ನ ವದೆಹಲಿ,ಜೂ.12: ಕೊರೋನಾ ವೈರಸ್ ಚಿಕಿತ್ಸೆಗಾಗಿ ಬಳಸುವ ಉಪಕರಣ, ಔಷಧಿ, ಇಂಜೆಕ್ಷನ್ ಮೇಲಿನ ತೆರಿಗೆ ನಿರ್ಧರಿಸಲು ಕರೆದಿದ್ದ 44ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲಿ ದೇಶದಲ್ಲಿ ಹೆಚ್ಚಾಗುತ್ತಿರುವ ಬ್ಲಾಕ್ ಫಂಗಸ್ ಚಿಕಿತ್ಸೆಯ ಚುಚ್ಚು ಮದ್ದಿನ ಮೇಲಿನ ಜಿಎಸ್ ಟಿ ಯನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ.
ಕೌನ್ಸಿಲ್ ಸಭೆ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ನಿರ್ಧಾರಗಳನ್ನು ಘೋಷಿಸಿದರು. ಕೋವಿಡ್ ಸಂಬಂಧಿತ ಉಪಕರಣಗಳ ಮೇಲಿನ ತೆರಿಗೆ ಕಡಿತಗೊಳಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು.
ಚಿಕಿತ್ಸೆ ಸಂಬಂಧಪಟ್ಡ ಉಪಕರಣಗಳ ಮೇಲೆ ಜಿಎಸ್ ಟಿ ಕಡಿತ,ಬ್ಲಾಕ್ ಫಂಗಸ್ ಕಾಯಿಲೆ ಚುಚ್ಚುಮದ್ದಿನ ಮೇಲೆ ಯಾವುದೇ ಜಿಎಸ್ ಟಿ ಇಲ್ಲ,ಸೋಂಕಿತರ ಚಿಕಿತ್ಸೆಗೆ ಬಳಸುವ ವೆಂಟಿಲೇಟರ್ ಮೇಲಿನ ಜಿಎಸ್ ಟಿ ಶೇ 12 ರಿಂದ ಶೇ 5 ಕ್ಕೆ ಇಳಿಕೆ,ಬಡಿಕೆ ಹೆಚ್ಚಿರುವ ಆಯಂಬುಲೆನ್ಸ್ ಮೇಲಿನ ಜಿಎಸ್ ಟಿ ಶೇ 12 ಕ್ಕೆ ಇಳಿಕೆ ಮಾಡಲಾಗಿದೆ.
ಎಲೆಕ್ಟ್ರಿಕ್ ಫರ್ನಾನೆನ್ಸ್ ಮತ್ತು ಟೆಂಪರೇಚರ್ ಪರಿಶೀಲನಾ ಸಾಧನಗಳ ಮೇಲಿನ ಜಿಎಸ್ ಟಿ ಶೇ.5ಕ್ಕೆ ಇಳಿಕೆ,ರೆಮ್ಡಿಸಿವಿರ್ ಲಸಿಕೆ ಮೇಲಿನ ಜಿಎಸ್ ಟಿ ದರವನ್ನು ಶೇ.12 ರಿಂದ 5ಕ್ಕೆ ಇಳಿಕೆ
ಟೊಸಿಲಿಜುಮಾಬ್, ಆಂಫೊಟೆರಿಸಿನ್ ಔಷಧ ಮೇಲೆ ಯಾವುದೇ ತೆರಿಗೆ ಇಲ್ಲ,ಲಸಿಕೆಯ ಮೇಲೆ ಶೇ.5 ರಷ್ಟು ಜಿಎಸ್ ಟಿ ಮುಂದುವರಿಕೆ ಮಾಡಲಾಗಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಲಸಿಕೆ ನೀತಿ ಪ್ರಕಾರ ಶೇಕಡಾ 75 ರಷ್ಟು ಲಸಿಕೆಯನ್ನು ಕೇಂದ್ರ ಖರೀದಿಸಿ ರಾಜ್ಯಗಳಿಗೆ ಹಂಚಲಿದೆ. ಶೇಕಡಾ 75 ರಷ್ಟು ಲಸಿಕೆ ಖರೀದಿಯಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ಪಾವತಿಸಲಿದೆ. ಈ ಜಿಎಸ್‌ಟಿ ಮೊತ್ತವನ್ನು ರಾಜ್ಯಗಳಿಗೆ ಹಂಚಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.