ಮುಂಬೈ,ಜೂ.೨೨– ಕೆಲಸ ಮುಗಿಸಿ ತೆರಳೂತ್ತಿದ್ದ ಮಹಿಳಾ ವಿಮಾನಯಾನ ಪೈಲಟ್ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉಬರ್ ಕ್ಯಾಬ್ ಚಾಲಕ ಮತ್ತು ಇತರ ಇಬ್ಬರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಕಳೆದ ಗುರುವಾರ ರಾತ್ರಿ ೧೧.೧೫ ರ ಸುಮಾರಿಗೆ ಮಹಿಳೆ ದಕ್ಷಿಣ ಮುಂಬೈನಿಂದ ಘಾಟ್ರೋಪರ್ನಲ್ಲಿರುವತನ್ನ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳೆಯ ಪತಿ ನೌಕಾಪಡೆಯ ಅಧಿಕಾರಿ, ಆದರೆ ಅವರಿಗೆ ಇನ್ನೂ ಸರ್ಕಾರಿ ವಸತಿ ಸಿಗದ ಕಾರಣ, ಮಹಿಳೆ ಘಾಟ್ರೋಪರ್ನಲ್ಲಿ ವಾಸಿಸುತ್ತಿರು.ಗುರುವಾರ ರಾತ್ರಿ ದಕ್ಷಿಣ ಮುಂಬೈನ ರೆಸ್ಟೋರೆಂಟ್ನಲ್ಲಿ ಊಟ ಮಾಡಿದ ನಂತರ, ಆಕೆಯ ಪತಿ ಆಕೆಗಾಗಿ ಉಬರ್ ಸವಾರಿಯನ್ನು ಬುಕ್ ಮಾಡಿದ್ದಾರೆ.
ಮಹಿಳೆಯ ಪ್ರಕಾರ, ಪ್ರಯಾಣದ ೨೫ ನಿಮಿಷಗಳ ನಂತರ ಕ್ಯಾಬ್ ಚಾಲಕ ಮಾರ್ಗವನ್ನು ಬದಲಾಯಿಸಿದನು ಮತ್ತು ಇಬ್ಬರು ಪುರುಷರನ್ನು ಕ್ಯಾಬ್ನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟನು.ತನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ತನ್ನನ್ನು ಅನುಚಿತವಾಗಿ ಮುಟ್ಟಿದ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಆಕೆ ಕೂಗಿಕೊಂಡಾಗ ಆತ ಆಕೆಗೆ ಬೆದರಿಕೆ ಹಾಕಿದನು, ಆದರೆ ಕ್ಯಾಬ್ ಚಾಲಕ ಮಧ್ಯಪ್ರವೇಶಿಸಲಿಲ್ಲ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಸ್ವಲ್ಪ ದೂರ ಹೋದ ನಂತರ, ಹೆದ್ದಾರಿಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿರುವುದನ್ನು ಆರೋಪಿಗಳು ಗಮನಿಸಿದ ಇಬ್ಬರು ಪುರುಷ ಪ್ರಯಾಣಿಕರಿಬ್ಬರೂ ಕ್ಯಾಬ್ ನಿಂದ ಹೊಗೆ ಇಳಿಒದು ಓಡಿಹೋದರು ಎಂದು ಮಹಿಳೆ ಹೇಳಿದರು.
ಮಹಿಳೆ ಮನೆಗೆ ತಲುಪಿದಳು. ಆದರೆ ಆಕೆ ಕೇಳಿದಾಗ, ಇಬ್ಬರು ಪುರುಷರನ್ನು ಕ್ಯಾಬ್ನಲ್ಲಿ ಕುಳಿತುಕೊಳ್ಳಲು ಏಕೆ ಅವಕಾಶ ನೀಡಿದರು ಎಂಬುದರ ಕುರಿತು ಚಾಲಕ ಯಾವುದೇ ವಿವರಣೆಯನ್ನು ನೀಡಲಿಲ್ಲ ಎಂದು ಅವರು ಹೇಳಿದರು.
ಮರುದಿನ ಬೆಳಿಗ್ಗೆ ತನ್ನ ಪತಿಗೆ ಘಟನೆಯನ್ನು ವಿವರಿಸಿದ ನಂತರ, ದಂಪತಿಗಳು ಘಾಟ್ಟೋಪರ್ ಪೊಲೀಸರಿಗೆ ದೂರು ನೀಡಿದರು.ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.