ಶ್ರೇಯಸ್.ಎಸ್.
ಗ್ರೇಡ್ 7 ,ಏಳನೇ ತರಗತಿ,ಲಿಬರ್ಟಿ ಪೈನಸ್ ಆಕಾಡೆಮಿ ಸ್ಕೂಲ್.ಜಾಕ್ಸೋನವಿಲೇ,ಪ್ಲೋರೈಡಾ.ಅಮೆರಿಕಾ
ಮೂಲ ಇಂಗ್ಲಿಷ್ – ಶ್ರೇಯಸ್.ಎಸ್.
ಅನುವಾದ- ತುರುವನೂರು ಮಂಜುನಾಥ
ಬದುಕಿನ ಸೋಪಾನ
ಬದುಕಿನ ಮೆಟ್ಟಿಲುಗಳನ್ನು ಹತ್ತುತ್ತಿದ್ದೇನೆ
ಆದರೆ,ಗಾಜಿನ ಮೆಟ್ಟಿಲುಗಳೋ.. ಮರದ ಮೆಟ್ಟಿಲುಗಳೋಗೊತ್ತಿಲ್ಲ.
ಆದರೂ ಹೆಜ್ಜೆ ಇಡುತ್ತಿದ್ದೇನೆ
ಅಲ್ಲಿ ತಿರುವುಗಳು, ಸರಳುಗಳು ಇದ್ದಾವು
ಎನ್ನುವ ನೋಟವೂ ನನ್ನದಲ್ಲ
ಎದೆಗುಂದದೆ ಸಾಗುತ್ತಿದ್ದೇನೆ..!
ಜೀವನವೇ ಹಾಗೆ ಪ್ರತಿಕ್ಷಣವೂ
ಮೆಟ್ಟಿಲೇರಲಾಗುವುದಿಲ್ಲಿ
ಹಿಂದಿನ ಜಾಣ್ಮೆ ಹೆಜ್ಜೆಯಂತೆ
ಮುಂದಿನ ಹೆಜ್ಜೆಯೂ ಸುಲಭವಲ್ಲ
ಕಷ್ಟವಾದರೂ ನಾಳಿನ ಹಾದಿಯ
ನೋಡಲು ಇಷ್ಟಪಟ್ಟರು ಅದು-
ಸಾಧ್ಯವಾಗುವುದು ಆ ಶಕ್ತಿಯಿಂದ|
ಹೆಜ್ಜೆ ಹೆಜ್ಜೆಗೂ ಜೀವನದ ಪಯಣ
ಸಾಗುತ್ತಿದ್ದರೂ ಎಲ್ಲೋ ಆಗುವ
ದುರಂತಗಳಿಗೆ ಎದೆಗುಂದದೆ ಸಾಗಬೇಕಿದೆ,
ಯಾಕೆಂದರೆ ಗಾಜಿನ ಮೆಟ್ಟಿಲುಗಳು ದೊಡ್ಡದಾಗಿ
ಬಿರುಕುಬಿಟ್ಟಂತೆ,ಮರದ ಮೆಟ್ಟಿಲುಗಳು ಗೆದ್ದಲುಹಿಡಿದಂತೆ
ನಾಳೆ ಎನ್ನುವ ನಿರೀಕ್ಷೆಗಳು ಪರೀಕ್ಷೆಯಾಗಬಹುದು|
ಕೊನೆಯ ಮೆಟ್ಟಿಲೇರಿ ನಿಂತಾಗ
ಇನ್ನೂ ಹತ್ತಲು ಇಚ್ಚೆಯಿದ್ದರೂ
ಮೆಟ್ಟಿಲುಗಳು ಇರುವುದಿಲ್ಲ,ಹಾಗೆಯೇ
ಮುಗಿದ ಮೇಲೆ ಜೀವನ ಯಾನ
ಬದುಕಿಗಿಲ್ಲ ಸ್ಥಾನ!