳಿಸಿದೆ ಅವರು ನೇರವಾಗಿ ಗಾಜನೂರಿಗೆ ಬಂದಿದ್ದರು. ಅದು ಹೇಗೋ ಗೊತ್ತಾಗಿ ಜನರು ಮನೆಯ ಸುತ್ತ ನೆರೆಯಲು ಆರಂಭಿಸಿದರು. ಅಭಿಮಾನಿಗಳನ್ನು ನಿರಾಸೆಗೊಳಿಸದ ಶಿವಣ್ಣ ಹಾಗೂ ಅಪ್ಪು, ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಫೋಟೊಗೆ ಪೋಸ್ ನೀಡಿದರು. ಸಂಜೆ ಇಬ್ಬರೂ ಗಾಜನೂರಿನಿಂದ ಹೊರಟರು.