24 ಗಂಟೆಯಲ್ಲಿ 3,11,170 ಕೊರೊನಾ ಪ್ರಕರಣಗಳು ದಾಖಲು

Share

ನವದೆಹಲಿ,ಮೇ,16: ಕೋವಿಡ್-19 ಹೊಸ ಪ್ರಕರಣಗಳ ಸಂಖ್ಯೆ ದೇಶಾದ್ಯಂತ ಹೆಚ್ಚುತ್ತಲೇ ಇದ್ದು ಕಳೆದ 24ಗಂಟೆಯಲ್ಲಿ 3,11,170 ಪ್ರಕರಣಗಳನ್ನು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 2.46 ಕೋಟಿಗೆ ತಲಪಿದೆ ಈ ವೇಳೆ 4,077 ಸಾವುಗಳು ವರದಿಯಾಗಿವೆ.
ಮೇ 16 ರ ಭಾನುವಾರ ಬೆಳಿಗ್ಗೆ 6 ರಿಂದ ಮೇ 30 ರವರೆಗೆ ಸಂಜೆ 6 ರಿಂದ ಪಶ್ಚಿಮ ಬಂಗಾಳ ಸರ್ಕಾರವು ಹದಿನೈದು ದಿನಗಳವರೆಗೆ ರಾಜ್ಯದಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಇಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದ್ದು ಪ್ರತಿ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಇರಲಿದೆ.

ತಮಿಳುನಾಡಿನಲ್ಲಿ ಶನಿವಾರ 33,658 ಹೊಸ ಪ್ರಕರಣಗಳು ವರದಿ ಆಗಿದ್ದು 303 ಸಾವು ಸಂಭವಿಸಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಒಟ್ಟು ಸೋಂಕಿತರ ಸಂಖ್ಯೆ 15,65,035 ಆಗಿದೆ. 20,905 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ 4,32,344 ಮಂದಿ ಸಾವಿಗೀಡಾಗಿದ್ದಾರೆ.

ಮಹಾರಾಷ್ಟ್ರದಲ್ಲಿ 34,848ಹೊಸ ಸೋಂಕು ಪ್ರಕರಣ, 960 ಸಾವು
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 34,848 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 59,073 ಮಂದಿ ಚೇತರಿಸಿಕೊಂಡಿದ್ದಾರೆ.960 ಸಾವು ಸಂಭವಿಸಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,94,032 ಆಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 3,677ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 2,40,467ಕ್ಕೇರಿದೆ. ಶನಿವಾರ 63 ಮಂದಿ ಸಾವಿಗೀಡಾಗಿದ್ದು ಈವರೆಗೆ 3,090 ಮಂದಿ ಮೃತಪಟ್ಟದ್ದಾರೆ.

ಹೆಚ್ಚು ಪ್ರಕರಣ ದಾಖಲಾದ ರಾಜ್ಯಗಳು:
ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳು– ಕರ್ನಾಟಕ- 41,664 ಪ್ರಕರಣಗಳು, ಮಹಾರಾಷ್ಟ್ರ -34,848 ಪ್ರಕರಣಗಳು, ತಮಿಳುನಾಡು -33,658 ಪ್ರಕರಣಗಳು, ಕೇರಳ – 32,680 ಪ್ರಕರಣಗಳು ಮತ್ತು ಆಂಧ್ರಪ್ರದೇಶ 22,517 ಪ್ರಕರಣಗಳನ್ನು ದಾಖಲಿಸಿದೆ. ಈ ಐದು ರಾಜ್ಯಗಳಿಂದ 53.15% ಹೊಸ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ ಮಾತ್ರ ಶೇ 13.39 ಹೊಸ ಪ್ರಕರಣಗಳಿಗೆ ಕಾರಣವಾಗಿದೆ.

Girl in a jacket
error: Content is protected !!