ದಕ್ಷಿಣ ಆಫ್ರಿಕ ಮತ್ತು ಗಾಂಧೀಜಿಯ ಧಾರ್ಮಿಕತೆ

Share

ಗಾಂಧಿ ಎನ್ನುವ ಮಹಾತ್ಮನನ್ನು ನಾವು ನೆನಸಿಕೊಳ್ಳುವುದು ಕೇವಲ ಅವರ ಜಯಂತಿ ಮತ್ತು ಹುತ್ಮಾತದಿನ ಬಿಟ್ಟರೆ ಮತ್ತೇ ಅವರ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡುವುದಿಲ್ಲ ಮಾಡಿದರೆ ಅದು ವಿಚಾರದಾರೆಗಳು ಅವರ ಸೈದ್ದಾಂತಿಕ ವಿಷಯಗಳ ಬಗ್ಗೆ ಪ್ರಸ್ತಾಪಗಳು ನಡೆಯುತ್ತಿರುತ್ತವೆ ಆದರೆ ದಕ್ಷಿಣ ಆಫ್ರಿಕಾದಲ್ಲಿ ಪ್ರತಿವರ್ಷ ಈ ಸಮಯದಲ್ಲಿ ನೆನಪು ಮಾಡಿಕೊಳ್ಳುತ್ತಾರೆ ಇನ್ನೊಂದು ವಿಶೇಷ ಎಂದರೆ ೧೮೯೩ ರಲ್ಲಿ ಅಲ್ಲಿನ ಪೀಟರ‍್ಮಾರ್ಟಿಸ್‌ಬರ್ಗನಲ್ಲಿ ರೈಲಿನಿಂದ ಹೊರತಳ್ಳಿದ ವಿಚಾರ ಇದೆಯಲ್ಲ ಇದರ ಬಗ್ಗೆ ಒಂದು ಗಂಭೀರ ಚರ್ಚೆಗಳು ನಡೆಯುತ್ತವೆ. ಯಾಕೆಂದರೆ ಆ ಘಟನೆಯಿಂದಲೇ ಗಾಂಧಿ ಅವರಲ್ಲಿ ಅಹಿಂಸಾ ಸತ್ಯಾಗ್ರಹದ ಬೀಜ ಮೊಳಕೆ ಹೊಡೆಯಲು ಕಾರಣವಾಯಿತು ಎನ್ನುವುದು ಹೀಗಾಗಿ ಅಲ್ಲಿ ಪ್ರತಿ ವರ್ಷ ಗಾಂಧಿ ಹಬ್ಬವನ್ನೇ ಆಚರಿಸುತ್ತಾರೆ.


ಇನ್ನೂ ಈ ಬಾರಿ ಈ ಘಟನೆ ಅಂದರೆ ಗಾಂಧಿ ಅವರನ್ನು ರೈಲಿನಿಂದ ಹೊರತಳ್ಳಿದ ವಿಚಾರ ಕುರಿತು ವಿಶ್ವವ್ಯಾಪಿ ಚರ್ಚೆಗಳು ನಡೆಯುತ್ತಿವೆ ಕೆಲವರು ಅವರ ಸೈದ್ದಾಂತಿಕ ನಿಲುವುಗಳು ಅವರ ಶಾಂತಿ ಮತ್ರವನ್ನು ವಿರೋಧಿಸಷ್ಟರ ಮಟ್ಟಿಗೆ ವಿಚಾರವನ್ನು ಪ್ರಸ್ತಾಪ ಮಾಡಲಾಗುತ್ತಿದೆ ಇದು ಏನೇ ಇರಲಿ ದಕ್ಷಿಣ ಆಫ್ರಿಕದಲ್ಲಿ ಗಾಂಧಿ ನಡೆಸಿದ ಅಧ್ಯಯನ ಮತ್ತು ಅಲ್ಲಿನ ಕೆಲ ಘಟನೆಗಳು ನಿಜಕ್ಕೂ ಅವರ ಜೀವನ ಬದಲಾವಣೆಗೆ ಕಾರಣವಾಗಿದ್ದು.
೧೮೯೩ರ ಜೂ.೭ರಂದು ಗಾಂಧಿ ಅವರನ್ನು ರೈಲಿನಿಂದ ಹೊರದಬ್ಬಲು ಕಾರಣವಾದ ವಿಚಾರವನ್ನು ಪ್ರತಿ ವರ್ಷ ಪ್ರಚುರ ಪಡಿಸಲು ಪೀಟರ‍್ಮಾರ್ಟಿಜ್‌ಬರ್ಗ್ ಗಾಂಧಿ ಮೆಮೊರಿಯಲ್ ಸಮಿತಿ ತೀರ್ಮಾನಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಡೇವಿಡ್ ಗೆಂಗನ್ ತಿಳಿಸಿದ್ದಾರೆ.
೨೧ ವರ್ಷಗಳ ಕಾಲ ದಕ್ಷಿಣ ಆಫ್ರಿಕಾದಲ್ಲಿದ್ದ ಸಂದರ್ಭದಲ್ಲೇ ಗಾಂಧಿ ಅವರಲ್ಲಿ ಶಾಂತಿ ಮತ್ತು ಅಹಿಂಸೆ ಎಂಬ ತತ್ವಜ್ಞಾನದ ಅರಿವಾಗಿದ್ದು, ಇದರ ಸ್ಮರಣಾರ್ಥ ಪ್ರತಿವರ್ಷ ಅವರನ್ನು ರೈಲಿನಿಂದ ಹೊರದಬ್ಬಿದ ರೈಲು ನಿಲ್ದಾಣದಲ್ಲೇ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವು ಹೇಳಿದ್ದಾರೆ.


ಈ ಬಾರಿ ಈ ವಿಷಯ ಕುರಿತು ಪ್ರಸ್ತಾಪ ವಿಷಯದಲ್ಲಿ ವಿಶ್ವವ್ಯಾಪಿ ಮತ್ತೆ ಚರ್ಚೆಗೆ ಬರುತ್ತಿದೆ
ಇದರ ನೆಪದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯ ಮುಂದೆ ಆದ ಘಟನೆಗಳು ಮತ್ತು ಅವರಿಂದ ಸತ್ಯ ಮತ್ತು ಅಹಿಂಸೆಗಳ ಪ್ರತಿಪಾದನೆಗಳಿಗೆ ಬಗ್ಗೆ ಬೆಳಕು ಚೆಲ್ಲಲಾಗುತ್ತಿದೆ:

ದಕ್ಷಿಣ ಆಫ್ರಿಕಾಕ್ಕೆ ೧೮೯೩ರಲ್ಲಿ ತೆರಳಿದ್ದ ಅನನುಭವಿ, ಹಿಂಜರಿಕೆಯ ಸ್ವಭಾವದ ಯುವಕ ಮುಂದಿನ ಎರಡು ದಶಕಗಳಲ್ಲಿ ಆಧುನಿಕ ನಾಗರಿಕತೆಯ ಅತ್ಯಂತ ತೀಕ್ಷ್ಣ ವಿಮರ್ಶಕನಾಗಿ, ಸತ್ಯ ಮತ್ತು ಅಹಿಂಸೆಗಳ ಅಧ್ವರ್ಯುನಾಗಿ ಸತ್ಯಾಗ್ರಹದ ಅನ್ವೇಷಕನಾಗಿ, ಪರ್ಯಾಯ ಸಮುದಾಯಗಳನ್ನು ಕಟ್ಟುವ ಪ್ರಯೋಗಶೀಲನಾಗಿ, ಮನುಷ್ಯಸ್ವಭಾವದ ಸೂಕ್ಷ್ಮಗಳನ್ನು ಅರಿತವರಾಗಿ, ಎಲ್ಲ ವರ್ಗದ ಜನರನ್ನು ಸಂಘಟಿಸಿ ಶಾಂತಿಯುತ ರಾಜಕೀಯ ಚಳವಳಿಗಳನ್ನು ನಡೆಸಬಲ್ಲ ಸಂಘಟಕನಾಗಿ ಹೊರ ಹೊಮ್ಮಿದ್ದರು. ೧೯೧೫ರವರೆಗಿನ ತಮ್ಮ ವಯಸ್ಕ ಬದುಕಿನ ಬಹುಭಾಗವನ್ನು ಭಾರತದಾಚೆಗೆ ಕಳೆದಿದ್ದ ಗಾಂಧೀಜಿ ಭಾರತಕ್ಕೆ ಮರಳಿದಾಗ ಪೂರ್ಣವಾಗಿ ರೂಪುಗೊಂಡಿದ್ದ ವ್ಯಕ್ತಿತ್ವವಾಗಿದ್ದರು ಮಾತ್ರವಲ್ಲ, ಬಹುಶಃ ಬೇರಾವ ಆಧುನಿಕ ಭಾರತೀಯನೂ ಕ್ರಮಿಸದ ಪಥದಲ್ಲಿ ಚಲಿಸಿದ್ದರು. ಗಾಂಧೀ ಭಾರತವನ್ನು ಮತ್ತು ಹೆಚ್ಚು ನಿರ್ದಿಷ್ಟವಾಗಿ ಅದರ ಧಾರ್ಮಿಕ ಪರಂಪರೆಗಳನ್ನು ಅರಿತ ಬಗೆಯನ್ನು. ಭಾರತದ ಜನಾಂಗೀಯ, ಧಾರ್ಮಿಕ, ಭಾಷಿಕ ಮತ್ತು ವರ್ಗೀಯ ವೈವಿಧ್ಯತೆಯನ್ನು ದಕ್ಷಿಣ ಆಫ್ರಿಕಾದಲ್ಲಿದ್ದ ಭಾರತೀಯ ಕೂಲಿಕಾರ ಸಮುದಾಯವನ್ನು ಸಂಘಟಿಸುವಾಗ ನೋಡಿದರು. ಭಾರತದ ಸಾರ್ವಜನಿಕ ಜೀವನದಲ್ಲಿ ಭಾಗವಹಿಸಿದ್ದರೆ ಗಾಂಧೀಜಿಗೆ ಒಂದು ಪ್ರಾಂತ್ಯಕ್ಕೆ ಸೀಮಿತರಾಗಬೇಕಾದ ಅನಿವಾರ್ಯತೆ ಇರುತ್ತಿತ್ತು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಭಾರತದ ಮೈಕ್ರೊಕಾಸಮ್ ದೊರಕಿದ್ದು ಭಾರತೀಯ ಮೂಲದ ಎಲ್ಲರನ್ನೂ ಸಂಘಟಿಸುವ ಅನಿವಾರ್ಯತೆ ಇದ್ದುದು ಭಾರತದ ವಾಸ್ತವವನ್ನು ಅರಿಯಲು ಮತ್ತಷ್ಟು ಸಹಕಾರಿಯಾಯಿತು. ಜತೆಗೆ ದೂರದ ದಕ್ಷಿಣ ಆಫ್ರಿಕಾದಲ್ಲಿ ಇತರ ನಾಯಕರ ಒತ್ತಡವಿಲ್ಲದೆ ತಮ್ಮ ರಾಜಕೀಯ ಪ್ರಯೋಗಗಳನ್ನು ನಡೆಸುವುದು ಕೂಡ ಸಾಧ್ಯವಾಗಿತ್ತು.


ಇದೇ ರೀತಿಯಲ್ಲಿ ಭಾರತೀಯ ಧಾರ್ಮಿಕ ಪರಂಪರೆಗಳು, ಧರ್ಮಗ್ರಂಥಗಳ ಅಧ್ಯಯನ ಮಾಡುವಾಗಲೂ ಗಾಂಧೀಜಿ ತಮ್ಮದೇ ದಾರಿಯನ್ನು ಕಂಡುಕೊಂಡರು. ಬಾಲ್ಯದಲ್ಲಿ ಪುರಾಣದ ಕಥೆಗಳ ಮತ್ತು ಅವರ ಸಮುದಾಯದ ಧಾರ್ಮಿಕ ಆಚರಣೆಗಳ ಪ್ರಾಥಮಿಕ ತಿಳಿವಳಿಕೆ ಪಡೆದಿದ್ದೆ. ಗಾಂಧೀಜಿ ಗಂಭೀರವಾಗಿ ಧರ್ಮಗ್ರಂಥಗಳ ಅಭ್ಯಾಸ ಮಾಡಿದ್ದು ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾಗಳಲ್ಲಿ. ಇದನ್ನು ಜೀವನ ಪರ್ಯಂತ ಮುಂದುವರೆಸಿದರೂ ಸಹ. ಆದರೆ ಈ ಅಧ್ಯಯನ ಪಾಶ್ಚಾತ್ಯರೊಡನೆ, ಇತರೆ ಧರ್ಮಗಳ ಗುರುಗಳ ಜತೆಗೆ ಸಹ ನಡೆಯಿತು. ಧರ್ಮಗ್ರಂಥಗಳ ಆಯ್ಕೆಯಲ್ಲಿ ಸಹ ಹಿಂದೂ ಧರ್ಮಕ್ಕೆ ಅವರು ಸೀಮಿತರಾಗಿರಲಿಲ್ಲ. ಇಸ್ಲಾಂ ಮತ್ತು ಕ್ರೈಸ್ತ ಧರ್ಮಗ್ರಂಥಗಳನ್ನು ಅಭ್ಯಸಿಸಿದರು. ಇಲ್ಲಿ ಗಮನಾರ್ಹ ಅಂಶವೆಂದರೆ ಸಂಪ್ರದಾಯವಾದಿ ಹಿಂದೂ ಪಂಡಿತರಿಂದ ಧಾರ್ಮಿಕ ಜ್ಞಾನ ಪಡೆಯದ ಗಾಂಧೀಜಿ ತಮ್ಮ ಛ್ಚ್ಝಿಚ್ಚಠಿಜ್ಚಿ ಅಧ್ಯಯನದ ಮೂಲಕ ತಮ್ಮದೇ ಆದ ಅರ್ಥ ವಿವರಣಾ ವಿಧಾನವನ್ನು ಬೆಳಸಿಕೊಂಡಿದ್ದರು. ಸ್ವತಃ ಅವರೇ ತಮ್ಮನ್ನು ‘ಸನಾತನಿ ಹಿಂದೂ’ ಎಂದು ಕರೆದುಕೊಂಡರೂ ಕೂಡ ಯಾವ ಸಂಪ್ರದಾಯವಾದಿ ಹಿಂದೂ ಸಹ ಅವರಿಗೆ ಆ ಸ್ಥಾನವನ್ನು ನೀಡಲು ಸಿದ್ಧರಾಗುತ್ತಿರಲಿಲ್ಲ. ಗಾಂಧೀಜಿಯವರ ಗೀತೆಯ ಮೇಲಿನ ವ್ಯಾಖ್ಯಾನವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅವರ ಭಿನ್ನ ಸಂವೇದನೆ ಸ್ಪಷ್ಟವಾಗುತ್ತದೆ. ಅಂಬೇಡ್ಕರರಂತೆ ಹಿಂದೂ ಧರ್ಮವನ್ನು ತ್ಯಜಿಸಲು ಗಾಂಧೀಜಿ ಸಿದ್ಧರಿರಲಿಲ್ಲ. ಆದರೆ ಅದರ ಮರುವ್ಯಾಖ್ಯಾನವನ್ನು ತಮ್ಮ ವೈಯಕ್ತಿಕ ನೆಲೆಯಲ್ಲಿ ಮಾಡಲು ಉತ್ಸುಕರಾಗಿದ್ದರು. ಹಾಗಾಗಿಯೇ ‘ಜಾತಿ ವಿನಾಶ’ಕ್ಕೆ ಸಂಬಂಧಿಸಿದ ೧೯೩೦ರ ದಶಕ ಮಧ್ಯಭಾಗದಲ್ಲಿ ಅವರಿಬ್ಬರ ನಡುವೆ ನಡೆದ ಚರ್ಚೆಯಲ್ಲಿ ಗಾಂಧಿ ಧರ್ಮಗ್ರಂಥಗಳ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ತಳೆಯುವ ನಿಲುವು ತುಂಬ ಮುಖ್ಯವಾದುದು. ತನ್ನ ಆತ್ಮಸಾಕ್ಷಿಗೆ ಸರಿಯೆನ್ನಿಸುವುದು ಮಾತ್ರ ಧರ್ಮಗ್ರಂಥವಾಗಿದ್ದು, ಪರಂಪರೆ ಗುರುತಿಸುವ ಕೃತಿಗಳಲ್ಲ ಎಂದು ಅವರು ವಾದಿಸುತ್ತಾರೆ. ಹೀಗೆ ವೈಯಕ್ತಿಕ ನೆಲೆಯಲ್ಲಿ ಶಾಸ್ತ್ರಗ್ರಂಥಗಳ ಸ್ಥಾನ ನಿರ್ಧರಿಸುವ ಆಶಯವನ್ನು ಸನಾತನ ಹಿಂದೂ ಧರ್ಮವಿರಲಿ, ಯಾವ ವ್ಯವಸ್ಥಿತ ಧರ್ಮದ ವಕ್ತಾರರೂ ಒಪ್ಪುವುದಿಲ್ಲ.


ಇಪ್ಪತ್ತನೆಯ ಶತಮಾನದ ಬಲಪಂಥೀಯ ಹಿಂದೂ ಕಲ್ಪನೆಯಲ್ಲಿ ಗಾಂಧಿ ಖಳನಾಯಕರಾಗಲು ಅವರ ವ್ಯಕ್ತಿತ್ವ ಮತ್ತು ಸಂವೇದನೆಗಳು ರೂಪುಗೊಂಡ ವಿಧಾನವೇ ಕಾರಣ ಎಂದು ನನಗನ್ನಿಸುತ್ತದೆ. ತಮ್ಮ ಹಲವು ಸಮಕಾಲೀನರಂತೆ ಹಿಂದೂ ಧರ್ಮವನ್ನು ಎಡಪಂಥೀಯ ನೆಲೆಯಿಂದ ನೋಡಲಿಲ್ಲ. ಬದಲಿಗೆ ತಮ್ಮ ಧಾರ್ಮಿಕ ಸಂವೇದನೆಯೊಳಗೆ ಆತ್ಮಸಾಕ್ಷಿ ಮತ್ತು ಶ್ರದ್ಧೆ ಎರಡಕ್ಕೂ ಸ್ಥಳ ಕಲ್ಪಿಸಿಕೊಂಡಿದ್ದರು.
ಇತ್ತೀಚಿನ ದಿನಗಳಲ್ಲಿ ನಾಥೂರಾಮ್ ಗೋಡ್ಸೆಯ ವಿಜೃಂಭಣೆ ಪ್ರಾರಂಭವಾಗಿರುವುದು ಆಶ್ಚರ್ಯದ ಮಾತಲ್ಲ. ಗೋಡ್ಸೆ ದೇಶಭಕ್ತ ಎನ್ನುವ ಸಾಕ್ಷಿ ಮಹಾರಾಜ್, ಮಹಾತ್ಮರ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಹಿಂದೂ ಮಹಾಸಭೆಯ ಆಚಾರ್ಯ ಮದನ್ ಎಚ್ಚರ ತಪ್ಪಿ ಮಾತನಾಡುತ್ತಿಲ್ಲ. ಹಲವಾರು ದಶಕಗಳ ಕಾಲ ಮೆಲುಕು ಹಾಕಿ ತೀರ್ಮಾನಕ್ಕೆ ಬಂದಿರುವ ವಿಚಾರ?ಗಳನ್ನು ಸಾರ್ವಜನಿಕವಾಗಿ ಅಭಿವ್ಯಕ್ತಿಸುತ್ತಿದ್ದಾರೆ. ಆ ಕಾರಣದಿಂದಲೇ ದೇಶವಿಭಜನೆ ವೇಳೆಯ ಹಿಂಸೆಯ ಹೊಣೆಯನ್ನು ಗಾಂಧೀಜಿಯರ ಮೇಲೆ ಹಾಕಿ, ಮುಸ್ಲಿಮ?ರನ್ನು ಮತ್ತು ಪಾಕಿಸ್ತಾನವನ್ನು ಓಲೈಸುತ್ತಿದ್ದ ರಾಷ್ಟ್ರಪಿತ ಕೂಡ ಅನಿವಾರ್ಯ ಬಲಿ ಎನ್ನುವ ನಿಲುವು ತಳೆಯುವುದು. ಗೋಡ್ಸೆಯ ವಿಜೃಂಭಣೆ ಇಂದು ಆತನಿಗೆ ದೇವಸ್ಥಾನ ಕಟ್ಟುವುದರಲ್ಲಿ ಪರ್ಯಾವಸಾನ ಹೊಂದುತ್ತಿದೆ. ಮೋದಿ ಯುಗದ ಹಿಂದೂ ಕಲ್ಪನೆಯಲ್ಲಿ ಗಾಂಧೀಜಿ ನಾವಿಂದು ಅಳಿಸಬೇಕಾಗಿರುವ ಒಂದು ದೋಷರೇಖೆ ಮಾತ್ರ. ಇದರೊಡಗಿನ ಮತ್ತೆರಡು ಅಂಶಗಳು ಧರ್ಮಪರಿವರ್ತನೆ ಮತ್ತು ಪ್ರಾಚೀನ ಭಾರತದಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಸಾಧನೆಗೆ ಸಂಬಂಧಿಸಿದುದು.

ಭಾರತೀಯ ಜ್ಞಾನಪರಂಪರೆಗಳ, ಸಂಸ್ಕೃತ ಹಾಗೂ ದೇಶಿ ಭಾಷೆಗಳೆರಡರಲ್ಲೂ ಗಂಭೀರ ಅಧ್ಯಯನವಾಗಬೇಕೆಂಬ ನಂಬಿಕೆ ವಾದ, ಅದರ ಅಧ್ಯಯನದ ಮಾದರಿಗಳನ್ನು ನಾವು ಸೃಜಿಸಬಹುದು ಎಂದೂ ಧರ್ಮಗ್ರಂಥಗಳ ಅಧ್ಯಯನದ ಮಾದರಿಯೊಂದನ್ನು ಗಾಂಧೀಜಿ ಒದಗಿಸುತ್ತಾರೆ. ಈ ಹೊಸ ಚರ್ಚೆಯ ಸಂದರ್ಭದಲ್ಲಿ ಯಾವುದು ಸಂಬದ್ಧ, ಯಾವುದು ಅಸಂಬದ್ಧ ಎಂದು ನಿರ್ಧರಿಸಲು ಯಾವುದೇ ತಾರ್ಕಿಕವಾದ ಚಿಂತನಕ್ರಮಕ್ಕೆ ಒಪ್ಪಲು ಸಿದ್ಧರಿಲ್ಲದವರ ಗುಂಪೊಂದು ಸಿದ್ಧವಾಗುತ್ತಿದೆ. ಒಂದೆಡೆ ಪ್ರಧಾನಿ ನರೇಂದ್ರ ಮೋದಿಯವರು ಗಾಂಧಿ ರಾಜಕಾರಣದ ಭಾಷೆ ಹಾಗೂ ಸಂಕೇತಗಳನ್ನು ಅಧಿಕಾರಕ್ಕೆ ಬಂದ ನಂತರ ಪದೇ ಪದೆ ಬಳಸುತ್ತಿದ್ದಾರೆ. ‘ಅಭಿವೃದ್ಧಿ’ಯೊಂದೇ ತನ್ನ ಮೂಲಮಂತ್ರ ಎನ್ನುತ್ತಾರೆ. ಗಾಂಧೀ ರಾಜಕಾರಣದ ಭಾಷೆ ಬಳಸುವ ಮೋದಿ ಗಾಂಧಿ ಚಿಂತನಾಕ್ರಮ, ಮುಕ್ತತೆ ಅಥವಾ ಪ್ರಯೋಗಶೀಲತೆಯನ್ನು ತಮ್ಮದಾಗಿಸಿಕೊಂಡಿದ್ದರೆ ಭಾರತದ ಬಗೆಗೆ ಭಿನ್ನವಾಗಿ ಯೋಚಿಸುತ್ತಿದ್ದರೇನೊ. ಇಂದಿನ ಅಂಕಣವನ್ನು ಗಾಂಧೀಜಿಯವರೊಡನೆ ಪ್ರಾರಂಭಿಸಿದ್ದು ಅವರ ವ್ಯಕ್ತಿತ್ವ, ಸಂವೇದನೆ ಮತ್ತು ಅರಿವು ರೂಪುಗೊಂಡಿದ್ದು ವಿಶ್ವಾತ್ವಕವಾಗಿ ಎಂದು ಗುರುತಿಸಲು. ನಮ್ಮ ಇಂದಿನ ಹೊಸ ಬಿಕ್ಕಟ್ಟಿನಿಂದ ಹೊರಬರಲು ದಾರಿಗಳೂ ಇಂತಹ ಮಾದರಿಗಳಲ್ಲಿಯೇ ಬಹುಶಃ ಇರುವುದು.

Girl in a jacket
error: Content is protected !!