ನಿಧಾನವಾಗಿ ಕನ್ನಡ ಚಿತ್ರೋದ್ಯಮವು ಓಟಿಟಿ ಕಡೆಯೇ ಹೆಚ್ಚು ಗಮನಹರಿಸುತ್ತಿವೆ ಏಕೆಂದರೆ ಕೊರೊನಾ ಅಟ್ಟಹಾಸದಿಂದ ಆಗಿರುವ ತೊಂದರೆಗಳಿಗೆ ಈಗ ಚಿತ್ರದ್ಯೋದ್ಯಮ ಓಟಿಟಿ ವೇದಿಕೆ ಮೂಲಕ ಜನರಿಗೆ ಮನೋರಂಜನೆ ನೀಡಲು ಸಿದ್ದವಾಗಿವೆ.
ಹೌದು ಕನ್ನಡದ ಹಲವಾರು ಚಿತ್ರಗಳು ಈಗಾಗಲೇ ಓಟಿಟಿ ವೇದಿಕೆಗೆ ತೆರಳಿವೆ ಕೆಲವು ಅತ್ತ ಮುಖಮಾಡಿವೆ ಈಗ ಹೆಚ್/೩೪ ಪಲ್ಲವಿ ಟಾಕೀಸ್ ಕೂಡ ಓಟಿಟಿ ವೇದಿಕೆ ಮೂಲಕವೇ ಬಿಡುಗಡೆಯಾಗಲಿದೆ.
ಕನ್ನಡದ ಖ್ಯಾತ ನಟರಾದ ತಿಲಕ್ ಮತ್ತು ಯಜ್ಞಾ ಶೆಟ್ಟಿ ಜೊತೆಯಾಗಿ ನಟಿಸಿರುವ ಈ ಚಿತ್ರ ಸದ್ಯದಲ್ಲೇ ಓಟಿಟಿಯಲಿ ಈ ಚಿತ್ರ ಬಿಡುಗಡೆಯಾಗಲಿದೆ.
ಇತ್ತೀಚೆಗೆ ಈ ಸಿನಿಮಾದ ಒಂದು ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ‘ಬರೆವೆ ಬರೆವೆ ಒಲವ ಕವನ..’ ಎಂಬ ಹಾಡನ್ನು ಆನಂದ್ ಆಡಿಯೋ ಮೂಲಕ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಪ್ರಸ್ತುತ ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅವರು ಪ್ರತಿ ಸಿನಿಮಾದಲ್ಲೂ ಮೆಲೋಡಿ ಗೀತೆಗಳ ಮೂಲಕ ಕೇಳುಗರ ಮನ ಗೆಲ್ಲುತ್ತಿದ್ದಾರೆ. ‘ಹೆಚ್/೩೪ ಪಲ್ಲವಿ ಟಾಕೀಸ್’ ಚಿತ್ರದ ‘ಬರೆವೆ ಬರೆವೆ ಒಲವ ಕವನ..’ ಸಾಂಗ್ ಕೂಡ ಜನರಿಗೆ ಇಷ್ಟ ಆಗುತ್ತಿದೆ
ಈ ಹಾಡಿಗೆ ಅಂತಿತ್ ತಿವಾರಿ ಧ್ವನಿ ನೀಡಿದ್ದಾರೆ. ಸುಂದರ ಲೊಕೇಷನ್‌ಗಳಲ್ಲಿ ಹಾಡನ್ನು ಚಿತ್ರಿಸಲಾಗಿದೆ. ಈ ಹಿಂದೆ ‘೬ನೇ ಮೈಲಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಶ್ರೀನಿವಾಸ್ ಚಿಕ್ಕಣ್ಣ ಅವರು ‘ಹೆಚ್/೩೪ ಪಲ್ಲವಿ ಟಾಕೀಸ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ‘ಬರೆವೆ ಬರೆವೆ ಒಲವ ಕವನ..’ ಹಾಡಿಗೆ ಶ್ರೀನಿವಾಸ್ ಚಿಕ್ಕಣ್ಣ ಅವರೇ ಸಾಹಿತ್ಯ ಬರೆದಿದ್ದಾರೆ.
ಚೇಂದ್ರ ಪ್ರಸಾದ್, ಅವಿನಾಶ್, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್, ಪದ್ಮಜಾ ರಾವ್, ಕುರಿ ಪ್ರತಾಪ್, ವಿಶ್ವ, ಅಮೃತಾ ಮಯೂರಿ, ರಾಜೇಶ್ವರಿ, ರಾಕ್ ಲೈನ್ ಸುಧಾಕರ್, ಅಜಯ್ ರಾಜ್ ಮುಂತಾದವರು ‘ಹೆಚ್/೩೪ ಪಲ್ಲವಿ ಟಾಕೀಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ಕಾಲಭೈರವ ಆರ್ಟ್ಸ್ ಲಾಂಛನದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಮಂಜುನಾಥ್ ಕೆ. ಮತ್ತು ರವಿಕಿರಣ್ ಎಂ. ಗೌಡ ಬಂಡವಾಳ ಹೂಡಿದ್ದಾರೆ.
ಹಾರರ್, ಸಸ್ಪೆನ್ಸ್-ಥ್ರಿಲ್ಲರ್ ಮಾದರಿಯಲ್ಲಿ ಈ ಚಿತ್ರ ಮೂಡಿಬಂದಿದೆ. ನಿರ್ದೇಶನದ ಜೊತೆ ಕಥೆ, ಚಿತ್ರಕತೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಶ್ರೀನಿವಾಸ್? ಚಿಕ್ಕಣ್ಣ ಅವರೇ ನಿಭಾಯಿಸಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ. ರಾವ್‌ಸಂಕಲನ ಮಾಡಿದ್ದಾರೆ