‘ಟ್ರ್ಯಾಜಿಡಿ ಕಿಂಗ್ ‘ದಿಲೀಪ್ ಕುಮಾರ್

Share

writing-ಎಂ.ಎಸ್.ರಾವ್.ಅಹಮದಾಬಾದ್

೧೯೯೫ನೇ ಇಸವಿಯಲ್ಲಿ ದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಅಮೆರಿಕಾದ ರಾಯಭಾರಿಯ ಪತ್ನಿ ಅಲ್ಲಿ ಖ್ಯಾತ ನಟ ದಿಲೀಪ್ ಕುಮಾರ್ ರನ್ನು ನೋಡಿದೊಡಡನೆ ಓ ದೇವದಾಸ್ ಎಂದು ಉದ್ವೇಗದಿಂದ ತಾರಕಸ್ವರದಲ್ಲಿ ಬೊಟ್ಟಿಟ್ಟು ಅವರನ್ನು ಆಲಂಗಿಸಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು.ನನಗೆ ಹಿಂದಿ ಭಾಷೆ ಅರ್ಥವಾಗುವುದಿಲ್ಲ ಆದರೆ ಬದಲಾವಣೆಗೆಂದು ಕಳೆದವಾರ ಪತಿಯೊಂದಿಗೆ ದೇವದಾಸ್ ಚಿತ್ರ ವೀಕ್ಷಿಸಲು ಹೋಗಿದ್ದೆ.ಏನೊಂದು ಶ್ರೇಷ್ಠ ಅಭಿನಯ ನಿಮ್ಮದು,ಶೋಕದ ಸನ್ನಿವೇಶದಲ್ಲಿ ನಿಮ್ಮ ನಟನೆ ನೋಡಿ ಕಣ್ಣಿನಿಂದ ಕರವಸ್ತ್ರ ತಗೆಯಲಿಲ್ಲ ಉತ್ಕ್ರಷ್ಟ ಅಭಿನಯ,ಅದ್ಭುತ, ನಿಮ್ಮನ್ನು ಮುಖತಃ ಭೇಟಿಯಾಗಿದ್ದು ನನ್ನ ಭಾಗ್ಯ ಎಂದು ಹೇಳಿ ದಿಲೀಪ್ ಕುಮಾರ್ ಕಲಾವೈಖರಿಯನ್ನು ಧಾರಾಳವಾಗಿ ಪ್ರಶಂಸಿದಾಗ ದಿಲೀಪ್ ಕುಮಾರ್ ಬೆಕ್ಕಸ ಬೆರಗಾಗಿದ್ದರು.


ಟ್ರ್ಯಾಜಿಡಿ ಕಿಂಗ್ ಎಂದೇ ವಿಶ್ವಾದ್ಯಂತ ಖ್ಯಾತರಾದ ದಿಲೀಪ್ ಕುಮಾರ್ ರ ಹೆಸರು ಮಹಮದ್ ಯೂಸೂಪ್ ಖಾನ್ ,ಅವರು ಜನನ ಡಿಸೆಂಬರ್ ೧೧- ೧೯೨೨ರಲ್ಲಿ ಪೇಶಾವರದಲ್ಲಾಯಿತು.ಅವರ ತಂದೆ ಲಾಲ್ ಗುಲಾಮ್ ಸರ್ವರ್ ಪ್ರಸಿದ್ದ ಹೆಣ್ಣಿನ ವ್ಯಾಪಾರಿಯಾಗಿದಷ್ಟೆ ಅಲ್ಲ ಪೇಶಾವರದಲ್ಲಿ ಹಣ್ಣಿನ ತೋಟಗಳ ಮಾಲೀಕರಾಗಿದ್ದರು.೧೯೩೦ರಲ್ಲಿ ಅವರು ಕುಟುಂಬ ಸಮೇತ ಮುಂಬಯಿಗೆ ಬಂದು ನೆಲಸಿದರು.ಚಿಕ್ಕ ವಯಸ್ಸಿನಲ್ಲೇ ಯೂಸುಫ್ ಖಾನ್ ಪೂನಾದಲ್ಲಿ ಚಿಕ್ಕ ಕ್ಯಾಂಟೀನ್ ನಡೆಸುವುದರೊಂದಿಗೆ ಹಣ್ಣಿನ ವ್ಯಾಪಾರವನ್ನು ನಿಭಾಯಿಸುತ್ತಿದ್ದರು.೧೯೪೩ ರಲ್ಲಿ ಆಗಿನ ಖ್ಯಾತ ನಟ ದೇವಿಕಾ ರಾಣಿ ಹಾಗೂ ಅವರ ಪತಿ ಹಿಮಾಂಶು ರೈ( ಬಾಂಬೆ ಟಾಕೀಸ್ ಮಾಲೀಕರು) ದಿಲೀಪ್ ಕುಮಾರ್ ಅವರನ್ನು ಅವರ ಕ್ಯಾಂಟೀನ್ ನಲ್ಲಿ ಬೇಟಿಯಾದಾಗ ಅವರ ಸುಂದರ ವ್ಯಕ್ತಿತ್ವ ಹಾಗೂ ಸಂಭಾಷಿಸುವ ವಿಶಿಷ್ಟವಾದ ವೈಖರಿಯನ್ನು ಮೆಚ್ಚಿ ಅವರ ಹಿಂದಿ ಚಿತ್ರ ’ ಔರ್ ಭಾಟಾ’ಕ್ಕೆ ನಾಯಕನಾಗಿ ಆಯ್ಕೆ ಮಾಡಿದರು.ಹಿಂದಿ ಸಾಹಿತಿ ಭಗವತಿ ಚರಣ್ ವರ್ಮ ಯೂಸ್ ಪ್ ಬದಲಿಗೆ ದಿಲೀಪ್ ಕುಮಾರ್ ಹೆಸರಿಟ್ಟು ಕೋ ಎಂದು ಅವರು ಸಲಹೆ ನೀಡಿದಾಗ ತಕ್ಷಣ ಅಂಗೀಕರಿಸಿದರು’.ಔವರ್ ಭಾಟಾ’ ಚಿತ್ರ ಬಿಡುಗಡೆಯಾದರೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಲಿಲ್ಲ ಆದರೆ ದಿಲೀಪ್ ನಟಿಸಿದ ಎರಡನೇ ಚಿತ್ರ ’ಜುಗ್ನು’ ಗಲ್ಲಾಪೆಟ್ಟಿಗೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದಷ್ಟೆ ಅಲ್ಲ ಪ್ರತಿಭಾವಂತ ನಟನೆಂಬ ಖ್ಯಾತಿ ಪಡೆದರು.

ಮಕ್ಕಳಿಂದ ಮೊದಲುಗೊಂಡು ಮದುಕರವರೆಗೆ ಎಲ್ಲರ ಹೃದಯಗಳನ್ನು ಗೆಲ್ಲವ ವಿಶಿಷ್ಟ ಶಕ್ತಿ ಅವರ ಅಭಿನದಲ್ಲಿದೆ. ವ್ಯಂಗ್ಯ,ನಗೆ, ವಿಷಾಧ, ಕ್ರೋಧ,ಹರ್ಷ, ನಾನಾ ಭಾಗಗಳ ಸಮ್ಮಿಲನ ಅವರ ನಟನೆಯಲ್ಲಿ ಕಾಣಬಹುದು. ಪಂಡಿತ ಪಾಮರರಿಬ್ಬರಿಗೂ ರಂಜನೆಯಾಗುವಂತೆ ಅಭಿನಯಿಸುವ ಕಲೆ,ಮುಖ, ಭಗಿ ಭಾವ ಅವರ ನುರಿತ ಅಭಿನಯದಲ್ಲಿ ಕಾಣಬಹುದು ಎಂದು ಅವರ ಅಭಿನಯವನ್ನು ಹೊಗಳಿ ಮೆಚ್ಚಿ ಪತ್ರಕರ್ತರು ವಿಸ್ರ್ತುತ ಲೇಖನಗಳನ್ನು ಬರೆದರು. ಮುಂದೆ ದೇವದಾಸ ಚಿತ್ರದ ನಾಯಕನ ಪಾತ್ರದಲ್ಲಿ ಎಲ್ಲರ ಅಭಿನಯವನ್ನು ಎಲ್ಲರ ಮೇಲೆ ಇಂದ್ರಜಾಲವನ್ನು ಬೀರಿದರು. ಅವರ ಸ್ಮಿತವದನ, ಗಾಂಭಿರ್ಯ,ಪ್ರಣಯ ಸನ್ನಿವೇಶದಲ್ಲಿ ತೋರಿದ ಅಸಮಾನ್ಯ ಪ್ರತಿಭೆ ಎಲ್ಲರ ಗಮನ ಸೆಳೆಯಿತು. ಅವರ ಕಲಾಪರಿಪಕ್ಷತೆಯನ್ನು ಕಂಡು ಬೆರಗಾದರು .ಶೋಕದ ಸನ್ನಿವೇಶಗಳನ್ನು ಅಭಿನಯಿಸುವಾಗ ಅನುಭವಿಸುವಾಗ ಕಂಬನಿ ಮಿಡಿಯದ ಕಣ್ಣೀರು ಅಲ್ಲ ಪ್ರೇಕ್ಷಕರ ವರ್ಗದಲ್ಲಿ ಇಂಥ ಉನ್ನತಮಟ್ಟದ ಚಿತ್ರವನ್ನು ಸರ್ವಜನರ ಸಂಪ್ರತಿಗಳವಡುವಂತೆ ಪ್ರದರ್ಶಿಸಿದ ದಿಲೀಪ್ ಕುಮಾರ್‌ರ ಪ್ರತಿಭೆಯನ್ನು ವಂದಿಸಿದರು.‘ಟ್ರಾಜಿಡಿ ಕಿಂಗ್ ಬಿರಿದು ದಿಲೀಪ್ ಕುಮಾರ್‌ಗೆ ಈ ಚಿತ್ರದಲ್ಲಿ ಲಭಿಸಿತ್ತು.ಅಸಾಧಾರಣ ಅಭಿನಯ ಸಾಮರ್ಥ್ಯ ಹಗೂ ಚಿತ್ರಗಳ ಗಲ್ಲಾಪೆಟ್ಟಿಗೆಯ ಅಭೂತಪೂರ್ವ ಯಶಸ್ಸಿನಿಂದ ದಿಲೀಪ್‌ಕುಮಾರ್ ಸಹಿ ಪಡೆಯುವ ನಿರ್ಮಾಪಕರು ತುದಿಗಾಲಿನಲ್ಲಿ ನಿಲ್ಲುತ್ತಿದ್ದರು.

ಆದರೆ ದಿಲೀಪ್ ಕುಮಾರ್ ಆರಂಭದಿಂದಲೇ ಚಿತ್ರದ ಕತೆ, ಪಾತ್ರದ ಪ್ರಾಮುಖ್ಯತೆ ಎಲ್ಲವನ್ನೂ ಕೂಲಂಕುಷವಾಗಿ ಅವಲೋಇಸಿ ಸಹಿ ಹಾಕುತ್ತಿದ್ದರಿಂದ ದಿಲೀಪ್ ಕುಮಾರ್ ನಟಿಸಿದ ಚಿತ್ರಗಳ ಸಂಖ್ಯೆ ಕಡಿಮೆ ಆದರೆ ಎಲ್ಲವೂ ಉತ್ರ್ಕಷ್ಟ ಚಿತ್ರಗಳು.
ಮೇಲಾ, ಅನೋಕಾಪ್ಯಾರ್, ಅಂದಾಜ್ ಬಾಬುಲ್ ಅರ್ಜೂ ತರಾನಾ ದೀದಾರ್,ಸಂಗದಿಲ್ ದಾಗ್ ಫೂಟ್‌ಪಾತ್, ಅಮರ್ ಉಡನ್ ಖಟೋಲಾ ಇನ್ಯಾನಿಯತ್ ಮುಸಾಪಿರ್ ಯಹೋದಿ ಬೋಗನ್ ನಯಾದೌರ್ ಮಧುಮತಿ ಪೈಗಾಮ್ ಅಜಾದ್ ಹೆಟೆಲ್ ಶಬ್‌ನಮ್ ಸಹೀದ್ ಮಕೊಹಿನೂರ್ ಮೊಗಲ್ -ಏ ಸಗಭಮಗ, ಗಂಗಾಜಮುನ ಚಿತ್ರರಸಿಕರ ಹೃದಯಗೆದ್ದ ದಿಲೀಪ್ ಕುಮಾರ್ ವಿಶ್ವ ಕಂಡ ಶ್ರೇಷ್ಠನಟರಲ್ಲೊಬ್ಬರು ಎಂದು ಉಲ್ಲೇಖಿಸಿದರೆ ಅತಿಶಯೋಕ್ತಿ ಅಲ್ಲ. ೭೦ ರ ದಶಕದಲ್ಲಿ ಸ್ವ ಇಚ್ಚೇಯಿಂದ ನೇಪತ್ಯಕ್ಕೆ ಸರಿದ ದಿಲೀಪ್ ಕುಮಾರ್ ಅಮನೋಜ್ ಕುಮಾರ್‌ರ ಒತ್ತಾಯದ ಮೇಲೆ ೮೦ ದಶಕಗಳಲ್ಲಿ ‘ಕ್ರಾಂತಿ ಚಿತ್ರದದಲ್ಲಿ ನಟಿಸುವದರ ಮೂಲಕ ಎಡನೇ ಇನ್ನಿಂಗ್ಸ್ ಆರಂಭಿಸಿದರು ‘ಶಕ್ತಿ ವಿಧಾತ ಚಿತ್ರಗಳಲ್ಲಿನ ಅವರ ಶ್ರೇಷ್ಠ ಅಭಿನಯದಿಂದ ಮತ್ತೊಮ್ಮೆ ಚಿತ್ರರಸಿಕರನ್ನು ರಂಜಿಸಿದ್ದರು ಅದರೆ ಖ್ಯಾತ ನಟಿ ರೇಖಾರೊಂದಿಗೆ ಅವರು ನಟಿಸಿದ ಕೊನೆಯ ಚಿತ್ರ ‘ಖಿಲಾ ಗಲ್ಲಾಪೆಟ್ಟಿಗೆಯಲ್ಲಿ ನೆಲಕ್ಕಚ್ಚಿದ್ದು ಕಲಾವಿದರೊಬ್ಬರ ದುರಂತ. ದುರಂತ ನಾಯಕನ ಚಿತ್ರರಂಗದ ಜೀವನಯಾತ್ರೆ ದರುಂತದಲ್ಲಿ ಕೊನೆಗೊಂಡಿದ್ದು ದುರಂತವಾಗಿದೆ.


ಲಾರೆನ್ಸ್ ಆಫ್ ಅರೇಬಿಯ ಹಾಗೂ ದಿ ರೈನ್ಸ್ ಕೇಮ್ ಹಾಲಿವುಡ್ ಚಿತ್ರಗಳಲ್ಲಿ ನಟಿಸುವ ಅವಕಾಶ ದೊರಕಿದಾಗ ನಿರಾಕರಿಸಿದ್ದರು.ಹಾಗೇ‘ ದೋ ಆಂಖೇ ಬಾರ್ ಹಾತ್ ಹಾಗೂ ಸಂಗಮ್ ಹಿಂದಿ ಚಿತ್ರಗಳಿಗೆ ಸಹಿ ಹಾಕಲು ನಿರಾಕರಿಸಿದ್ದರು ಆದರೆಈ ನಾಲ್ಕು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿದ್ದವು.
೫೦-೬೦ ದಶಕದಲ್ಲಿ ದಿಲೀಪ್ ಕುಮಾರ್,ರಾಜ್ ಕಾಪೂರ್ ದೇವಾನಂದ್ ಉನ್ನತ ಸ್ಥಾನದಲ್ಲಿ ಮೆರೆದು ಹಿಂದಿ ಚಿತ್ರರಂಗದ ಕೀರ್ತಿ ವಿಸ್ತರಿಸಲು ಸಹಕಾರಿಯಾಗಿದ್ದರು ಅದು ಹಿಂದಿ ಚಿತ್ರರಂಗದ ಸುವರ್ಣ ಯುಗ.
ದಿಲೀಪ್ ಕುಮಾರ್ ಸಿಟಿಜನ್ ಫಿಲಿಂಸ್ ನಿರ್ಮಿಸಿದ ಏಕೈಕ ಚಿತ್ರ ಗಂಗಾಜಮುನಾ ಭಾರತದಲ್ಲಿ ತಯಾರಾದ ಅತ್ಯುತ್ತಮ ಚಿತ್ರಗಳಲ್ಲೊಂದು ಎಂಬ ಮಾನ್ಯತೆ ಪಡೆದಿದೆ.ದಿಲೀಪ್ ಕುಮಾರ್ ಅಭಿನಯ ಅತ್ಯದ್ಬುತ ಎಂದೆನಿಸಿಕೊಂಡರೆ ನಾಯಕಿ ವೈಜಯಂತಿ ಮಾಲಾ ಅಭಿನಯವಂತೂ ಚಿರಸ್ಮರಣೀಯ.ಗಂಗಾಜಮುನಾ ಹಿಂದಿ ಚಿತ್ರರಂಗದಲ್ಲಿ


ದಿಲೀಪ್ ಕುಮಾರ್ ೧೯೬೬ ರಲ್ಲಿ ಖ್ಯಾನ ನಟ ಹಾಗೂ ಸೌಂದರ್ಯದ ಖಣಿ ಸೈರಾಬಾನು ಅವರನ್ನು ವಿವಾಹವಾದರು ಹಾಗೂ ದಿಲೀಪ್ ಕುಮಾರ್ ರ ವಯಸ್ಸು ೪೪ ಹಾಗೂ ಸೈರಾಭಾನುವಿನ ವಯಸ್ಸು ಕೇವಲ ೨೨ ೧೯೮೦ ರಲ್ಲಿ ಮಹಾರಾಷ್ಟ್ರ ಸರ್ಕಾರ ದಿಲೀಪ್ ಕುಮಾರ್ ಅವರಿಗೆ ಮುಂಬೈನಗರದ ಶರೀಪ್ ಹುದ್ದೆಯನ್ನು ನೀಡಿ ನೀಡಿ ಗೌರವಿಸಿತ್ತು ೨೭ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿ ಗಿನ್ನಿಸಿ ರೇಕಾರ್ಡ್‌ನಲ್ಲಿ ದಾಖಲೆಯಾದ ಸಾಧನೆ ದಿಲೀಪ್ ಕುಮಾರ್ ಅವರದ್ದಜು ೧೯೯೧ ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಗಳಿಸಿದ ದಿಲೀಪ್ ಕುಮಾರ್ ೧೯೯೧ ರಲ್ಲಿ ಪ್ರತಿಷ್ಠಿತ ದಾದಾಸಾಹೆಬ್ ಪ್ರಶಸ್ತಿಯನ್ನೂ ಗಳಿಸಿದರು ಅತಿಹೆಚ್ಚು ಫಿಲ್ಮ್‌ಫೇರ್ ಪ್ರಶಸ್ತಿ ಗಳಿಸಿ ದಾಖಲೆ ಸೃಷ್ಟಿಸಿದ ಅವರಿಗೆ ಸರ್ಕಾರ ೧೯೯೭ ರಲ್ಲಿ ಪ್ರತಿಷ್ಠಿತ ನಿಶಾನ್ ಏ ಇಂತಿಯಾಜ್ ಪ್ರಶಸ್ತಿ ನೀಡಿ ಗೌರವಿಸಿತ್ತು ಮೋಘಲ್ ಏ ಅಜೌಮ್ ಮಧುಮತಿ ದೇವದಾಸ್ ಆನ್ ಸಂಘರ್ಷ ಸಗೀನಾ,ನಯಾದೌರ್, ಆದ್ಮಿ,ರಾಂಜೌರ್‌ಶಾಂ ಗಂಗಾಜಮುನಾ,ಶಕ್ತಿವಿಧಾತ,ಮಶಾಲ್ ಚಿತ್ರಗಳಲ್ಲಿನ ಅವರ ಅಭಿನಯ ಚಿರಸ್ಮರಣೀಯ ಚಿತ್ರರಸರಕರು ದಿಲೀಪ್ ಕುಮಾರ್‌ರ ಈ ಚಿತ್ರಗಳನ್ನು ಟಿವಿಯಲ್ಲಿ ಪದೇ ಪದೇ ವೀಕ್ಷಿಸಿ ಆನಂದಿಸುತ್ತಿದ್ದಾರೆ ಉತ್ಕೃಷ್ಟ ಚಿತ್ರಗಳು ಶ್ರೇಷ್ಠ ಅಭಿನಯ ದಿಲೀಪ್ ಕುಮಾರ್‌ದ್ದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಕೇವಲ ಚಿತ್ರರಂಗದ ಬಗ್ಗೆ ಮಾತ್ರವಲ್ಲ ಇಡೀ ವಿಶ್ವದ ಬಗ್ಗೆ ಆಳವಾದ ಅಧ್ಯಯನ ಅವರದ್ದಾಗಿತ್ತು ಧರ್ಮ, ಇತಿಹಾಸ,ತತ್ವಜ್ಞಾನ,ಅರ್ಥಶಾಸ್ತ್ರ,ವಿಜ್ಞಾನ,ಕೃಷಿ ಹೀಗೆ ಅನೇಕ ಸಂಗತಿಗಳ ಬಗ್ಗೆ ಅವರದ್ದು ಅದ್ಬುತವಾದ ಜ್ಞಾನಬಂಡಾರ ವಿಶ್ವಚಿತ್ರರಂಗದಲ್ಲಿ ವಿವಿಧ ರೀತಿಗಳಲ್ಲಿ ದಿಲೀಪ್ ಕುಮಾರ್‌ವರನ್ನು ನೆನಪಿಸಿಕೊಳ್ಳಲಾಗುತ್ತದೆ ಚಿತ್ರರಂಗದಲ್ಲಿ ನಟರ ಅಭಿನಯದಲ್ಲಿ ಏನೆ ಪ್ರಗತಿಯಾಗಿದ್ದರು ಅದರ ಬೆನ್ನಿಗೆ ದಿಲೀಪ್ ಕುಮಾರ್ ಹಾಕಿಕೊಟ್ಟ ಭದ್ರಬುನಾದಿ ಇರುತ್ತದೆ ಎಂಬುದು ನಿರ್ವಿವಾದ.


ದಿಲೀಪ್ ಕುಮಾರ್ ಅವರ ಶಕ್ತಿನಟ ಶಕ್ತಿ ಇಂದಿಗೂ ದಾರಿದೀಪವಾಗಿ ನಿಂತಿದೆ. ೯೦ ವರ್ಷ ಪ್ರಾಯದ ದಿಲೀಪ್ ಕುಮಾರ್ ಚಿತ್ರರಂಗದೊಂದಿಗೆ ಸಂಪರ್ಕವಿರಿಸಿ ಕೊಂಡಿದ್ದರು. ಕೋಟ್ಯಂತರ ಚಿತ್ರರಸಿಕರ ಮನೆಗೆದ್ದು ವಿಶ್ವದ ಶ್ರೇಷ್ಠನಟರಲ್ಲೊಬ್ಬರು ಎಂದು ಮಾನ್ಯತೆ ಪಡೆದು ಭಾರತ ಚಿತ್ರರಂಗಕ್ಕೆ ಕೀರ್ತಿ ತಂದ ಮಹಾನ್ ನಟ ದಿಲೀಪ್ ಕುಮಾರ್ ಯಾವಾಗಲೂ ಅವಿಸ್ಮರಣೀಯ.

Girl in a jacket
error: Content is protected !!