ಬೆಂಗಳೂರು, ಜು,07:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎರಡನೇ ಅವಧಿಯಲ್ಲಿ ಮೊದಲ ಬೃಹತ್ ಸಂಪುಟ ಪುನಾರಚನೆಗೆ ಮುಂಚಿತವಾಗಿ ಸಚಿವರಾದ ಡಿವಿ ಸದಾನಂದಗೌಡ, ಸಂತೋಷ್ ಗಂಗ್ವಾರ್, ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಮತ್ತು ದೇಬಶ್ರೀ ಚೌಧರಿ ಅವರು ಇಂದು ರಾಜೀನಾಮೆ ನೀಡಿದರು.
ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ ಸೋನೊವಾಲ್, ನಾರಾಯಣ್ ರಾಣೆ ಮತ್ತು ಪಶುಪತಿ ನಾಥ್ ಪರಾಸ್ ಅವರಂತಹ ಹೆಸರುಗಳು ಹೊಸ ಸಂಪುಟ ಸೇರ್ಪಡೆಯಾಗಲಿದೆ ಎಂಬುದಾಗಿ ಕೇಳಿ ಬರುತ್ತಿದೆ.
ಕೇಂದ್ರ ಸಚಿವ ಸಂಪುಟ ಪುನರಚನೆಯ ಸಮಯ ಸಮೀಪಿಸುತ್ತಿರುವಾಗಲೇ, ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕೇಂದ್ರ ಶಿಕ್ಷಣ ಸಚಿವರಾಗಿದ್ದಂತ ರಮೇಶ್ ಪೋಖ್ರಿಯಾಳ್ ಅವರು, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಬಲ್ಲ ಮೂಲಗಳ ಪ್ರಕಾರ 43 ನೂತನ ಸಚಿವರು ಇಂದು ಮೋದಿ ಕ್ಯಾಬಿನೆಟ್ ಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ.