ಈಗ ಡೆಡ್ಲಿ ಭಾಗ ೩

Share

ರವಿ ಶ್ರೀವಾತ್ಸವ ನೇತೃತ್ವದಲ್ಲಿ ತೆರೆಗೆ ಬಂದಿದ್ದ ಡೆಡ್ಲಿ ಸೋಮ,ಮತ್ತು ಡೆಡ್ಲಿ-೨ ಚಿತ್ರದ ಬಳಿಕ ಈಗ “ಡೆಡ್ಲಿ-೩ ” ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಡೆಡ್ಲಿ-೩ ಚಿತ್ರಕ್ಕೆ ಹೊಸ ನಿರ್ಮಾಪಕರು ಮತ್ತು ನಾಯಕ ನಟನ ಪ್ರವೇಶವಾಗಿದೆ.
ಉಳಿದಂತೆ ಹಿಂದಿನ ಚಿತ್ರಗಳಲ್ಲಿ ಇದ್ದ ಕೆಲ ಕಲಾವಿದರು ” ಡೆಡ್ಲಿ-೩ “ಚಿತ್ರದಲ್ಲಿ ಮುಂದುವರೆಯಲಿದ್ದಾರೆ. ನಿರ್ಮಾಪಕ ಶೋಭಾ ರಾಜಣ್ಣ ಬಂಡವಾಳ ಹಾಕಿ ಪುತ್ರ ದೀಕ್ಷಿತ್ ನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ “ಎಂ.ಆರ್ ” ಚಿತ್ರ ಕೈಗೆತ್ತಿಕೊಂಡಿದ್ದ ನಿರ್ದೇಶಕ ರವಿ ಶ್ರೀವಾಸ್ತವ ಅದನ್ನು ಅಲ್ಲಿಗೆ ಬಿಟ್ಟು ಅದೇ ನಿರ್ಮಾಪಕ ಮತ್ತು ನಾಯಕನಿಗಾಗಿ “ಡೆಡ್ಲಿ-೩ ” ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾರೆ.


ನಟ ದೀಕ್ಷಿತ್ ಪೊಲೀಸ್ ಆಯುಕ್ತರ ಕಚೇರಿಯಿಂದ ನಾಯಕ ಹೊರಗೆ ಬರುವಾಗ ಆತನ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸುವ ಆಕ್ಷನ್ ಸನ್ನಿವೇಶವನ್ನು ನಿರ್ದೇಶಕ ರವಿ ಶ್ರೀವಾತ್ಸವ , ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾರ್ಗದರ್ಶನದಲ್ಲಿ ಛಾಯಾಗ್ರಾಹಕರಾಗಿ ಮಾಥ್ಯೂ ರಾಜನ್ ಇದ್ದಾರೆ.
ಈ ಚಿತ್ರಕ್ಕೆ ನಟ ದೀಕ್ಷಿತ್ ಎದುರು ಯಶಾ ಶಿವಕುಮಾರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಹಿರಿ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.

Girl in a jacket
error: Content is protected !!