ನವದೆಹಲಿ, ಜು,03-ಕರ್ನಾಟಕದ ಉಡುಪಿ ಮೂಲಕ ಹತ್ತಕ್ಕೂ ಹೆಚ್ಚು ದೇಶಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ದೆಹಲಿ ಪೊಲೀಸರು ಬೇದಿಸಿದ್ದು ಈ ಸಂಬಂಧ 10 ಮಂದಿಯನ್ನು ಬಂದಿಸಿದ್ದಾರೆ.
ಉಡುಪಿ ಸೇರಿದಂತೆ ದೇಶದ ಹಲವು ನಗರಗಳ ಮೂಲಕ 10 ಕ್ಕೂ ಹೆಚ್ಚು ದೇಶಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಬೃಹತ್ ಮಾದಕ ವಸ್ತು ಜಾಲವನ್ನು ಮಾದಕ ವಸ್ತು ನಿಗ್ರಹ ದಳ ಬಯಲಿಗೆಳೆದಿದೆ.
ಈ ಸಂಬಂಧ 10 ಮಂದಿಯನ್ನು ಬಂಧಿಸಿದ್ದು, ಬೃಹತ್ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಉಡುಪಿಯಲ್ಲೇ ಆರೋಪಿಗಳು ಕಾಲ್ ಸೆಂಟರ್ ಸ್ಥಾಪಿಸಿ ಡ್ರಗ್ಸ್ ವ್ಯವಹಾರ ನಡೆಸುತ್ತಿತ್ತು ಎನ್ನಲಾಗಿದೆ. ಉಡುಪಿ ಸೇರಿ ದೇಶದ 4 ಊರುಗಳ ಮೂಲಕ ಈ ಕಾರ್ಯಾಚರಣೆ ನಡೆಯುತ್ತಿತ್ತು. ದೆಹಲಿ, ಜೈಪುರ, ಉಡುಪಿ, ರೂರ್ಕಿಯಲ್ಲಿ ಸೇರಿ 8 ಮಂದಿಯನ್ನು ಬಂಧಿಸಲಾಗಿದೆ.
ಈ ಡ್ರಗ್ಸ್ ಗ್ಯಾಂಗ್ ಉಡುಪಿಯಲ್ಲೇ ಕಾಲ್ ಸೆಂಟರ್ ಸ್ಥಾಪಿಸಿ ಆ ಮೂಲಕ ಡ್ರಗ್ಸ್ ವ್ಯವಹಾರದ ಕಾರ್ಯಾಚರಣೆ ನಡೆಸುತ್ತಿತ್ತು. ಕಾಲ್ ಸೆಂಟರ್ನಲ್ಲಿ 10 ಜನರನ್ನು ನೇಮಿಸಿಕೊಂಡು ಆರ್ಡರ್ ಪಡೆಯುವುದು ಸೇರಿ ವಿವಿಧ ವ್ಯವಹಾರಗಳನ್ನು ಗ್ಯಾಂಗ್ ನಡೆಸುತ್ತಿತ್ತು.
ಜಾಗತಿಕ ಮಾದಕ ದ್ರವ್ಯ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದಕ್ಕಾಗಿ ಎನ್ಸಿಬಿ ಮತ್ತು ಎಲ್ಲಾ ಸಂಸ್ಥೆಗಳಿಗೆ ಅಭಿನಂದನೆಗಳು. ತನಿಖೆಯು ಬಹು-ಸಂಸ್ಥೆಗಳ ಸಮನ್ವಯಕ್ಕೆ ಒಂದು ಅದ್ಭುತ ಉದಾಹರಣೆಯನ್ನು ನೀಡಿತು, ಇದರ ಪರಿಣಾಮವಾಗಿ 8 ಮಂದಿಯನ್ನು ಬಂಧಿಸಿ ಮತ್ತು 5 ಸರಕುಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು 4 ಖಂಡಗಳು ಮತ್ತು 10+ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುವ ಈ ಜಾಲದ ವಿರುದ್ಧ ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಯಿತು.
ಈ ಗ್ಯಾಂಗ್ಗಳು ಬಳಸುವ ಕ್ರಿಪ್ಟೋ ಪಾವತಿಗಳು ಮತ್ತು ಅನಾಮಧೇಯ ಡ್ರಾಪ್ ಶಿಪ್ಪರ್ಗಳಂತಹ ಅತ್ಯಾಧುನಿಕ ವಿಧಾನಗಳನ್ನು ನಮ್ಮ ಸಂಸ್ಥೆಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿವೆ. ಪ್ರಧಾನಿ ಮೋದಿಜಿ ನೇತೃತ್ವದ ಸರ್ಕಾರವು ಪ್ರತಿಯೊಂದು ಮಾದಕ ದ್ರವ್ಯ ಕಳ್ಳಸಾಗಣೆ ಜಾಲವನ್ನು ಕಡಿತಗೊಳಿಸಲು ಮತ್ತು ನಮ್ಮ ಯುವಕರನ್ನು ಅವರು ಎಲ್ಲಿಂದ ಕಾರ್ಯನಿರ್ವಹಿಸಿದರೂ ರಕ್ಷಿಸಲು ದೃಢನಿಶ್ಚಯ ಹೊಂದಿದೆ ಎಂದು ಟ್ವೀಟ್ ಮಾಡಿದ್ದಾರೆ.