ಸ್ಯಾಂಡಲ್‌ವುಡ್‌ನಲ್ಲಿ ಸದಾ ಕ್ರೀಯಾಶೀಲ ವ್ಯಕ್ತಿ ಎಂದರೆ ಅರವಿಂದ್ ರಮೇಶ್ ಯಾವಾಗಲೂ ಪ್ರಯೋಗಾತ್ಮಕವಾಗಿಯೇ ಚಿಂತಿಸುವ ಅವರು ಹೊಸ ತಂತ್ರಜ್ಞಾನಗಳ ಕಡೆ ತಮ್ಮ ಬುದ್ದಿಗೆ ಕೆಲಸ ಕೊಡುತ್ತಿರುತ್ತಾರೆ ಅದರ ಪ್ರಯತ್ನವೆ ಈಗ ಒಟಿಟಿ ಕಡೆ ತಮ್ಮ ಚಿತ್ತ ಹರಿಸಿದ್ದಾರೆ.
ಕೊರೊನಾ ಅಟ್ಟಹಾಸದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆದ ಈ ಹೊತ್ತಿನಲ್ಲಿ ಒಟಿಟಿಗಳು ಹೆಚ್ಚು ನಟರನ್ನು ತಮ್ಮತ್ತ ಸೆಳೆದುಕೊಂಡಿವೆ ಹಾಗಾಗಿಯೇ ಅರವಿಂದ್ ರಮೇಶ್ ಕೂಡ ಈಗ ಅವರು ವೆಬ್ ಸರಣಿ ನಿರ್ದೇಶನಕ್ಕೆ ಮುಂದಾಗಿದ್ದಾರೆ ವೆಬ್ ಸರಣಿಗಾಗಿಯೆ ಕತೆಯೊಂದನ್ನು ಸಿದ್ದತೆ ಮಾಡಿಕೊಂಡಿದ್ದಾರೆ.
ಇತಿಹಾಸಕ್ಕೆ ಸಂಬಂಧಿಸಿದ ಕತೆಯೊಂದನ್ನು ಆದುನಿಕ ಬದುಕಿನ ಜೀವನಕ್ಕೆ ತಳಕು ಹಾಕುವಂತ ಕತೆಯೊಂದನ್ನು ಎಣದಿದ್ದಾರೆ ಈ ಮೂಲಕ ಕನಿಷ್ಠ ೧೦ ಗಂಟೆಗಳ ವೆಬ್ ಸರಣಿ ನಿರ್ಮಾಣ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.
ವೆಬ್ ಸರಣಿಯ ತಂತ್ರದ ಬಗ್ಗೆ ಬಹಳ ಉತ್ಸುಕರಾಗಿರುವ ರಮೇಶ್ ಅರವಿಂದ್, ಈ ಮಾದರಿಯಲ್ಲಿ ನೀವು ಭಿನ್ನ ರೀತಿಯ ಕತೆಗಳನ್ನು ಹೇಳಬಹುದು. ನಿರ್ದಿಷ್ಟ ಪ್ರೇಕ್ಷಕರಿಗೆ ನಿರ್ದಿಷ್ಟ ಕತೆ ಹೇಳುವ ಅವಕಾಶವೂ ವೆಬ್ ಸರಣಿ ಹಾಗೂ ಒಟಿಟಿಗಳಿಂದ ಪ್ರಾಪ್ತವಾಗಿದೆ. ಹಲವು ಮಾದರಿಯ ಕತೆಗಳನ್ನು ನಿರ್ದೇಶಕ ವೆಬ್ ಸರಣಿಗಳಲ್ಲಿ ಪ್ರಯತ್ನಿಸಬಹುದು ಎಂದಿದ್ದಾರೆ ರಮೇಶ್ ಅರವಿಂದ್.