ನವದೆಹಲಿ,ಮೇ,12-ಪಾಕಿಸ್ತಾನ ಉಗ್ರರನ್ನು ಬೆಂಬಲಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಪಾಕ್ ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತದೆ ಎಂದು ಮೂವರು ಸೇನಾಧಿಕಾರಿಗಲಕು ತಿಳಿಸಿದ್ದಾರೆ.
ಏರ್ ಡಿಫೆನ್ಸ್ ಸಿಸ್ಟಮ್ ತಯಾರಾಗಿತ್ತು ಪಾಕಿಸ್ತಾನದ ಡ್ರೋನ್ ಗಳನ್ನು ಉಡೀಸ್ ಮಾಡಿದ್ದೇವೆ. ಆಪರೇಷನ್ ಸಿಂಧೂರಿಗೆ ತಯಾರಿ ಮಾಡಿಕೊಂಡಿದ್ದೆವು. ಉಗ್ರ ದಾಳಿಗೆ ಪ್ರತಿಯಾಗಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದೇವೆ. ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ ಎಂದು ಈ ಕುರಿತು ಸೇನಾಧಿಕಾರಿಗಳು ಸಾಕ್ಷಿ ಸಮೇತ ವಿಡಿಯೋ ತೋರಿಸಿದರು. ತಂತ್ರಜ್ಞಾನದ ಕ್ಷಿಪಣಿ ಬಳಸಿ ಚೀನಾ ನಿರ್ಮಿತ ಪಾಕಿಸ್ತಾನದ ಏರ್ ಡಿಫೆನ್ಸ್ ಅನ್ನು ಹೊಡೆದುರುಳಿಸಿದ್ದೇವೆ. ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಭಾರತೀಯ ವಾಯು ಸೇನೆಯ ಮುಖ್ಯಸ್ಥ ಅವಧೆಶ್ ಕೆ.ಭಾರ್ತಿ ಮಾತನಾಡಿ, ಭಾರತೀಯ ಸೇನೆಯ ಹೋರಾಟ ಉಗ್ರರ ವಿರುದ್ಧ ಇದೆ.ಉಗ್ರರಿಗೆ ಪಾಕಿಸ್ತಾನ ಕುಮ್ಮಕ್ಕೂ ನೀಡುತ್ತಿದೆ. ಮೇ 7 ರಂದು ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದೇವೆ. ನಮ್ಮ ಹೋರಾಟ ಪಾಕಿಸ್ತಾನ ಸೇನೆಯ ವಿರುದ್ಧ ಅಲ್ಲ ಭಾರತೀಯ ಸೇನೆಯ ಹೋರಾಟ ಏನಿದ್ದರೂ ಉಗ್ರರ ವಿರುದ್ಧ ಮಾತ್ರ. ಆದರೆ ಪಾಕಿಸ್ತಾನ ಮಾತ್ರ ಉಗ್ರರಿಗೆ ಕುಮ್ಮಕ್ಕು ನೀಡುತ್ತಿದೆ ಎಂದರು.
ಏರ್ ಫೈನ್ಸ್ ಫೈಟರ್ ಮಿಸೈಲ್ ಬಳಸಿ ದಾಳಿ ಮಾಡಿದ್ದೇವೆ. ಸರ್ಫೇಸ್ ಟು ಸರ್ಫೇಸ್ ಟು ಮೂಲಕ ದಾಳಿ ಮಾಡಿದ್ದೇವೆ. ಪಾಕಿಸ್ತಾನ ಸೇನೆಯು ಉಗ್ರರಿಗೆ ಸಹಕಾರ ಮತ್ತು ನೆರವು ನೀಡುತ್ತಿದೆ, ಉಗ್ರರ ನೆಲೆಗಳನ್ನು ಹುಡುಕಿ ನಾವು ಹೊಡೆದಿದ್ದೇವೆ. ಭಾರತೀಯ ಸೇನೆಯ ಹೋರಾಟ ಉಗ್ರರ ವಿರುದ್ಧ ಮಾತ್ರ. ಚೀನಾದ ಪಿ ಎಲ್-15 ಮಿಸೆಲ್ ಬಳಸಿ ಪಾಕಿಸ್ತಾನ ದಾಳಿ ನಡೆಸಿತ್ತು. ಭಾರತದ ರೋಬೋಟ್ ಸಿಸ್ಟಮ್ ನಿಂದ ತಕ್ಕ ಪ್ರತ್ಯುತ್ತರ ನೀಡಿದ್ದು, ಚೀನಾ ನಿರ್ಮಿತ ಪಾಕಿಸ್ತಾನದ ಕ್ಷಿಪಣಿಯನ್ನು ಧ್ವಂಸಗೊಳಿಸಿದ್ದೇವೆ. ಚೀನಾ ನಿರ್ಮಿತ ಶಸ್ತ್ರ ರಹಿತ ಡ್ರೋನ್ ಗಳನ್ನು ಧ್ವಂಸಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಒಂದು ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಭಾರತೀಯ ವಾಯುಪಡೆಯ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಹಾಗು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.