ನವದೆಹಲಿ,ಜೂ,೨೦: ಅಂತರಾಷ್ಟ್ರೀಯ ಯೋಗ ದಿನದ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಳಿಗ್ಗೆ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಏಳನೇ ಅಂತರಾಷ್ಟ್ರೀಯ ಯೋಗದಿನವಾಗಿದ್ದು ಕೋವಿಡ್-೧೯ ಹಿನ್ನೆಯಲ್ಲಿಯಲ್ಲಿ ಯೋಗದಿನದ ಪ್ರಧಾನ ಸಮಾರಂಭ ಬೆಳಿಗ್ಗೆ ೬.೧೫ಕ್ಕೆ ಆರಂಭವಾಗಲಿದ್ದು ಈ ಸಮಾರಂಭದಲ್ಲಿ ಮೋದಿ ಭಾಷಣ ಮಾಡಲಿದ್ದು ಇದರ ನೇರಪ್ರಸಾರವನ್ನು ದೂರದರ್ಶನ ತನ್ನ ಎಲ್ಲಾ ವಾಹಿನಿಗಳಲ್ಲಿ ಪ್ರಸಾರ ಮಾಡಲಿದೆ
ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಸಹ ಭಾಷಣ ಮಾಡಲಿದ್ದಾರೆ. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯಲ್ಲಿ ನಡೆಯಲಿರುವ ಯೋಗ ಪ್ರದರ್ಶನದ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ ಎಂದು ಸರ್ಕಾರದ ಮಾಹಿತಿ ತಿಳಿಸಿದೆ.
ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಕೋವಿಡ್ ಹಿನ್ನೆಲೆಯಲ್ಲಿ ದೂರದರ್ಶನ ಕಾರ್ಯಕ್ರಮವಾಗಿ ಆಯೋಜಿಸಲಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣ ಪ್ರಮುಖ ಅಂಶವಾಗಿರಲಿದೆ.
ಜನರು ತಮ್ಮ ಮನೆಗಳಲ್ಲಿ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸುತ್ತಾ ಕಾರ್ಯಕ್ರಮದ ಭಾಗವಾಗಬಹುದು. ಪ್ರಧಾನಿ ಭಾಷಣದ ನಂತರ ಯೋಗ್ಯಾಭ್ಯಾಸದ ಪ್ರದರ್ಶನವೂ ಪ್ರಸಾರವಾಗಲಿದೆ.
೭ನೇ ಅಂತರಾಷ್ಟ್ರೀಯ ಯೋಗದಿನ ನಾಳೆ-ಮೋದಿ ಭಾಷಣ
Share