ಕೋವಿಡ್ ಶೀಲ್ಡ್,ಕೋವ್ಯಾಕ್ಸಿನ್ ಖರೀದಿ ಕುರಿತ ಅಂಕಿ- ಅಂಶ ಸಲ್ಲಿಸಲು ಕೇದ್ರಕ್ಕೆ ಸುಪ್ರೀಂ ಆದೇಶ

Share

ನವದೆಹಲಿ,ಜೂ,02: ಕೊರೊನಾ ಸೋಂಕಿತ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಖರೀದಿ ಮಾಡಿರುವ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ V ಲಸಿಕೆಗಳ ಅಂಕಿ-ಸಂಖ್ಯೆಗಳ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಎರಡು ವಾರಗಳಲ್ಲಿ ಎಲ್ಲಾ ವಿವರಗಳನ್ನೂ ಪ್ರಮಾಣಪತ್ರದಲ್ಲಿ ಸಲ್ಲಿಸುವಂತೆ ಕೋರ್ಟ್ ಹೇಳಿದೆ. ಸಂಗ್ರಹ ಮಾಡಿರುವ ಲಸಿಕೆಗಳ ದಿನಾಂಕ, ಸಂಗ್ರಹಕ್ಕೆ ಆದೇಶ ನೀಡಿದ ದಿನಾಂಕ, ಲಸಿಕೆಗಳ ಪ್ರಮಾಣ ಸಹಿತ ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು ಕೋರ್ಟ್ ಹೇಳಿದೆ.

ಇನ್ನು ಶೇಕಡವಾರು ಜನಸಂಖ್ಯೆಗೆ ನೀಡಿರುವ ಲಸಿಕೆಯ ವಿವರಗಳನ್ನೂ ಕೋರ್ಟ್ ಕೇಳಿದೆ. ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ಎಲ್ ನಾಗೇಶ್ವರ್ ರಾವ್, ಎಸ್ ರವೀಂದ್ರ ಭಟ್ ಅವರಿದ್ದ ಪೀಠ ಕೋವಿಡ್-19 ನಿರ್ವಹಣೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿತ್ತು.

ಮೇ.31 ರಂದು ಕೋರ್ಟ್ ಈ ಆದೇಶ ನೀಡಿದ್ದು, ಜೂ.02 ರಂದು ಬಹಿರಂಗಗೊಂಡಿದೆ. ಇದೇ ವೇಳೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೂ ಲಸಿಕೆಗಳನ್ನು ಉಚಿತವಾಗಿ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಹೇಳಿದೆ.

Girl in a jacket
error: Content is protected !!