ನಂದಿನಿ ಚುಕ್ಕೆಮನೆ
ಹುಣ್ಣಿಮೆ ಒಲವು ನನ್ನದು
ಮಳೆ -ಮಂಜು ಸುರಿದು
ಗಟ್ಟಿಯಾದ ಇಳೆ ಮೃದುವಾಗಿ
ಹೊಂಬೆಳಕಚಿಗುರು ಕಂಡ
ಹೊನಪ ಕುಡಿ ನನ್ನದು
ಹಾಲು ಮುಗಿಲ ತುಂಬಿ
ಬಣ್ಣದ ಕನಸುಗಳಲಿ
ಹೃದಯದ ಬಾಗಿಲ
ಎದುರಿಗೆ ಬಂದು
ಮಾತಾಡದೆ ಮಿಂಚಂತೆಹೋದ
ದಿವ್ಯಹುಣ್ಣಿಮೆ ಒಲವು ನನ್ನದು
ಹನಿ ನಿಂದಾಗ ಚಿನ್ನಕಾಂತಿಮುಗಿಲು ಕಡೆದು
ಕಂಗಳ ಕನ್ನಡಿ ಬಿಂಬದಲಿ
ಮೂಡಿದ ಸಪ್ತ ಸ್ವರಗಳ
ಮಳೆ ಬಿಲ್ಲ
ಚೆಲುವೆಲ್ಲ ನನ್ನದು
ಹಸಿರು ಶಿಖೆಯ ತಾಗಿ ಕೂತ
ಆಕಾಶ ನೀಲಿ ಚಿತ್ತಾರ ಕಳಿಸಿದ್ದ ಜಿಂಕೆ ಮುಖಬೆಡಗಿನ
ಭಾವ ಪ್ರತಿಮೆ
ನಲಿವು ಎಂದೆಂದಿಗೂ
ಸಹಿತ ನನ್ನದು
ಕಡಲು ಮಳೆಕಾಡ
ಉಸಿರಿನ ಹಸಿರು ಕಪ್ಪೆ ಮಿಡಿತ
ಹಳದಿ ಪಿಕಳಾರ ಸುರಗಾನದ ಜಪನನ್ನದು
ನೆನಪುಗಳು ಎದುರು ಬಂದು
ಜೀವಂತಿಕೆ ಮೂಡಿಸುವ ವಿಸ್ಮಯ ಸ್ವಪ್ನಗಳೆಲ್ಲ
ಎಂದೋ ಆಗಿದೆ ನನ್ನದು
ಮುಗಿಯದ ಮುಂಜಾನೆ ನದಿಯಾನ ಮೌನ ಪರಿಮಳದ ಜಾಜಿ ಮುತ್ತು ಮಲ್ಲಿಗೆಹೂ ಹಕ್ಕಿಹಾಡು ನನ್ನದು
ಬೆಳಕಿನ ಆಲಯದಿ ಯೋಗಿಯಂತೆ
ತಿಳಿ ಧ್ಯಾನಕೆ ಮೆಲ್ಲಗೆ ಸ್ಪರ್ಶಿಸಿ ಗೊತ್ತಾಗದಂತೆ ನಡೆದ
ರೂಪ ಕಾಂತಿಯ ಮೊದಲ ನಕ್ಷತ್ರ ನನ್ನದು