ಕೊಲ್ಕತ್ತಾ ,ಮೇ ,೨೨: ತೌತೆ ಚಂಡಮಾರುತದ ಅವಾಂತರ ನಂತರ ಈ ಮತತೊಂದು ಚಂಡಮಾರುತ ಅಪ್ಪಳಿಸಲು ಸಜ್ಜಾಗಿದೆ ಮೇ ೨೬ ರಿಂದ ಯಾಸ್ ಚಂಡಮಾರುತ ಈಗ ಕರಾವಳಿ ಪ್ರದೇಶಗಳಲ್ಲಿ ಅಪ್ಪಳಿಸುವ ಸುಳಿವನ್ನು ನೀಡಿರುವ ಅವಮಾನ ಇಲಾಖೆಮೇ ೨೩ ರಿಂದ ಇದು ಆರಂಭವಾಗಲಿದ್ದು ಮೇ ೨೬ ರವರೆಗೂ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.
ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಈ ಚಂಡಮಾರುತದಿಮದ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು ಸೂಕ್ತ ಎಚ್ಚರಿಕೆಯನ್ನು ನೀಡಿದೆ ಅಲ್ಲದೆ ಹೈ ಅಲಾರ್ಟ ಕೂಡ ಘೋಷಿಸಿದೆ.
ಪಶ್ಚಿಮ ಬಂಗಾಳ, ಒರಿಸ್ಸಾ, ತಮಿಳುನಾಡು, ಗೋವಾ ಸೇರಿದಂತೆ ಕರಾವಳಿ ತೀರದ ರಾಜ್ಯಗಳಲ್ಲಿ ಯಾಸ್ ಚಂಡಮಾರುತದ ಆರ್ಭಟವಿರಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮೇ ೨೬ರಂದು ಯಾಸ್ ಚಂಡಮಾರುತ ಪಶ್ಚಿಮ ಕರಾವಳಿಯ ರಾಜ್ಯಗಳಿಗೆ ಅಪ್ಪಳಿಸಲಿದೆ. ಹೀಗಾಗಿ, ಕಡಲ ತೀರದ ಪ್ರದೇಶಗಳಲ್ಲಿ ಮೇ ೨೬ರವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಯಾಸ್ ಚಂಡಮಾರುತದ ಅಬ್ಬರ ತೀವ್ರವಾಗಿರಲಿದೆ ಎಂಬ ಕಾರಣಕ್ಕೆ ಈಗಾಗಲೇ ಎನ್ಡಿಆರ್ಎಫ್, ಕೋಸ್ಟಲ್ ಗಾರ್ಡ್, ಐಎನ್ಎಸ್ ಚಿಲಿಕಾಗೆ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಸನ್ನದ್ಧರಾಗಿರಲು ಸೂಚಿಸಿದೆ. ಮೇ ೨೬ರಂದು ಯಾಸ್ ಚಂಡಮಾರುತ ಅಪ್ಪಳಿಸುವುದರಿಂದ ಈಗಾಗಲೇ ಭಾರೀ ಮಳೆ ಶುರುವಾಗಿದ್ದು, ಪಶ್ಚಿಮ ಬಂಗಾಳ, ಗುಜರಾತ್, ಒರಿಸ್ಸಾ, ಗೋವಾದ ಎಲ್ಲ ಕರಾವಳಿ ತೀರದ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.