3ನೇ ಅಲೆಗೆ ಆಮ್ಲಜನಕ ಸೇರಿದಂತೆ ಎಲ್ಲಾ ವೈದ್ಯಕೀಯ ಸೌಂಕರ್ಯಗಳ ಸಿದ್ದತೆ ಮಾಡಿಕೊಂಡ ಕೇಂದ್ರ

Share

ನವದೆಹಲಿ,ಜು10: ಕೋವಿಡ್‌–19ರ ಎರಡನೇ ಅಲೆ ಸಂದರ್ಭದಲ್ಲಿ ಆದ ಕೆಲ ವೈದ್ಯಕೀಯ ಸೌಕರ್ಯಗಳ ತೊಂದರೆಯಿಂದ ಪಾಠ ಕಲೆತ ಕೇಂದ್ರ ಈಗ ಮೂರನೇ ಅಲೆ ಮುಂಜಾಗೃತೆ ವಹಿಸಿ ಬೇಕಾದ ಎಲ್ಲಾ ಸೌಕರ್ಯಗಳಿಗೆ ಮುಂದಾಗಿದೆ.

ದೇಶದಾದ್ಯಂತ ವೈದ್ಯಕೀಯ ಆಮ್ಲಜನಕ ಪೂರೈಕೆ ಹೆಚ್ಚಳದ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ್ದಾರೆ. 1500ಕ್ಕೂ ಹೆಚ್ಚು ಪಿಎಸ್‌ಎ ಮಾದರಿಯ ಆಮ್ಲಜನಕ ಉತ್ಪಾದನೆ ಘಟಕಗಳು ಶೀಘ್ರವೇ ಕಾರ್ಯಾರಂಭ ಮಾಡಲಿವೆ ಎಂಬ ಮಾಹಿತಿಯನ್ನು ಪ್ರಧಾನಿಗೆ ಅಧಿಕಾರಿಗಳು ನೀಡಿದ್ದಾರೆ. ಈ ಘಟಕಗಳ ಮೂಲಕ, ನಾಲ್ಕು ಲಕ್ಷ ಹಾಸಿಗೆಗಳಿಗೆ ಆಮ್ಲಜನಕ ಒದಗಿಸಬಹುದು ಎಂದು ಹೇಳಲಾಗಿದೆ.
ದೇಶದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಈ ಘಟಕಗಳು ತಲೆ ಎತ್ತಲಿವೆ. ಪಿಎಂ–ಕೇರ್ಸ್‌ ನಿಧಿ, ವಿವಿಧ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಮೂಲಕ ಈ ಘಟಕಗಳ ವೆಚ್ಚವನ್ನು ಭರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಎಸ್‌ಎ ಮಾದರಿಯ ಆಮ್ಲಜನಕ ಉತ್ಪಾದನೆ ಘಟಕಗಳನ್ನು ಆರಂಭಿಸಬೇಕು. ರಾಜ್ಯ ಸರ್ಕಾರಗಳ ಜತೆಗಿನ ಸಮನ್ವಯದಲ್ಲಿ ಆದಷ್ಟು ಬೇಗನೆ ಇವುಗಳ ಕೆಲಸ ಆರಂಭ ಆಗಬೇಕು ಎಂದು ಪ್ರಧಾನಿ ಮೋದಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಆಮ್ಲಜನಕ ಘಟಕಗಳ ನಿರ್ವಹಣೆಗೆ ಆಸ್ಪತ್ರೆ ಸಿಬ್ಬಂದಿಗೆ ತರಬೇತಿ ನೀಡಬೇಕು. ಪ್ರತಿ ಜಿಲ್ಲೆಯಲ್ಲಿಯೂ ತರಬೇತಿ ಪಡೆದ ಸಿಬ್ಬಂದಿ ಇರಬೇಕು ಎಂದು ಮೋದಿ ಸೂಚಿಸಿದ್ದರು.

Girl in a jacket
error: Content is protected !!