ನವದೆಹಲಿ, ಮೇ,08-ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ಒಂಬತ್ತು ಉಗ್ರನೆಲೆಗಳ ಮೇಲೆ ದಾಳಿ ನಂತರ ರಾಷ್ಟ್ರೀಯ ಭದ್ರತಾ ಸಲೆಗಾರ ಅಜಿತ್ ಧೋವಲ್ ತಂಡ ಇಂದು ಪ್ರಧಾನಿ ಮೋದಿ ಅವರನ್ನು ಬೇಟಿಯಾಗಿ ಚರ್ಚಿಸಿದರು.
ಪಾಕಿಸ್ತಾನ ನಿನ್ನೆ ಶೆಲ್ ದಾಳಿ ನಡೆಸಿದ್ದು ಈ ದಾಳಿಯಲ್ಲಿ 15 ಕಾಶ್ಮೀರ ನಾಗರಿಕರು ಸಾವನ್ನಪ್ಪಿದ್ದು ಈ ಕುರಿತು ಮಾಹಿತಿ ನೀಡಿದರು.
ಜಮ್ಮು ಕಾಶ್ಮೀರದ ಪರಿಸ್ಥಿತಿ ಜಮ್ಮುಕಾಶ್ಮೀರ ಗಡಿಯಲ್ಲಿ ಪಾಕ್ ಗುಂಡಿನ ದಾಳಿ 14ನೇ ದಿನವೂ ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ ಕುರಿತು ಅಜಿತ್ ಧೋವೆಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹಾಗೆಯೇ ಮುಂದಿನ ಕ್ರಮಗಳ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.